ಬಾಳ ಪಥ

ಬಾಳ ಪಥ

ಕವನ

ಚೈತ್ರನಾಗಮನದ 
ಸುಳಿವು ತೋರುತಿರೆ 
ತರು-ಲತಾದಿಗಳು
ಮೈ-ಪುಳಕಗೊಂಡಿವೆ 
 
ಗೆಲುವು ತೋರಿವೆ 
ಸಿಂಗರಿಸಿ ಕೊಂಡಿವೆ 
ಮುಗುಳು ನಕ್ಕಿವೆ 
ನಸು-ಬಾಗಿ
ತುಸು-ಓರೆಯಾಗಿವೆ..
 
ಹುದುಗಿದೆದೆಯ-ಭಾವವು 
ಸೂರೆಗೊಂಡಿದೆ-ಗಾನವು
ಆಹಾ! ಚೆಲವು ಪರಿಸರವು...
ಹೇಳಲಾಗದ ಆಹ್ಲಾದವೂ 
 
ಚಳಿ-ಗಾಳಿ-ಮಳೆಗೆ 
ಅನುಗುಣವಾಗಿ 
ಹೂವಾಗಿ-ಕಾಯಾಗಿ 
ಮಾಗುವುದೊಮ್ಮೆ...
ನುರಿತು-ನೆರೆತು
ಏನಿಲ್ಲವಾದೀತು?
 
ಇದು ಮುಂದೊಮ್ಮೆ 
ಅನಂತ ಪಥದಲಿ ಧೂಳಾಗಿ
ಹೇಳ ಹೆಸರಿಲ್ಲವಾಗಿ 
ಮರೆಯಾಯಿತೊಮ್ಮೆ...

Comments