ನೀನಾರು ನಿನ್ನೊಳಿನ ವಾಸ್ತವ್ಯವೇನು ?!

ನೀನಾರು ನಿನ್ನೊಳಿನ ವಾಸ್ತವ್ಯವೇನು ?!

ಕವನ

ನೀನಾರು ನಿನ್ನೊಳಿನ ವಾಸ್ತವ್ಯವೇನು ?
ಈ ಧರೆಗೆ ಬಂದು ನೀ ಮೊದಲ ಶ್ವಾಸವ ತೋರಿ .... 
ಅತ್ತರೂ ಎಲ್ಲರಿಗೆ ನಗೆಮೊಗವ ತಂದೆ । 
ಒಡನಾಡಿ ಎಲ್ಲರೊಡ ಬಾಂಧವ್ಯದಲಿ ಬೆಸೆದು.. 
ಕಷ್ಟ-ಸುಖಗಳೊಲಾಡಿ ಅರಿವಿಕೆಯ ಬೆಳೆಸಿ... 
ಬಾಂಧವ್ಯಗಳನುಳಿಸಲೆಂದೆಣಿಸಿ ತುಡಿದೆ ... 
ಶಾಶ್ವತವ ತಿಳಿಯಲಾಗರಿವು ಮೂಡದೆಯೆ
ಎಷ್ಟು ತೈದರು ಮನವ ದೇಹವಿದನೆಷ್ಟು ಸವೆಸಿದರೂ 
ಗುರುವಿನಾಸರೆಯಿಲ್ಲದೆನಿತು ಶ್ರಮಿಸಿದರೇನು.. 
ಕಾನನದಿ ಅರಿಯದೆಯೆ ಗೋಳನಿಟ್ಟಂತೆ..
ಗರ್ಭ ಸಾಗರದಲ್ಲಿ ತೊಳಲಾಡಿ ಜನಿಸಿ ... 
ಈ ಧರೆಯ ಬಣ್ಣಗಳ ಕಣ್ತೆರೆದು ನೋಡಿ ।।
ವಿಷಯಬಂಧನಕೆಲ್ಲ ಮನವೊಡ್ಡಿ ಬೆಳೆದು.. 
ಕಂಡ ವಾಸ್ತವವೆಲ್ಲ ನಿಜವೆಂದು ಭ್ರಮಿಸಿ ।।
ಕ್ಷಣತೀರೆ ಅಳಿಯುವ ಹಿತಗಳಿಗೆ ಮನಸೋತು... 
ಸುಖವಿದುವೆ ಎನ್ನುತಲಿ ಭ್ರಮಿಸಿ ನಿಂತಿರುವೆ ।।
ಕರುಣೆಯೇ ಮೈತಳೆದು ನಿಂತ ಪ್ರೇಮದರೂಪ .... 
ಪದವರಿಯೆ ಪಥತೋರಿ ಸಲಹು ಗುರುವೆ !!

Comments