ಶರಣಾಗದಿರು ಸಾವಿಗೆ!
ಕವನ
ಅನ್ನ ನೀಡುವವ ನೀನು
ನೀನೆ ಮಣ್ಣು ಸೇರಿದರೆ?
ನಿಜವಾಗಿಯು ನಿನ್ನಷ್ಟು ಶ್ರೀಮಂತರಾರು ಇಲ್ಲ ಜಗದಲಿ
ಒಂದೊಂದು ಕಾಳಿನ ಮೇಲೆ ಒಬ್ಬೊಬ್ಬರ ಹೆಸರಿರುವಂತೆ
ಎಲ್ಲರಿಗೂ ಹಂಚುವವನು ನೀನು
ನೀ ಕೊಟ್ಟ ಭಿಕ್ಷೆ ನಮಗೆಲ್ಲ ಅನ್ನ
ನಿಜವಾದ ಭಿಕ್ಷುಕರು ನಾವು
ನಮ್ಮ ದೇಶದ ಬೆನ್ನೆಲುಬು ನೀನು
ನೀನೆ ಇಲ್ಲದಿದ್ದರೆ ಹೇಗೆ?
ನೀನೆ ಕೈಬಿಟ್ಟರೆ
ಯಾರ ಹೊಟ್ಟೆಗೂ ಹಿಟ್ಟಿಲ್ಲ
ಜಗವೆಲ್ಲ ಉಪವಾಸ
ಪ್ರಕೃತಿಯ ವಿಕೋಪವೇ ನಿನಗೆ ಪೈಪೋಟಿ
ಛಳಿ, ಮಳೆ, ಗಾಳಿ, ಬಿಸಿಲು, ಭೂಕಂಪ
ಇವುಗಳಿಗ್ಯಾವುದಕ್ಕೂ ಅಂಜದ ನೀನು
ತೃಣಮಾತ್ರ ಸಾಲಕ್ಕಂಜಿ
ನೇಣಿಗೆ ಶರಣಾಗುವುದು ನಿನಗೆ ಸರಿಯೇ? ಛೇ!!
Comments
ಉ: ಶರಣಾಗದಿರು ಸಾವಿಗೆ!
ಆಡಳಿತ ಮತ್ತು ಸಾಮಾಜಿಕ ವ್ಯವಸ್ಥೆಗೆ ಕಾಉಕಲ್ಪವಾಗಬೇಕಿದೆ.