ಅನ್ಯಂ ಇಂದ್ರಂ ಕರಿಷ್ಯಾಮಿ ಎನ್ನುವ ನವ ವಿಶ್ವಾಮಿತ್ರರು !
ಪುರಾಣದಲ್ಲೆಲ್ಲೋ ನೀವು ವಿಶ್ವಾಮಿತ್ರನು ಒಬ್ಬ ರಾಜನನ್ನು ದೇಹದೊಂದಿಗೆ ಸ್ವರ್ಗಕ್ಕೆ ಕಳಿಸಲು ಯತ್ನಿಸಿ ವಿಫಲವಾದದ್ದನ್ನು , ಆ ರಾಜನಿಗೆ ಇಂದ್ರನು ಸ್ವರ್ಗದ ಒಳಗೆ ಬರಲು ಬಿಡದೆ ತಳ್ಳಿ , ಆ ರಾಜನು ತ್ರಿಶಂಕು ಸ್ಥಿತಿಯಲ್ಲಿ ಇರಬೇಕಾಗಿ ಬಂದು , ವಿಶ್ವಾಮಿತ್ರನು ಸಿಟ್ಟಿಗೆದ್ದು "ಮತ್ತೊಬ್ಬ ಇಂದ್ರನನ್ನೇ ಸೃಷ್ಟಿಸುತ್ತೇನೆ, ಅಥವಾ ಜಗಕ್ಕೆ ಮಹೇಂದ್ರನೇ ಇಲ್ಲದಂತೆ ಮಾಡುತ್ತೇನೆ! " ಎಂದು ಅಂದದ್ದನ್ನು ಓದಿರಬಹುದು. ಅಂಥ ವಿಶ್ವಾಮಿತ್ರನಂಥ ಮಹನೀಯರು ಅನೇಕರಿದ್ದಾರೆ !
ಒಂದು ಚಂದಮಾಮಾ ಕತೆಯಲ್ಲಿ ಓದಿದಂತೆ ಒಬ್ಬ ರಜಪೂತ ರಾಜನು ಯಾವುದೋ ಒಂದು ಕೋಟೆಯನ್ನು ಗೆಲ್ಲಬಯಸಿ ಅದನ್ನು ಗೆಲ್ಲುವವರೆಗೆ ಊಟ ಮಾಡುವುದಿಲ್ಲ ಎಂದು ಪ್ರತಿಜ್ನೆ ಮಾಡುತ್ತಾನೆ! ಆ ಕೋಟೆ ಗೆಲ್ಲಲು ಅನೇಕ ದಿನ ಆದರೂ ಅದನ್ನು ಗೆಲ್ಲುವದಾಗುವುದಿಲ್ಲ ! ಮತ್ತೆ ಇನ್ನೇನು ಗತಿ ? ರಾಜನ ಗೌರವ ಕಾಪಾಡಲು ಉಳಿದವರು ಒಂದು ಉಪಾಯ ಮಾಡುತ್ತಾರೆ . ಅದೇ ಹೆಸರಿನ ಇನ್ನೊಂದು ಕೋಟೆಯನ್ನು ಕಟ್ಟಿಸಿ ಅದನ್ನು ಗೆಲ್ಲಲು ಹೊರಡುತ್ತಾರೆ !
ಇಂಥ ಇನ್ನೊಂದು ಸಂಗತಿ ಈ (http://www.prajavani.net/news/article/2018/05/08/571569.html) ಕೊಂಡಿಯಲ್ಲಿದೆ !! ಗಡಿ ಸಮಸ್ಯೆ ಬಗೆಹರಿದು ಮಹಾರಾಷ್ಟ್ರಕ್ಕೆ ಬೆಳಗಾವಿ ಬರುವುದು ಸಾಧ್ಯವೇ ಇಲ್ಲ ಎಂದು ಖಾಸಗಿ ಸಮಾಲೋಚನೆಯೊಂದರಲ್ಲಿ ಶರದ್ ಪವಾರ್ ಅವರು ಎಂ.ಇ.ಎಸ್. ನಾಯಕರಿಗೆ ಹೇಳಿದ್ದುಂಟು. ‘ಬೆಳಗಾವಿ ನಮಗೆ ಬರುವುದಿಲ್ಲ, ಆದರೆ ಬೆಳಗಾವಿಗೆ ಐದು ಕಿ.ಮೀ. ದೂರದ ಬೆಳಗುಂದಿ ಮಹಾರಾಷ್ಟ್ರಕ್ಕೆ ಸೇರುತ್ತದೆ. ಬೆಳಗುಂದಿಗೆ ನವ ಬೆಳಗಾಂವ್ ಎಂದು ಹೆಸರಿಟ್ಟು, ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿ, ಬೆಳಗಾವಿಗಿಂತ ಸುಂದರವಾಗಿ ಕಟ್ಟೋಣ. ಬೆಳಗಾವಿಯ ಜನ ನವ ಬೆಳಗಾಂವ್ ನೋಡಲು ಸಾಲುಗಟ್ಟಿ ಬರುವಂತೆ ಮಾಡೋಣ’ ಎಂಬ ಪವಾರ್ ಸಲಹೆ ಮಾಡಿದರಂತೆ!
Comments
ಉ: ಅನ್ಯಂ ಇಂದ್ರಂ ಕರಿಷ್ಯಾಮಿ ಎನ್ನುವ ನವ ವಿಶ್ವಾಮಿತ್ರರು !
ಛತ್ರಂ ಸಮರ‍್ಪಯಾಮಿ, ಚಾಮರಂ ಸಮರ್ಪಯಾಮಿ, ಷೋಡಶೋಪಚಾರ ಸಮರ್ಪಯಾಮಿ ಅನ್ನುತ್ತಾ ಎಲ್ಲವನ್ನೂ ಉದ್ಧರಣೆಯಲ್ಲಿ ನೀರು ಬಿಡುವುದರಲ್ಲೇ ಎಲ್ಲಾ ಮಾಡಿದೆವೆಂದು ಅಂದುಕೊಳ್ಳುತ್ತಾರಲ್ಲಾ, ಹಾಗೆಯೇ ಇವೆಲ್ಲವೂ! ಅನುಕೂಲ ಧರ್ಮ!!