ಕಾವೇರಿ ಯಾರದ್ದು ?
ಕಾವೇರಿ ಯಾರದ್ದು ?

೧೨೬ ವರ್ಷಗಳ ಇತಿಹಾಸವಿರುವ ಕಾವೇರಿನದಿ ನೀರಿನ ವಿವಾದ ಬಗೆ ಹರಿಯುವ ತರಹ ಕಾಣದು. ಇದು ಕನ್ನಡನಾಡಿನ ತಲಕಾವೇರಿಯಲ್ಲಿ ಹುಟ್ಟಿ ತಮಿಳುನಾಡಿನ ಶ್ರೀರಂಗಂ ಬಳಿ ಸಮುದ್ರ ಸೇರುವ ಕಾವೇರಿತಾಯಿಗೂ ನೆಮ್ಮದಿ ತರದಿರುವ ವಿಷಯ. ಪ್ರತಿ ವರ್ಷವೂ ಸರಾಸರಿ ೧೫೦೦೦ ಕ್ಯೂಸೆಕ್ ನೀರು ಬೇಕೇ ಬೇಕೆಂದು ಖ್ಯಾತೆ ತೆಗೆಯುವ ತಮಿಳುನಾಡಿನ ಸರ್ಕಾರದ ವಿರುದ್ಧ ಯಾವುದೇ ಕನ್ನಡದ ಜನಪ್ರಿಯ ರಾಜಕಾರಣಿಗೆ ಎದೆತಟ್ಟಿ ವಿವರಣೆ ಕೇಳುವ ಧೈರ್ಯವಿಲ್ಲ. ಅಲ್ಲಿಯ ಸಿನೆಮಾ ನಟರು ಕೂಡಾ ತಮ್ಮ ರಾಜಕೀಯ ಪ್ರವೇಶದ ಲಾಭ ಪಡೆಯಲು ಬಾಯಿಗೆ ಬಂದಂತೆ ಮಾತನಾಡುವರು. ಆದರೆ ಅವರ ಸಿನೆಮಾ ಥಿಯೇಟರ್ ನಲ್ಲಿ ಪ್ರದರ್ಶನ ಕಾಣಬೇಕು ಅನ್ನೋವಷ್ಟರಲ್ಲಿ ಕ್ಷಮೆಯಾಚನೆಯ ನಾಟಕವೂ ನಡೆಯುತ್ತದೆ. ೧೮೯೨ರಲ್ಲಿ ಶುರುವಾದ ಕಾವೇರಿ ನಂದುನಿಂದು ಎನ್ನುವ ರಾಜಕೀಯ ದಾಳದ ವೋಟ್-ಬ್ಯಾಂಕ್ ಪ್ರಹಸನಕ್ಕೆ ನಮ್ಮ ರಾಜ್ಯದ ಜನರು, ಅದರಲ್ಲೂ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗಿನ ಮುಗ್ಧ ರೈತರು ಬಲಿಯಾಗುತ್ತಿದ್ದಾರೆ. ಇದಕ್ಕೆ ಕೊನೆ ಎಂದು? ....ಷರಾ