ನೀನ್ಯಾರೆ.....?

ನೀನ್ಯಾರೆ.....?

ಬರಹ

ಸಖಿ ಹೇಳೆ ನಿನ್ನ ಪರಿಚಯ
ಕಾಯುತ್ತಿದೆ ಈ ನನ್ನ ಹೃದಯ
ಕೇಳಲು ನಿನ್ನ ಸವಿ ದನಿಯ.......

ಎಷ್ಟೋ ಜನರಿರುವರು ಈ ಜಗತ್ತಿನಲ್ಲಿ
ಅದ್ಯಾಕೊ ಗೊತ್ತಿಲ್ಲ ಅತಿ ಹೆಚ್ಚು ಪ್ರೀತಿ ನಿನ್ನಲ್ಲಿ
ಅವಿತು ಕುಳಿತಿರುವೆ ನೀ.. ನನ್ನ ಪುಟ್ಟ ಹೃದಯದಲ್ಲಿ.......

ಕುರುಡು ಪ್ರೀತಿಯ ಹುಡುಕ ಹೊರಟ ಹೆಡ್ಡರು ನಾವು
ಪ್ರೀತಿ ಸುಳಿಯಲ್ಲಿ ಸಿಕ್ಕುವ ನಾವಿಕರು ನಾವು
ಆದರೂ.. ಬಿಟ್ಟು ಕೊಡಲಾರೆವು ಪ್ರೀತಿಯ ಬಂದರು ಸಾವು.. ನೋವು..

ನೀ ನನಗೆ ಅಪರಿಚಿತ
ನಾ ನಿನ್ನ ನೋಡುವ ಇಂಗಿತ
ಆದರೆ ನಿನ್ನ ಹೆಸರು ಚಿರಪರಿಚಿತ..

ಭಾವನೆಗಳ ಹುಚ್ಚು ಹೊಳೆಯಲ್ಲಿ
ಕೊಚ್ಚಿ ಹೊಗುತ್ತಿರುವ ಹುಚ್ಚ ನಾನು
ಕೊಚ್ಚಿ ಹೊಗುವ ಮುನ್ನ ಹೇಳೆ ಒಮ್ಮೆ ನೀನ್ಯಾರೆ..............?