ನಾ ನಡೆದ ಹಾದಿಯಲಿ - ಮಗುವಿಗೊಂದು ಸಂದೇಶ
ನಾ ನಡೆದ ಹಾದಿಯಲಿ …..
ನಾ ನಡೆದ ಹಾದಿಯಲಿ
ನೀ ನಡೆಯಬೇಕೆಂದು
ಕಟ್ಟಳೆಯನು ನಿನಗೆ
ವಿಧಿಸುವುದು ಇಲ್ಲ ಮಗು
ಇದು ನಿನ್ನ ಹಾಡು
ಇದು ನಿನ್ನ ಬದುಕು
ನಿನ್ನ ಬದುಕಿನ ಅರ್ಥವನು
ನೀನೆ ಹುಡುಕು
ನಾ ತೊರಬಹುದು
ಹಾದಿಯನ್ನು ನಿನಗೆ
ನಾ ನಡೆ ಯಲಾದೀತೇ
ನಿನ್ನೊಡನೆ ಕಡೆಯ ವರೆಗೆ
ನನ್ನ ದಾರಿ ನಿನ್ನ ದಾರಿ
ಒಂದೆಯಾಗಬೇಕಿಲ್ಲ
ನನ್ನ ಗುರಿ ನಿನ್ನ ಗುರಿ
ಒಂದೇ ಇರಲು ಬೇಕಿಲ್ಲ
ನಡೆ ನಿನ್ನ ದಾರಿಯಲಿ
ಗುರಿ ಒಂದನಿಡಿದು
ಆ ಗುರಿಯೇ ಕಾವುದು ನಿನ್ನ
ಬರುವ ಕಷ್ಟಗಳ ಬಡಿದು
ಗುರಿ ಮುಟ್ಟೋವರೆಗೂ
ಗರಿ gedara dirali ಮನಸು
ಈ ಜಗದ ವಿಕಾರಗಳಿಗೆ
ಸೋಲೇ ನಾನೆಂದೆಣಿಸು
ನಿನ್ನ ಮನಸು ಹೂನಂತಿರಲಿ
ಮಾತುಗಳು ಮುತ್ತಾಗಿರಲಿ
ಅಳುವವರ ಕಣ್ಣೀರನೋರೆಸುವ
ಕೈಗಳವು ನಿನ್ನಾವಾಗಿರಲಿ
ನಾ ಸಿಲುಕಿ ಕೊಂದಿಹೆನು
ಆಸೆಗಳ ಬಲೆಯೊಳಗೆ
ನೀನಾದರೂ ಬದುಕು
ಇದರಿಂದ ಆಚೆಗೆ
ಇದೇ ನನ್ನ ಹರಕೆ
ನಿನ್ನ ಜೀವನಕೆ
ನಿನಗೆ ಇದೆ ಮುಗ್ದ ಮನಸು
ಜೊತೆಗೆ, ಜಗ ವ ಗೆಲ್ಲುವ ಹುಮ್ಮಸ್ಸು
—- ಜಯಪ್ರಕಾಶ್ ನೇವಾರ ಶಿವಕವಿ
Rating
Comments
ಉ: ನಾ ನಡೆದ ಹಾದಿಯಲಿ - ಮಗುವಿಗೊಂದು ಸಂದೇಶ