ಒಂದು ಕಡೆ ಪ್ರತ್ಯೇಕ‌ ಕಾಶ್ಮೀರಕ್ಕಾಗಿ ಕಲ್ಲು ತೂರಾಟ‌, ಮತ್ತೊಂದು ಕಡೆ ಪ್ರತ್ಫ್ಯೇಕ‌ ಉ.ಕರ್ನಾಟಕ ಹೋರಾಟ !

ಒಂದು ಕಡೆ ಪ್ರತ್ಯೇಕ‌ ಕಾಶ್ಮೀರಕ್ಕಾಗಿ ಕಲ್ಲು ತೂರಾಟ‌, ಮತ್ತೊಂದು ಕಡೆ ಪ್ರತ್ಫ್ಯೇಕ‌ ಉ.ಕರ್ನಾಟಕ ಹೋರಾಟ !

 
ಕುಂಬಾರನಿಗೆ ವರುಷ, ದೊಣ್ಣೆೆಗೆ ನಿಮಿಷ ಅನ್ನೋೋ ಹಾಗೆ, ಬ್ರಿಿಟಿಷರ ಕಪಿಮುಷ್ಠಿಿಯಲ್ಲಿದ್ದ ಭಾರತವನ್ನು, ಆನಂತರ ಭಾರತದ ಒಕ್ಕೂಟ ವ್ಯವಸ್ಥೆೆಗೆ ಸೇರಲು ನಿರಾಕರಿಸಿದ ನಿಜಾಮನ ತೆಕ್ಕೆೆಯೊಳಗಿದ್ದ ಹೈದರಬಾದ್ ಸಂಸ್ಥಾಾನವನ್ನು ಭಾರತದ ಒಕ್ಕೂಟ ವ್ಯವಸ್ಥೆೆಗೆ ಸೇರಿಸಿಕೊಳ್ಳಲು ನಡೆದ ಹೋರಾಟ, ತ್ಯಾಾಗ, ಬಲಿದಾನಗಳ ಮೂಲಕ  ಚದುರಿಹೋಗಿದ್ದ ಭಾರತವನ್ನು ಭದ್ರವಾಗಿ ಕಟ್ಟಲಾಯಿತು. ಇದ್ಯಾಾವುದರ ಅರಿವಿಲ್ಲದ ಅಥವಾ ಅರಿವಿದ್ದೂ ಅಧಿಕಾರದ ಮದದಲ್ಲಿರುವ ರಾಜಕಾರಣಿಗಳು ಕೇವಲ ತಮ್ಮ ಅಧಿಕಾರ, ಆಸೆ, ಆಕಾಂಕ್ಷೆೆಗಳನ್ನು ಈಡೇರಿಸಿಕೊಳ್ಳುವುದಕ್ಕಾಾಗಿ ಎಂಥ ಹೇಸಿಗೆ ಕೆಲಸಕ್ಕೂ ಇಳಿಯುತಾರೆ ಎಂಬುದಕ್ಕೆೆ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿಿರುವ ರಾಜಕೀಯ ಪ್ರಾಾಯೋಜಿತ ಪ್ರತ್ಯೇಕತೆಯ ಜ್ವಾಾಲಾಗ್ನಿಿ ಮತ್ತು ಉತ್ತರ ಕರ್ನಾಟಕದಲ್ಲಿ ಭುಗಿಲೆದ್ದಿರುವ ಪ್ರತ್ಯೇಕ ರಾಜ್ಯದ ಕೂಗುಮಾರಿಗಳೇ ಸಾಕ್ಷಿಿ. ಇದರ ಹಿಂದಿರುವುದು ಅದೇ ಜಾತಿ, ಮತ ಮತ್ತು ರಾಜಕಾರಣಿ.
ನೋಡಿ, ಸ್ವಾಾತಂತ್ರ್ಯ ದಿನವೂ ಹತ್ತಿಿರ ಬಂದಿದೆ! ದೇಶಪ್ರೇಮಿಗಳು, ಹೋರಾಟಗಾರರು ಅಂದು ಭಾರತದ ಸ್ವಾಾತಂತ್ರ್ಯಕ್ಕಾಾಗಿ ಅದರ ಸುಂದರ ಭವಿಷ್ಯದ ಕನಸು ಹೊತ್ತು ಅದಕ್ಕಾಾಗಿ ತಮ್ಮ ಜೀವ ಮತ್ತು ಜೀವನವನ್ನು ಬಲಿಕೊಟ್ಟು ನಮಗೆ ಸ್ವಾಾತಂತ್ರ್ಯದ ಉಡುಗೊರೆ ಕೊಟ್ಟಿಿದ್ದಕ್ಕೆೆ ನಾವಿಂದು ಆ ಮಹಾನೀಯರ ತ್ಯಾಾಗ, ಬಲಿದಾನಗಳಿಗೆ  ಕೊಡುತ್ತಿಿರುವ ಉಡುಗೊರೆ ಏನೆಂದರೆ, ದೇಶವನ್ನು ರಾಜಕೀಯ, ಧರ್ಮ, ಮತ, ಭಾಷೆಗಳಿಗಾಗಿ ತುಂಡು ತುಂಡು ಮಾಡುತ್ತಿಿರುವುದು. ಒಂದು ಕಡೆ ಕಾಶ್ಮೀರ ಪ್ರತ್ಯೇಕತೆ ಕೂಗು, ಕಲ್ಲು ತೂರಾಟ, ಇನ್ನೊೊಂದು ಕಡೆ ಪ್ರತ್ಯೇಕ ರಾಜ್ಯದ ಹೋರಾಟ! ಭಲೆ ಚೆನ್ನಾಾಗಿದೆ! ಭಾರತವನ್ನು ತುಂಡು ತುಂಡಾಗಿಸಲು ಪಾಕಿಸ್ತಾಾನ, ಚೀನಾಗಳು ಬೇಕಾಗಿಲ್ಲ. ಅಧಿಕಾರದ ಚಪಲಕ್ಕೆೆ ಬಿದ್ದಿರುವ ನಮ್ಮ ದೇಶದ ರಾಜಕಾರಣಿಗಳೇ ಸಾಕು. ಭಾರತದ ಏಳ್ಗೆೆಗೆ ಬೆಂಕಿ ಹಚ್ಚಿಿಯಾದರೂ ಸರಿಯೇಅಧಿಕಾರಕ್ಕಾಾಗಿ  ದೇಶವನ್ನೇ ತುಂಡರಿಸಿ ಕೊನೆಗೆ ತಾವೇ ತುಂಡಾಗಿ ಹೋಗಲು!
ಇತ್ತೀಚೆಗೆ ಬಿಜೆಪಿ ಶಾಸಕ ಶ್ರೀರಾಮುಲು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದ್ದರು. ಅದನ್ನು ಎಲ್ಲಾಾ ಕನ್ನಡಿಗರು ಉತ್ತರ-ದಕ್ಷಿಿಣ ಎನ್ನದೇ ಖಂಡಿಸಿದರು.  ಸಿದ್ದರಾಮಯ್ಯನವರು ಕೂಡ ಶ್ರೀರಾಮುಲು ಅವರ ಹೇಳಿಕೆಯನ್ನು ಖಂಡಿಸಿ, ಅದೊಂದು ಮೂರ್ಖತನದ ಪರಮಾವಧಿ. ಮೂರ್ಖರು ಮಾತ್ರ ಅಂಥ ಬೇಡಿಕೆಗಳನ್ನು ಇಡಲು ಸಾಧ್ಯ’ ಎಂದು ಖಾರವಾಗಿ ನುಡಿದರು. ಸ್ವಲ್ಪ ಗಮನಿಸಬೇಕು, ಅಖಂಡ ಕರ್ನಾಟಕದ ಅಭಿವೃದ್ಧಿಿ ಬಗ್ಗೆೆ ಮಾತಾಡುವ ಇದೇ ಸಿದ್ದರಾಮಯ್ಯನವರು ತನ್ನ ಅಧಿಕಾರವಧಿಯಲ್ಲಿ  ಉತ್ತರ ಕರ್ನಾಟಕದ ನೂರಾರು ರೈತರು ಆತ್ಮಹತ್ಯೆೆ ಮಾಡಿಕೊಂಡರು. ನಂಜುಂಡಪ್ಪ ಸಮಿತಿ ರಚಿಸಿದ್ದು  ನಾವು, ಅದರ ಅಧಿಕಾರಾವಧಿ ಮುಗಿದಾಗ ಅದನ್ನು ವಿಸ್ತಾಾರಿಸಿದ್ದು ನಾವು ನಮಗೆ ಉತ್ತರ ಕರ್ನಾಟಕದ ಬಗ್ಗೆೆ ಕಳಾಕಳಿ ಇದೆಯೆಂದು ಹೇಳಿಕೊಳ್ಳುವ ಕಾಂಗ್ರೆೆಸ್ ತನ್ನ ಅಧಿಕಾರವಧಿಯಲ್ಲಿ ಎಷ್ಟು ಹಿಂದೂಳಿದ ಪ್ರದೇಶಗಳನ್ನು ಅಭಿವೃದ್ಧಿಿ ಪಡಿಸಿದೆ? ನಂಜುಂಡಪ್ಪ ವರದಿಯಂತೆ ವರ್ಷಕ್ಕೆೆ ಬಂದ ಅನುದಾನವೆಷ್ಟು, ಅದರಲ್ಲಿ ಅಭಿವೃದ್ಧಿಿಗೆ ಬಳಸಿದ್ದೆೆಷ್ಟು ಬಳಸದೇ ಉಳಿದ ಹಣವೆಷ್ಟು? ಇದರ ಬಗ್ಗೆೆ ಎಲ್ಲರದು ಮೌನ. ಈಗ ಅದರ ಅನುದಾನವೂ ಹೆಚ್ಚಾಾಗಿದೆ ಹೊರತು ಸರಿಯಾಗಿ, ಸಮರ್ಪಕವಾಗಿ ಬಳಕೆಯಾಗುತ್ತಿಿಲ್ಲ. ಯಾದಗಿರಿ, ದೇವದುರ್ಗ, ಯಲಬುರ್ಗಾ ರಾಯಚೂರು.. ಇವೆಲ್ಲ ಮೊದಲು ಹೇಗೆ ಹಿಂದುಳಿದಿದ್ದವೋ, ಈಗಲೂ ಹಾಗೆ ಇವೆ  ಮತ್ತೇನು ಬದಲಾವಣೆಯಗಿಲ್ಲ.
ಅಷ್ಟಕ್ಕೂ ಶಾಸಕ ಶ್ರೀರಾಮುಲು ಅವರು ಅಂತಹ ಹೇಳಿಕೆ ನೀಡಿದ್ದಾಾದರೇನು, ‘ಅಖಂಡ ಕರ್ನಾಟಕವನ್ನು ಬೇರ್ಪಡಿಸುವುದು ತಪ್ಪುು. ಆದರೆ ರಾಜ್ಯಸರಕಾಗಳು ಹಿಂದಿನಿಂದಲೂ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಿಸುತ್ತಲೇ ಬಂದಿದ್ದಾಾರೆ. ಅದು ಹೀಗೆ ಮುಂದುವರಿದರೆ ಪ್ರತ್ಯೇಕಿಸುವುದು ಅನಿವಾರ್ಯವಾಗುತ್ತದೆ. ನಾವು ಸರಕಾರಗಳು ಮಾಡುವ ಈ ತಾರತಮ್ಯವನ್ನು ,ಮಲತಾಯಿ ಧೋರಣೆಯನ್ನು ನೋಡಿಕೊಂಡು ಸುಮ್ಮನೆ ಕೂಡುವುದಿಲ್ಲ ‘ತೆಲಂಗಾಣ ಮಾದರಿ’ ಹೋರಾಟ ನಡೆಸುತ್ತವೆ. ಅದರ ಮುಂದಾಳತ್ವವೂ ನಾನೇ ವಹಿಸಿಕೊಳ್ಳುತ್ತೇನೆ’ ಎಂದು ಹೇಳಿದ್ದರು. ಆದರೆ ತೆಲಂಗಾಣವು ಪ್ರತ್ಯೇಕತೆಗೆ ಹೋರಾಟ ಮಾಡಿದ ತಪ್ಪಿಿಗೆ  ಈಗ ಮಣ್ಣು ತಿನ್ನುತ್ತಿಿರುವುದು ಶ್ರೀರಾಮುಲು ಅವರಿಗೆ ತಿಳಿದಿಲ್ಲವೋ, ಏನೋ!
 ಪ್ರತ್ಯೇಕತೆಯ ಕುರಿತು ಹೇಳಿಕೆ  ನೀಡಿದ್ದು ತಪ್ಪಾಾದರೂ, ಹಾಗೆ ನೀಡಿದ ಹೇಳಿಕೆ ಸುಮ್ಮನೆ ವಿವಾದವೆಬ್ಬಿಿಸಲೇನೂ ಅಲ್ಲ, ಅದಕ್ಕೆೆ ಐತಿಹಾಸಿಕ ಕಾರಣಗಳು ಈಗಲೂ ಜ್ವಲಂತವಾಗಿವೆ. ಹಾಗೆ ನೋಡಿದರೆ, ಪ್ರತ್ಯೇಕ ರಾಜ್ಯದ ಬೇಡಿಕೆಗಾಗಿ ಹೋರಾಟ ಇತ್ತೀಚಿನದಲ್ಲ, ಬಹಳ ಹಿಂದಿನಿಂದಲೂ ಹೊಗೆಯಾಡುತ್ತಲೇ ಇತ್ತು. ಅದಕ್ಕೆೆ  ರಾಜಕೀಯ, ಆರ್ಥಿಕ, ಶೈಕ್ಷಣಿಕ ಸಾಂಸ್ಕೃತಿಕ ಅಸಮಾನತೆಯೇ ಕಾರಣವಾಗಿರುವುದು. ಹಿಂದೆ ಉಮೇಶ ಕತ್ತಿಿಯವರು ಉತ್ತರ ಕರ್ನಾಟಕ ಪ್ರತ್ಯೇಕತೆಯ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಅದಕ್ಕೂ ಹಿಂದೆ ಅಂದರೆ 1991ರಲ್ಲಿ ಎಚ್.ಕೆ.ಪಾಟೀಲರು ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಾಗ, ಉತ್ತರ ಕರ್ನಾಟಕಕ್ಕೆೆ ಹೇಗೆ ಅನ್ಯಾಾಯವಾಗುತ್ತಿಿದೆ ಎಂಬ ಕುರಿತಾ ಅಂಕಿ-ಅಂಶಗಳ ಸಹಿತ ಸಮರ್ಥವಾಗಿ ಒಂದು ಪುಸ್ತಕವನ್ನೇ ಬರೆದಿದ್ದರು.  ಆಳಿದ ಸರಕಾರಗಳೆಲ್ಲ ಅಖಂಡ ಕರ್ನಾಟಕದ ಅಭಿವೃದ್ಧಿಿಗೆ ಶ್ರಮಿಸಿದ್ದರೆ, ಇಂದು ಉತ್ತರ ಕರ್ನಾಟಕದ ಭಾಗಗಳು ಬೆಂಗಳೂರು, ಮೈಸೂರಿನಂತೆ ನಳನಳಿಸಬೇಕಿತ್ತು. ಪ್ರತ್ಯೇಕತೆಯೇ ಕೂಗು ಎನ್ನುವುದೇ ಇರುತ್ತಿಿರಲಿಲ್ಲವೇನೋ. ಆದರೆ ಅಭಿವೃದ್ಧಿಿ ಮಾಡಿದ್ದೇವೆಂದು ಹೇಳಿಕೊಳ್ಳುತ್ತಿಿರುವ ಸರಕಾರಗಳು ಇವತ್ತಿಿಗೂ ಉತ್ತರ ಕರ್ನಾಟಕದ ಹಲವು ನಗರಗಳಲ್ಲಿ (ಹಳ್ಳಿಿಗಳ ಗೋಳು ನೋಡುವುದೇ ಬೇಡ) ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಹೊಂದಿಲ್ಲ. ಅದರೂ ಅನುದಾನಗಳು ಹರಿದು ಬರುತ್ತಲೇ ಇದೆ, ಹೀಗೆ ಬಂದ ಹಣವೆಲ್ಲ ಎಲ್ಲಿ ಸೇರುತ್ತದೆಯೋ ದೇವರೇ ಬಲ್ಲ!
ಮೊನ್ನೆೆ ಮೊನ್ನೆೆ ಕುಮಾರಸ್ವಾಾಮಿಯವರ ಚುನಾವಣೆಯಲ್ಲಿ ಗೆದ್ದು(?) ಹೊಸ ಸರಕಾರ ರಚನೆಯಾದ ನಂತರ, ಅವರು ಮಾಡುತ್ತಿಿರುವ ಒಂದೊಂದೇ ಬಾನಾಗಡಿ ಕೆಲಸಗಳಿಂದ, ಅವರ ಹೇಳಿಕೆಗಳು ಜನರಲ್ಲಿ ಗೊಂದಲ, ಹತಾಶೆ, ಆಕ್ರೋೋಶಗೊಳ್ಳಲು ಪ್ರಚೋದಿಸುತ್ತಿಿವೆ.  ತಮಗೆ ಎಲ್ಲೆೆಲ್ಲಿ ವೋಟ್ ಬಿದ್ದಿವೆಯೋ ಅಲ್ಲಲ್ಲಿ ಮಾತ್ರ ಅಭಿವೃದ್ಧಿಿಗೆ ಕಾಳಜಿ ತೆಗೆದುಕೊಳ್ಳುತ್ತಿಿದ್ದಾಾರೆನೋ ಎಂಬಂತೆ ವರ್ತಿಸುತ್ತಿಿದ್ದಾಾರೆ. ದಕ್ಷಿಿಣ ಕರ್ನಾಟಕದಲ್ಲಿ ತಿರುಗಾಡಿದಷ್ಟು, ಉತ್ತರ ಕರ್ನಾಟಕಕ್ಕೆೆ ಯಾಕೆ ಬರುತ್ತಿಿಲ್ಲ ಎಂಬುದು ಉತ್ತರ ಭಾಗದವರ ಪ್ರಶ್ನೆೆ. ಕೊಪ್ಪಳದಲ್ಲಿ ರೈತರನ್ನು ಉದ್ದೇಶಿಸಿ ಮಾತಾಡುತ್ತಾಾ, ‘ಉತ್ತರ ಕರ್ನಾಟಕದವರು ನಮಗೆ ವೋಟ್ ಹಾಕಿಲ್ಲ, ನೀವು ನಿಮ್ಮ ವೋಟ್‌ನ್ನು ದುಡ್ಡಿಿಗೆ ಮಾರಿಕೊಂಡಿದ್ದೀರಿ ಈಗ ಅನುಭವಿಸಿ’ ಎನ್ನುವಂತೆ ಲಂಗುಲಾಗಮು ಇಲ್ಲದೇ ಮಾತಗಳನ್ನಾಾಡಿ ಉತ್ತರ ಕರ್ನಾಟಕದ ಜನರನ್ನು ಕೆಣಕಿದ್ದರು.
 ಹಾಗಂತ ಜೆಡಿಎಸ್ ಆಗಲೀ, ಬಿಜೆಪಿ, ಕಾಂಗ್ರೆೆಸ್ ಪಕ್ಷಗಳಾಗಲೀ  ಸಂಪೂರ್ಣ ಪಾರದರ್ಶಕವಾಗಿ ಚುನಾವಣೆಯನ್ನು ಎದುರಿಸಿಲ್ಲ. ಅವರು ಎಲ್ಲೆೆಲ್ಲಿ ಹಣವನ್ನು ಚೆಲ್ಲಬೇಕೋ ಅಲ್ಲೆೆಲ್ಲ ಚೆಲ್ಲಾಾಡಿದ್ದಾಾರೆ. ಇಲ್ಲದಿದ್ದರೆ ಸಾಮಾಜಿಕ ಜಾಲತಾಣದಲ್ಲಿನ ಮಂದಿ ಕುಮಾರಸ್ವಾಾಮಿಯವರ ಪಕ್ಷವನ್ನು ‘ಸೂಟ್‌ಕೇಸ್’ ಪಕ್ಷವೆಂದು ಟ್ರೋೋಲ್ ಮಾಡುತ್ತಿಿರಲಿಲ್ಲ. ಸ್ವತಃ ಕುಮಾರಸ್ವಾಾಮಿಯ ಕುಟುಂಬದ ಕುಡಿಯೇ ಸೂಟ್‌ಕೇಶ್ ಬಗ್ಗೆೆ ಹಿಂದೊಮ್ಮೆೆ ಹೇಳಿಕೆ ನೀಡಿದ್ದರು.  ಇವತ್ತು ಜನರು ತಮ್ಮ ಮತವನ್ನು  ದುಡ್ಡಿಿಗೆ ಮಾರಿಕೊಳ್ಳುತ್ತಿಿದ್ದಾಾರೆ ಎಂದರೆ ಅದಕ್ಕೆೆ ಕಾರಣ ಯಾರು ಸ್ವಾಾಮಿ? ಜೆಡಿಎಸ್, ಬಿಜೆಪಿ, ಕಾಂಗ್ರೆೆಸ್ ಪಕ್ಷಗಳೇ ಕಾರಣ. ಮತದಾರನ ಬಡತನವನ್ನೇ ಬಂಡವಾಳ ಮಾಡಿಕೊಂಡು ಅವರಿಗೆ ಅಮಿಷೆ ತೋರಿಸಿ ಮತ ಪಡೆದಿದ್ದೇ ನೀವು. ಹಣ ಕೊಟ್ಟು ಮತ ಪಡೆಯುವ ಸಂಪ್ರದಾಯ ಬೆಳೆಸಿ, ಈಗ ಹಣಕ್ಕಾಾಗಿ ಮತವನ್ನು ಮಾರಿಕೊಂಡಿದ್ದೀರಿ ಎಂದು ಜನರ ಮೇಲೆ ಗೂಬೆ ಕೂರಿಸುತ್ತಿಿರುವುದೇಕೆ?
ರಾಜ್ಯದ  ಮುಖ್ಯಮಂತ್ರಿಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇಂತಹ ಮಾತನಾಡುವ ಅಗತ್ಯವಿರಲಿಲ್ಲ. ಉತ್ತರ ಕರ್ನಾಟಕದ ಜನರು ವೋಟ್ ಹಾಕದಿದ್ದರೂ, ಕುಮಾರಸ್ವಾಾಮಿಯವರು ಮುಖ್ಯಮಂತ್ರಿಿಯಾಗಿ ಆ ಭಾಗವನ್ನು ಅಭಿವೃದ್ಧಿಿಪಡಿಸುವ ಮೂಲಕ ಜನರ ಮನಸ್ಸು ಗೆಲ್ಲಬಹುದಿತ್ತು. ಅದು ಬಿಟ್ಟು ರಾಜ್ಯದ ಮುಖ್ಯಮಂತ್ರಿಿ ಪದವಿ ಶಾಶ್ವತವೆನೋ ಎನ್ನುವಂತೆ ಬೇಜವಾಬ್ದಾಾರಿತನದ ಹೇಳಿಕೆ, ರೈತರನ್ನು ಅವಮಾನಿಸಿ ಹೇಳಿಕೆ ನೀಡಬಾರದಿತ್ತು. ಇದರಿಂದ ಭವಿಷ್ಯದಲ್ಲಿ ಜೆಡಿಎಸ್‌ಗೆ ಒಡೆತ ಬೀಳಲಿದೆಯೇ ಹೊರತು ಒಳ್ಳೆೆಯದಂತೂ ನಿರೀಕ್ಷಿಿಸುವಂತಿಲ್ಲ. ಕುಮಾರಸ್ವಾಾಮಿಯವರಿಗೆ ಗೊತ್ತಿಿದೆಯೋ ಇಲ್ಲವೋ ಹಿಂದಿನ ಚುನಾವಣೆಗಳಲ್ಲಿ ಪಡೆದಕ್ಕಿಿಂತ ಹೆಚ್ಚಿಿನ ಬೆಂಬಲ ಜೆಡಿಎಸ್‌ಗೆ ಸಿಕ್ಕಿಿದೆ. ಮಾನವಿ, ಸಿಂಧನೂರು ತಾಲೂಕುಗಳಲ್ಲಿ ಅತಿ ಹೆಚ್ಚು ರೈತರು ಜೆಡಿಎಸ್ ಬೆನ್ನಿಿಗೆ ನಿಂತಿದ್ದಾಾರೆ. ಮನೆ ಮನೆಗೂ ಜೆಡಿಎಸ್ ಬಾವುಟ ಹಾರಿಸಿದ್ದಾಾರೆ. ಏನೇ ಹೇಳಿಕೆ ಕುಮಾರಸ್ವಾಾಮಿಯವರ ಆ ಒಂದು ಹೇಳಿಕೆಯೇ ಪ್ರತ್ಯೇಕ ರಾಜ್ಯವಾಗಬೇಕು ಎಂಬ ಕಿಚ್ಚಿಿಗೆ ತುಪ್ಪ ಸುರಿದಿರುವುದಂತೂ ಹೌದು.
ಉತ್ತರ ಕರ್ನಾಟಕದ ಸಮಸ್ಯೆೆಗಳಿಗೆ ಪ್ರತ್ಯೇಕತೆ ಎನ್ನುವುದು ಪರಿಹಾರವೇ ? ಕರ್ನಾಟಕವನ್ನು ಬಂದ್ ಮಾಡುವುದರಿಂದ ಆಗುವ ನಷ್ಟ ಯಾರಿಗೆ ?  ಉತ್ತರ-ದಕ್ಷಿಿಣ ಎಂದು ಪ್ರತ್ಯೇಕಿಸುವುದರಿಂದ  ಸಮಸ್ಯೆೆಗಳು ಬಗೆಹರಿಯುತ್ತವೆಯೇ ? ಇದನ್ನೇ ಮಾದರಿಯಾಗಿಟ್ಟುಕೊಂಡು ಮುಂದೊಂದು ದಿನ ಕೊಡಗು, ತುಳುನಾಡು ಪ್ರತ್ಯೇಕತೆಗೆ ಕೂಗು ಎಬ್ಬಿಿಸಿದರೆ ಅದಕ್ಕೆೆ ಏನು ಮಾಡಲಬಲ್ಲಿರಿ? ಎಲ್ಲರದು ಮೌನ ಉತ್ತರ!