ಮಚ್ಚೇರಿಯಿಂದ ಹಾರ್ವರ್ಡ್ ವರೆಗೆ
ಹಾಗೇ ಸುಮ್ಮನೆ
ಕಡೂರು ತಾಲ್ಲೂಕಿನ ಕುಗ್ರಾಮ ಮಚ್ಚೇರಿ. ಇಲ್ಲಿ ಹುಟ್ಟಿ ಬೆಳೆದ ಎಂ.ಎಸ್.ಶ್ರೀನಿವಾಸ ಮೂರ್ತಿಯವರು ಶಿಕ್ಷಣ ಇಲಾಖೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿದರು. ಅವರು ಇಲ್ಲಿ ಸೇವೆ ಸಲ್ಲಿಸಿದ ದಿನಗಳನ್ನು ಹಿರಿಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಅವರ ಮಗ ಹುಟ್ಟಿದ್ದು ನನ್ನ ಮಚ್ಚೇರಿಯಲ್ಲಿ.ಅವನಿಗೆ ಇಂಜಿನಿಯರ್ ಆಗಬೇಕೆಂಬಾಸೆ. ತಂದೆಗೆ ಈತ ಡಾಕ್ಟರ್ ಅಗಬೇಕೆಂಬಾಸೆ, ಕಡೆಗೆ ತಂದೆಯ ಮಾತು ನಡೆಯಿತು. ಇಂಜಿನಿಯರಿಂಗ್ ಕ್ಷೇತ್ರಕ್ಕಾದ ನಷ್ಟ ವೈದ್ಯಕೀಯ ಕ್ಷೇತ್ರಕ್ಕಾಯಿತು. ಹುಡುಗ ಇಂದು ವಿಶ್ವವಿಖ್ಯಾತ ಮನೋವೈದ್ಯಕೀಯ ತಜ್ಞ ಡಾ.ಮಚ್ಚೇರಿ ಕೇಶವನ್.
ಮೈಸೂರಿನಲ್ಲಿ ಎಂ.ಬಿ.ಬಿ.ಎಸ್. ನಂತರ ಬೆಂಗಳೂರಿನ ನಿಮ್ಹ್ಯಾನ್ಸ್ ನಲ್ಲಿ ಎಂ.ಡಿ. ಆಮೇಲೆ ಹೋಗಿದ್ದು ಅಮೇರಿಕಾಗೆ. ಅಲ್ಲಿ ಎಫ್ ಆರ್ ಸಿ ಎಸ್ ಪದವಿ. ಮನೋವೈದ್ಯಕೀಯ ತಜ್ಞನಾಗಿ ಇವರ ಸಾಧನೆಗೆ ಮೂರು ಬಾರಿ ಗೋಲ್ಡನ್ ಆಪಲ್ ಪ್ರಶಸ್ತಿ ದೊರೆತಿದೆ. ಅತ್ಯಂತಪ್ರತಿಷ್ಟಿತ ಗ್ಯಾಸ್ಕೆಲ್ ಪ್ರಶಸ್ತಿ ಪಡೆದ ಮೊದಲ ಅಮೆರಿಕನ್ ಅಲ್ಲದ ಮೊದಲ ಭಾರತೀಯ-ಮೊದಲ ಕನ್ನಡಿಗ.
ಕೇಶವನ್ ಇಂದು ವಿಶ್ವಖ್ಯಾತ ಸೈಕ್ಯಾಟ್ರಿಸ್ಟ್. ಆದರೆ ಆವರಿಂದಿಗೂ ಕನ್ನಡ ಮತ್ತು ಕನ್ನಡತನವನ್ನುಳಿಸಿಕೊಂಡಿದ್ದಾರೆ. ಅಮೆರಿಕಾದ ತಮ್ಮ ಮನೆಯಲ್ಲಿ ಕನ್ನಡ ಪುಸ್ತಕ ಭಂಢಾರ ಹೊಂದಿದ್ದಾರೆ. ಅವರೆಷ್ಟೇ ಎತ್ರಕ್ಕೆ ಹೋದರೂ ಹುಟ್ಟೂರು ಮಚ್ಚೇರಿಯನ್ನು ಮರೆಯಲಾರರು. ಅತ್ಯುತ್ತಮ ಚಿತ್ರಕಲಾವಿದರೂ ಆಗಿರುವ ಕೇಶವನ್ ಬಗ್ಗೆ ಮಾಹಿತಿಗಾಗಿ " matcheri' ಎಂದು ಅಂತರ್ಜಾಲದಲ್ಲಿ ಹುಡುಕಿ.