( ನನ್ನಂತಹ) ಹಳಬರಿಗೆ ಹೊಸ ಹಾಡುಗಳು , ಹೊಸಬರಲ್ಲಿ ವಿನಂತಿ!

( ನನ್ನಂತಹ) ಹಳಬರಿಗೆ ಹೊಸ ಹಾಡುಗಳು , ಹೊಸಬರಲ್ಲಿ ವಿನಂತಿ!

ನಾನು ಚಿಕ್ಕಂದಿನಿಂದ ಅಂದರೆ ಕಳೆದ 45 ವರ್ಷದಿಂದ ಭಾವಗೀತೆ , ಭಕ್ತಿಗೀತೆ, ಚಿತ್ರಗೀತೆಗಳನ್ನು ಕೇಳಿಕೊಂಡು ಇದ್ದವನು. ಹೆಚ್ಚು ಕಡಿಮೆ ಕನ್ನಡದ ಎಲ್ಲ ಹಾಡುಗಳು ಗೊತ್ತು . ನನಗೆ ನಾನಾ ಕಾರಣಗಳಿಂದ ಇಷ್ಟವಾದವನ್ನು ಸಂಗ್ರಹಿಸಿಕೊಂಡು ಇದ್ದೇನೆ.
ಕನ್ನಡ ಚಲನಚಿತ್ರಗೀತೆಗಳಿಗೆ ಸಂಬಂಧಿಸಿದಂತೆ
ಹಿಂದಕ್ಕೆ ತಿರುಗಿ ನೋಡಿದಾಗ ಅಂದು ಆರ್. ಎನ್. ಜಯಗೋಪಾಲ್ ಕಾವ್ಯಮಯವಾದ ಹಾಡುಗಳನ್ನು ಬರೆಯುತ್ತಿದ್ದರು. ಚಿ.ಉದಯಶಂಕರ್ ಅವರ ಸರಳವಾದ ರೀತಿಯಲ್ಲಿ ಇರುತ್ತಿದ್ದವು. ಏಕತಾನತೆಯನ್ನು ಮುರಿದು ಹಂಸಲೇಖಾ ಅವರ ಸಂಗೀತ, ಸಾಹಿತ್ಯದಲ್ಲಿ ಹೊಸ ಅಲೆಯನ್ನು ತಂದರು.
ಕಳೆದ 15 ವರುಷಗಳಲ್ಲಿ ಕರ್ನಾಟಕದಿಂದ ಹೊರಗೆ ಇದ್ದದ್ದರಿಂದಲೂ, ಸಮಯದ ಅಭಾವದಿಂದಲೂ, ಐದಾರು ಕನ್ನಡ ಟಿವಿ ಚಾನೆಲ್ ಗಳು ಮಾತ್ರ ಲಭ್ಯ ಇದ್ದದ್ದರಿoದಲೂ ಹೊಸ ಹಾಡುಗಳು ಏನು ಬಂದಿವೆ ಅಂತ ಗೊತ್ತೇ ಇರಲಿಲ್ಲ. ಅದಾರೋ ರಿಪ್ ವ್ಯಾನ್ ವಿಂಕಲ್ ಎಷ್ಟೋ ವರುಷ ನಿದ್ದೆ ಮಾಡಿ ಎಚ್ಚತ್ತ ಹಾಗೆ ಎಚ್ಚತ್ತು ಯೂಟ್ಯೂಬ್ ಮತ್ತು Nammradio ಮತ್ತು ಕೆಲವು ವೆಬ್ ಸೈಟುಗಳಿಂದ ಜಾಲಾಡಿ ಹೊಸ ಮಧುರ ಹಾಡುಗಳನ್ನು ಹೆಕ್ಕಿ ತೆಗೆದಿದ್ದೇನೆ , ಮೊಬೈಲ್ ನಲ್ಲಿ ಪ್ಲೇಲಿಸ್ಟ್ ಮಾಡಿಕೊಂಡಿದ್ದೇನೆ. ಕಿವಿಗೆ ಇಯರ್ ಫೋನ್ ಹಾಕಿಕೊಂಡರೆ ಸಾಕು, ಒಂದು ಖಾಸಗಿ ಸ್ವರ್ಗವೇ !
ಯಾರು ಯಾರೋ ಹೊಸ ಸಂಗೀತಗಾರರು, ಗಾಯಕ ಗಾಯಕಿಯರು ಹಾಡುತ್ತಿದ್ದಾರೆ! ಜಯಂತ್ ಕಾಯ್ಕಿಣಿ ಮತ್ತಿತರರು ಎಷ್ಟೆಲ್ಲ ಒಳ್ಳೆಯ ಹಾಡು ಬರೆದಿದ್ದಾರೆ ! ಏನೆಲ್ಲ ಹೊಸ ಹೊಸ ಕಲ್ಪನೆಗಳನ್ನು , ಹೊಸ ನುಡಿಗಟ್ಟುಗಳನ್ನು ಪರಿಚಯಿಸಿದ್ದಾರೆ! ಉದಾಹರಣೆಗೆ ಕೆಳಗಿನ ಸಾಲುಗಳನ್ನು ನೋಡಿ
* ಬಂದೇ ಬರುವೆ ಹೃದಯವ ಕಾದಿರಿಸು ನನಗಾಗಿ
* ಬಾನೆ ಬಂದಿದೆ ನೋಡು ನಮ್ಮ ಬಾಗಿಲಿಗೆ
* ತುಂಬಾ ಕಾಡದಂತೆ ನಾ ಮನವಿ ಮಾಡುವೆ
* ಮಾತಾಡು ನೀ. . ಹೃದಯದ ಮಾತು ಹೃದಯಕೆ ಸೀದಾ ತಲುಪುವ ಹಾಗೆ
* ಕಂಡ ಮಾತ್ರಕ್ಕೆ ನಾ ಸೋಲಬೇಕಿಲ್ಲ , ಕೊಂಚ ಪುಸಲಾಯಿಸು
* ತಲುಪಿಲ್ಲದ ಕರೆ ಎಲ್ಲವೂ ನಿಂದೇ ಅಲ್ಲವೇ
* ಸೇರಿಸು ನನ್ನನ್ನು ನಿನ್ನ ಭಾವನಾ ವಲಯಕೆ
* ಅನುರಾಗದ ಅನುವಾದವು ಕಷ್ಟ ಅಲ್ಲವೇ
* ನಿನ್ನನು ಕಾಣುವ ಜಾಗ ಖಾಸಗಿ ಸ್ಮಾರಕ
* ನನ್ನನು ಆಪ್ತನು ಎಂದು ಮಾಡಿಕೋ ನೇಮಕ
* ಮಂದಹಾಸವೇ ನನ್ನ ಆಸ್ತಿಯು, ಈಗ ನಿನ್ನ ಪಾಲು
* ನಡು ಬೀದಿಯ ಜ್ಞಾನೋದಯ ಬರೀ ಇಂಥವೇ
* ನಾನು ಪ್ರೇಮ ರೋಗಿ
  ದಯಮಾಡಿ ವಾಸಿ ಮಾಡಬೇಡಿ
* ನನ್ನ ಕನಸಿನಲ್ಲಿ ಪಾಲು ಕೇಳಬೇಡಿ
* ಹೋದೆ ನಾನು ಕಳೆದು
ದಯಮಾಡಿ ಪತ್ತೆ ಮಾಡಬೇಡಿ
* ನೀಲಿ ನೀಲಿ ಆಕಾಶ,
  ನೋಡು ನನ್ನ ಸಂತೋಷ !
  ನನ್ನ ಜೀವ ಅವನ ಕೈವಶ !!
* ನೀನೆ ಇನ್ನು ನನ್ನ, ನೀರು ಗಾಳಿ ಅನ್ನ !!!
* ಕನಸಲೂ ನೂರು ಬಾರಿ ಕರೆಯುವೆ ನಿನ್ನ ನಾನು
ಅಭ್ಯಾಸವಾಗಿ ಹೋದೆ ನೀನು ಜೀವಕೆ
* ಕಳೆದು ಹೋದ ಮಗುವು ನಾನು, ನೀನು ಇರದೆ
* ಕಿಟಕಿ ಇರದ ಮನೆಯು ನಾನು, ನೀನು ಇರದೆ
* ಬದುಕಲು ಈ ನೂತನ ನೆಪಗಳೇ ಸಾಕಲ್ಲವೇ
* ಸರಿಯಾಗಿ ನೆನಪಿದೆ ನನಗೆ ಇದಕೆಲ್ಲ ಕಾರಣ ಕಿರುನಗೆ
* ಕನಸಿನ ಕುಲುಮೆಗೆ ಉಸಿರನು ಊದುತ
  ಕಿಡಿ ಹಾರುವುದು ಇನ್ನು ಖಚಿತ
* ನೀನೆ ಔಷಧಿ ನನ್ನ ಹುಚ್ಚಿಗೆ

ನನ್ನಂಥ ಹಳೆಯ ಜನಕ್ಕೆ ನೆರವಾಗಲು ಇಲ್ಲಿ ಒಂದು ಪಟ್ಟಿಯನ್ನು ಮಾಡಿದ್ದೇನೆ. ನನ್ನಂತೆ ವಯಸ್ಸಾದವರೇ ಇರಿ ಅಥವಾ ಚಿಕ್ಕವರೇ ಇರಿ, ಇವುಗಳಲ್ಲಿ ಎಷ್ಟು ಹಾಡುಗಳನ್ನು ನೀವು ಬಲ್ಲಿರಿ ? ಈ ಪಟ್ಟಿಯಲ್ಲಿ ಸೇರಬೇಕಾದ ಮಧುರ ಮತ್ತು ಸುಂದರ ಹಾಡುಗಳು ಯಾವುವು ? ತಿಳಿಸಿ.

  1. ನಾನು ಮನಸಾರೆ ಮರುಳನಾಗೇ ಇರುವೆ ಇನ್ನು
  2. ಮರುಳ ನೀನು ಹೂವ ತರಲು ಎಲ್ಲಿ ಹೋಗಿರುವೆ
  3. ಶುರು ಶುರು ಈ ಪ್ರೀತಿಯು
  4. ಕನ್ನಡಿ ಇಲ್ಲದ ಊರಿನಲಿ
  5. ರೂಪಸಿ ಸುಮ್ಮನೆ ಹೇಗಿರಲಿ
  6. ಗಗನವೆ ಬಾಗಿ ಭುವಿಯನು ಕೇಳಿದ ಹಾಗೆ
  7. ಒಂದೇ ಸಮನೆ ಮಿಡಿದಿದೆ ಈ ಮನಸು ನಿನಗಾಗಿ
  8. ಸನಿಹ ಬಂದ ಮೇಲೆ ಸಂಕೋಚ ಏತಕೆ
  9. ಮಾತಾಡು ನೀ. . ಹೃದಯದ ಮಾತು ಹೃದಯಕೆ ಸೀದಾ
  10. ಮಾತಿನಲ್ಲಿ ಹೇಳಲಾರೆನು
  11. ಒಂದು ನಿಮಿಷ ಕೇಳು ಇಲ್ಲಿ, ನನ್ನ ಒಂದೆ ಹರುಷ ನೀನು ಇಲ್ಲಿ
  12. ಕನಸಲೂ ನೂರು ಬಾರಿ
  13. ಗಮನಿಸು ಒಮ್ಮೆ ನೀನು
  14. ಸರಿಯಾಗಿ ನೆನಪಿದೆ ನನಗೆ
  15. ಒಂದೇ ಸಮನೆ ನಿಟ್ಟುಸಿರು
  16. ನೆನಪಾಗದೆ ಆ ಕ್ಷಣಗಳು
  17. ಮತ್ತೆ ಮಳೆಯಾಗಿದೆ
  18. ಯಾರಿವಳೀ ಹುಡುಗಿ
  19. ನೀ ಸನಿಹಕೆ ಬಂದರೆ ಹೃದಯದ ಗತಿ ಏನು
  20. ಎಲ್ಲೋ ಮಳೆಯಾಗಿದೆ ಎಂದು
  21. ನೀನೆಂದರೆ ನನ್ನೊಳಗೆ ಏನೋ *ಒಂದು ಸಂಚಲನ
  22. ಓ ನಲ್ಮೆಯ ನಾವಿಕನೆ
  23. ಮಿಂಚಾಗಿ ನೀನು ಬರಲು
  24. ಒಂದೇ ಸಮನೆ ನಿಟ್ಟುಸಿರು
  25. ಈ ಸಂಜೆ ಯಾಕಾಗಿದೆ
Rating
No votes yet