ಮರಾಠಿ ಶೈಲಿಯ ಕಿಚಡಿ
೧ ಕಪ್ ಅಕ್ಕಿ
೩/೪ ಕಪ್ ಹೆಸರು ಕಾಳು (ಅಥವ ಬೇಳೆ)
ಒಂದೆರಡು ಹಸಿರು ಮೆಣಸಿನಕಾಯಿ
ಒಂದು ಚಿಟಿಕೆ ಹಿಂಗು
ಒಂದಷ್ಟು ಶುಂಠಿ
ಎರಡು ಚಮಚ ಬೆಲ್ಲದ ಪುಡಿ ಅಥವ ಅದೇ ಪ್ರಮಾಣದ ಬೆಲ್ಲ
ಅರಿಶಿನ - ಅಳತೆಗೆ ತಕ್ಕಷ್ಟು ಅಥವ ೧/೨ ಚಮಚ
ಜೀರಿಗೆ - ಒಂದೆರಡು ಚಮಚ
ಒಂದಷ್ಟು ತುಪ್ಪ
ಮಸಾಲೆ ಮಾಡಲು:
೩/೪ ಕಪ್ ಧನಿಯ
೧/೨ ಕಪ್ ಕೊಬ್ಬರಿ ತುರಿ
ಏಳೆಂಟು ಚಮಚ ಎಳ್ಳು (ಚಳಿಗಾಲದಲ್ಲಿ ಒಂದಷ್ಟು ಜಾಸ್ತಿ ಹಾಕಿದರೂ ನಡೆದೀತು)
ಎರಡು ಚಮಚ ಜೀರಿಗೆ
ಖಾರಕ್ಕೆ ತಕ್ಕಂತೆ ಒಣ ಮೆಣಸಿನಕಾಯಿ - ಬ್ಯಾಡಗಿ (ನಾಲ್ಕೈದು ಹಾಕಿದರೆ ಆದೀತು)
ಎಂಟು ಹತ್ತು ಕಾಳು ಮೆಣಸು
ಒಂದು ಚಮಚ ಲವಂಗ
ಏಳೆಂಟು ಪಲಾವ್ ಎಲೆ - ಪುಡಿ ಮಾಡಿ ಬಳಸಿದರೆ ಒಳ್ಳೆಯದು
ಎರಡು ಚಮಚ ಅರಿಶಿನ ಪುಡಿ
೧/೪ ಚಮಚ ಹಿಂಗು
ಸ್ವಲ್ಪ ಶೇಂಗ ಎಣ್ಣೆ
(ಇದ್ದರೆ ಗುರೆಳ್ಳು, ಗಸಗಸೆ ಕೂಡ ಹಾಕಬಹುದು)
ಮೇಲಿನದ್ದೆಲ್ಲವನ್ನೂ ಹುರಿದುಕೊಂಡು ಒಟ್ಟು ಮಾಡಿ ತಣ್ಣಗಾದ ನಂತರ ಪುಡಿ ಮಾಡಿಟ್ಟುಕೊಳ್ಳಬಹುದು. ಕೊಬ್ಬರಿ, ಗಸಗಸೆ, ಮೆಣಸಿನಕಾಯಿ - ಇವುಗಳನ್ನು ಎಣ್ಣೆ ಉಪಯೋಗಿಸದೆ ಹುರಿದಿಟ್ಟುಕೊಳ್ಳಬಹುದು.
ಅಕ್ಕಿ ಹಾಗು ಹೆಸರು ಬೇಳೆಯನ್ನು ತೊಳೆದು ನೆನೆಸಿಟ್ಟುಕೊಳ್ಳಬೇಕು. ಅರ್ಧ ಗಂಟೆಗಳ ಕಾಲ ನೆನೆಸಿಟ್ಟರಾಯಿತು.
ಕುಕ್ಕರಿನ ಬಾಣಲೆಯಲ್ಲಿ ತುಪ್ಪದಲ್ಲಿ ಜೀರಿಗೆ, ಹಸಿರು ಮೆಣಸಿನಕಾಯಿ, ಶುಂಠಿ ಹಾಕಿ ಹುರಿದಿಟ್ಟುಕೊಳ್ಳಬೇಕು.
ಅದಕ್ಕೆ ಅಕ್ಕಿ, ಹೆಸರು ಕಾಳು, ಅರಿಶಿನ, ಮೇಲೆ ತಯಾರಿಸಿದ ಮಸಾಲೆ, ಸ್ವಲ್ಪ ಹಿಂಗು, ಬೆಲ್ಲ, ಹಾಗೂ ಅಳತೆಗೆ ತಕ್ಕಂತೆ ಉಪ್ಪು ಹಾಕಿ, ಜೊತೆಗೆ ನಾಲ್ಕು ಕಪ್ಪು ನೀರು ಹಾಕಿ ಕುಕ್ಕರಿನಲ್ಲಿಟ್ಟು ನಾಲ್ಕೈದು ಬಾರಿ ಕೂಗು ಬರುವವರೆಗೆ ಬೇಯಿಸುವುದು.