ಮೊದಲ ಮೋಸ
ಏನೋ ಒಂದು ಕಾಲ್ ಇಲ್ಲ ನಾನೇ ಮಾಡಬೇಕ..
ಹಾಗೇನು ಇಲ್ಲ ಹೇಳು.
ಆರಾಮ ಆಗಿದಿಯಾ ಅಂತ ಪೋನ್ ಮಾಡ್ದೆ
ಆರಾಮು.
ಸರಿ ಯಾಕೆ ಧ್ವನಿ ಸಣ್ಣ ಆಗಿದೆ ಯಾಕೆ ?
ಹಾಗೇನು ಇಲ್ಲ ..
ಕೆಲವುದಿನಗಳಿಂದ ಈಗೇ ಇರೋದಲ್ವಾ
ಹೌದು ಆದರೆ ಕಳೆದ ಎರಡು ದಿನಗಳಿಗೆ ಹೋಲಿಕೆ ಮಾಡಿದರೆ
ಯಾಕೆ ಸಪ್ಪೆಯಾಗಿದೆ.....
ಹಾಗೇನ್ ಎಲ್ಲ ಬಿಡು..
ಪುಟ್ಟ ಅವಳು ಅದೇಗೆ ಇದನ್ನೆಲ್ಲಾ ಎದುರಿಸಿ ನಿಂತಿದ್ದಾಳೆ, ನಿಜವಾಗಿಯೂ ಅವಳು ಬಹಳಷ್ಟು ಧೈರ್ಯವಂತೆ ಕಣೆ
ಹುಡುಗಿಯರು ಅಂದ್ರೆ ಅವಳನಂತೆ ಇರಬೇಕು ನೋಡು , ನಾನು ಇದಿನಿ ಇಷ್ಟು ಸಣ್ಣ ವಿಷಯಕ್ಕೆ ಜೀವನದ ಮೇಲೆ ಆಸೆಯೇ ಹೋಗಿರುವಾಗೆ ಇದ್ದೆನೆ ಆದರೆ ಅವಳು ತನ್ನ ಮನೆಯ ದೀಪವೇ
ಕರಗಿ ಹೋದರು ಏನು ಆಗಿಲ್ಲ ಎಂಬಂತೆ ಅದೆಷ್ಟು ಧೈರ್ಯದಿಂದ ಆತ್ಮವಿಶ್ವಾಸದಿಂದ ಇದ್ದಾಳೆ..
ಹೌದು ಅಣ್ಣ ಅವರ ಮನೆಯಲ್ಲಿ ಇದುವರೆಗೂ ಮಾವ ಸತ್ತ ನಂತರದಲ್ಲಿ ಎಲ್ಲರೂ ಕಣ್ಣಿರಿನಲ್ಲಿ ಮುಳುಗಿದ್ದಾರೆ ಯಾರೇ ಎಷ್ಟೇ ಪ್ರಯತ್ನ ಮಾಡಿದರು ಅವರನ್ನು ಸಮಾಧಾನ ಮಾಡಲು ಅಸಾಧ್ಯವಾಯಿತು ಅಣ್ಣ. ಆದರೆ ಅವಳೊಬ್ಬಳು ಇದುವರೆಗೂ ಒಂದು ಹನಿ ಕಣ್ಣೀರು ಹಾಕಿಲ್ಲ. ತನ್ನ ತಂದೆಯ ಸಾವು ?
ಅಣ್ಣ ನನಗೆ ಅದೆಷ್ಟು ಬೇಸರ ಮಾವನನ್ನು ಕಳೆದುಕೊಂಡು ತನ್ನ ಸ್ವಂತ ತಂದೆಯನ್ನು ಕಳೆದುಕೊಂಡರು ಅವಳು ಹೇಗಿದ್ದಾಳೆ ನೋಡು.
ಹೌದು ಪುಟ್ಟ ಅವಳು ಹೇಳ್ತಾನೆ ಇರ್ತಾಳೆ ನನ್ನೊಂದಿಗೆ ಮಾತನಾಡಿದಾಗ ಪಾಪ ಕಣೆ ಅವಳು ..
ಅಣ್ಣ ಮಾವನಿಗೆ ತನ್ನ ಸಾವಿನ ವಿಷಯ ತಿಳಿದಾಗಲೇ ಅವಳನ್ನು ಕರೆದುಕೊಂಡು ಎಲ್ಲಕಡೆ ಸುತ್ತಾಡುತ್ತ ತನ್ನ ಮಗಳಿಗೆ ಧೈರ್ಯ ಹಾಗೂ ಆತ್ಮವಿಶ್ವಾಸ ಬರುವಂತೆ ಹಾಗೂ ಮೊದಲಿನಿಂದಲೂ ಅವಳನ್ನು ಬೆಳೆಸಿದ್ದು ಮಾವನೇ.
ಶ್ರೀಮಂತ ಮನೆಯ ಹುಡುಗಿ ಅವಳಿಗೆ ಎಲ್ಲವು ಕೈಗೆ ಸಿಗುವಷ್ಟು ಹತ್ತಿರದಲ್ಲಿ ಇತ್ತು. ಅವಳಿಗೆ ಆಸೆಗಳೇ ಇಲ್ಲ ಅಣ್ಣ ಯಾಕೆಂದರೆ ಮಾವ ಅಂದ್ರೆ ಅವರ ತಂದೆ ಎಲ್ಲವನ್ನೂ ಅವಳಿಗಾಗಿ ಮಾಡಿದ್ದಾರು ಅವರೊಬ್ಬ ಆದರ್ಶ ವ್ಯಕ್ತಿ ಅವರೊಬ್ಬರು ನೂರಾನೇ ಬಲದಂತೆ ಆ ಮನೆಯಲ್ಲಿ ತನ್ನ ಹೆಂಡತಿ ಮಕ್ಕಳಿಗಾಗಿ ಎಲ್ಲವನ್ನೂ ಮಾಡಿದರು ಆದರೆ ಯಾವತ್ತೂ ಸ್ವಾರ್ಥಿಯಾಗಲಿಲ್ಲ, ತನ್ನ ತಂಗಿ ಮಕ್ಕಳಿಗಾಗಿ ಆದರಲೂ ನಿನ್ನ ಬಹಳಷ್ಟು ಇಷ್ಟ ಪಡುತ್ತಿದ್ದರು ಗೊತ್ತಲ್ವಾ, ಅವರು ಹೆಚ್ಚಾಗಿ ಯಾರ ಮನೆಗೂ ಹೋಗುತ್ತಿರಲಿಲ್ಲ. ಹೆಚ್ಚೆಂದರೆ ನಿಮ್ಮ ಮನೆ ಹಾಗೂ ಈಸೂರು ಅಷ್ಟೇ ಅಣ್ಣ..
ಅದೊಂದು ಸುಂದರ ಕುಟುಂಬ ಅಲ್ವಾ ಅಣ್ಣ ನಾವು ಯಾರು ಕೂಡ ಇಂತಹದ ಘಟನೆ ನಡೆದು ಹೋಗುತ್ತೆ ಅಂತ ಊಹೆ ಕೂಡ ಮಾಡಲಿಲ್ಲ. ವಿಚಿತ್ರ ಅಲ್ವಾ ನಮ್ಮ ಮಾವನಿಗೆ ಒಂದು ಕೆಟ್ಟ ಚಟ ಕೂಡ ಇರಲಿಲ್ಲ. ನಿಯತ್ತಾಗಿ ಪೋಲಿಸ್ ಕೆಲಸದಲ್ಲಿ ಮುಳುಗಿದ್ದರು ಆದರೆ ಯಾರಿಗೂ ಸೂಚನೆ ಕೊಡದೆ ಬಂದ ಕ್ಯಾನ್ಸರ್ ಅವರನ್ನು ಕರೆದುಕೊಂಡು ಹೋಯ್ತು ...
ಅಣ್ಣ ಆ ಸಮಯದಲ್ಲಿ ಅವರ ಪರಿಸ್ಥಿತಿ ಅವರಿಗೆ ಗೊತ್ತು ಗಂಡು ಮಗನಿಲ್ಲ ಅವಳೊಬ್ಬಳು ಮಾತ್ರ ತನ್ನ ಓದನ್ನು ಬಿಟ್ಟು ತನ್ನ ತಂದೆಯ ಸಹಾಯಕ್ಕೆ ನಿಂತಳು ಅವಳು ಡಾಕ್ಟರ್ ಓದಬೇಕು ಅಂತ ಅದೆಷ್ಟು ಆಸೆ ಇತ್ತು. ಮೆಡಿಕಲ್ ಸೀಟು ಮಂಗಳೂರಿನಲ್ಲಿ ಸಿಕ್ಕಿತು. ಹೋಗಬೇಕು ಎಂದಾಗಲೇ ಮಾವನಿಗೆ ಈಗೆ ಆಯ್ತು.
ಹೌದು ತಂಗಿ ಈ ಎಲ್ಲ ವಿಷಯ ತಿಳಿದು ನನಗೆ ನಂಬಲು ಅಸಾಧ್ಯ ಮಾವ ಇಲ್ಲ ಎಂದು ಕೊಳ್ಳಲು ನನ್ನಿಂದ ಆಗದು ನಮ್ಮೊಂದಿಗೆ ಇದ್ದಾರೆ ಎಂಬ ಭಾವನೇ ..
ಧಾರವಾಡ ಆಗಷ್ಟೇ ನನ್ನ ಮನಸ್ಸು ಒಂದಿಷ್ಟು ದುಖಃದಲ್ಲಿ ಮುಳುಗಿತ್ತು. ಕಾರಣ ನಂಬಿಕೆ ಎಂಬ ಪದದ ಅರ್ಥ ಸತ್ತು ಹೃದಯ ದಿನೇ ದೀನೇ ಪರದಾಡುವಂತಹ ಸ್ಥಿತಿಯಲ್ಲಿತ್ತು.
ಇದರಿಂದ ಹೊರ ಬರಲು ಧಾರವಾಡದಲ್ಲಿರುವ ಚಿಕ್ಕಮ್ಮನ ಮನೆಯೇ ಸರಿ ಎಂದು ಹೊರಡಲು ಮುಂದಾದೆ. ನನಗೆ ತಂಗಿಯಾ ಮೇಲೆ ಅತೀವ ಪ್ರೀತಿ , ಜಾಣೆಯಷ್ಟೇ ಅವಳ ಮೇಲೆ ಪ್ರೀತಿ ..
ಹಾಗೆ ಸುಶ್ಮಿತಳನ್ನು ನೋಡಿ ಮಾತನಾಡಿಸಿಕೊಂಡು ಅವಳಿಗೆ ಹಾಗೂ ಅತ್ತೆ ಗೆ ಒಂದಿಷ್ಟು ಧೈರ್ಯ ಹೇಳಿ ಬರೋಣ ಅಂದುಕೊಂಡೆ.
ಧಾರವಾಡ ಬಂದು ನನ್ನ ಮನಸ್ಸು ಮತ್ತಷ್ಟು ನೋವನ್ನು ಪಡಲು ಆರಂಭಿಸಿತ್ತು. ಇದರಿಂದ ಹೊರ ಬರಲು ಆಗದಷ್ಟು ಒದ್ದಾಡುವ ಸ್ಥಿತಿ.
ಈ ನಡುವೆ ಸುಶ್ಮಿತ ಮನೆಗೆ ಬರುವಂತೆ ಒತ್ತಾಯ ಮಾಡುತ್ತಿದ್ದಳು. ಮನಸ್ಸು ಸರಿ ಇಲ್ಲದ ಕಾರಣ ಸುಮ್ಮನೆ ಕಾರಣಗಳನ್ನು ಕೊಡುತ್ತ ದಿನಗಳನ್ನು ತಳ್ಳಿದೆ. ಆದರೆ
ಈ ಬಾರಿ ಮಾವನ ನೆನಪು ಹೆಚ್ಚಾಗಿತ್ತು. ಒಮ್ಮೆ ಅವರಿದ್ದ ಮನೆಯನ್ನು ನೋಡವ ಸಲುವಾಗಿ ಹೊರಟೆ. ಅವತ್ತು ನನ್ನ ಸಮಸ್ಯೆ ಸುಶ್ಮೀತಳ ಸಮಸ್ಯೆ ಮುಂದೆ ತೀರಾ ಚಿಕ್ಕದಾಗಿ ಕಾಣಿಸಿತ್ತು.
ಬರಿ ಮಾವನ ನೆನಪುಗಳು ನನಗೆ ನನ್ನ ಮಾವನ ಮೇಲೆ ಪ್ರೀತಿ ಹಾಗೂ ಭಯ ಎರಡು ಇದ್ದವು.
ಸುಮಾರು 9ಕಿ.ಮೀ ದೂರದ ದಾರಿಯನ್ನು ಮನಸ್ಸು ನಡೆದುಕೊಂಡೆ ಸಾಗಿತ್ತು. ಒಮ್ಮೆ ಯೋಚಿಸಿ ಆಯಾಸ ಆಗಲೇ ಇಲ್ಲ ಕಾರಣ ಮನಸ್ಸು ಅಷ್ಟೊಂದು ಕೆಟ್ಟಿತ್ತು.
ಮನೆ ಒಳ ಬಂದವನಿಗೆ ಮಾವ ನನ್ನ ಪಕ್ಕದಲ್ಲಿ ಇರುವಂತೆ ಭಾಸವಾಗಿತ್ತು. ಕೊಂಚ ನಾನು ನನ್ನ ಮಾವನನ್ನೇ ಹೋಲುತ್ತಿದ್ದರಿಂದ ಅತ್ತೆ ನನ್ನ ಕಂಡ ಕೂಡಲೇ ಕಣ್ಣಿರ ಹಾಕಲು ಆರಂಭಿಸಿದ್ದರು.
ಸುಶ್ಮೀತ ಇನ್ನು ಮನೆಗೆ ಬಂದಿರಲಿಲ್ಲ. ಅವಳ ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತದಿಂದ ಅವಳಿಗೆ ಪ್ರೈಮರಿ ಶಾಲೆಯಲ್ಲಿ ಟೀಚರ್ ಕೆಲಸ ಸಿಕ್ಕಿದ್ದಳು ಅವಳು ಓದಿದ್ದು ಬರಿ ಪಿ,ಯು,ಸಿ , ಪಿ,ಯು,ಸಿನಲ್ಲಿ ಸೈನ್ಸ್ ನಲ್ಲಿ 89% ಅಂಕ ಗಳಿಸಿದ್ದಳು ಅವಳಿಗೆ ಡಾಕ್ಟರ್ ಆಗುವ ಕನಸು ಇತ್ತು ಮಾವನ ಆಸೆಯು ಅದೆ.
ಸುಶ್ಮೀತ ಮೊದಲಿನಿಂದಲೂ ಯಾರ ಬಳಿಯು ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಅದರಲ್ಲೂ ಇದುವರೆಗೂ ಅವಳಿಗೆ ಒಬ್ಬ ಹುಡುಗರು ಗೆಳೆಯರು ಅಂತ ಯಾರು ಇರಲಿಲ್ಲ.
ಒಬ್ಬನೇ ಅಂದ್ರೆ ಅದು ನಾನೊಬ್ಬನೇ, ಮೊದಲಿನಿಂದಲೂ ಅವಳು ನನ್ನೊಂದಿಗೆ ಬಹಳಷ್ಟು ಸಲಿಗೆಯಾಗಿದ್ದಳು ಇಬ್ಬರು ಬಹಳಷ್ಟು ಕ್ಲೋಸ್ ಆಗಿದ್ದೆವು. ಅವಳಿಗೆ ನನ್ನ ಮೇಲೆ ಪ್ರೀತಿ ಚಿಗುರಿತ್ತು, ಅದು ತಿಳಿಯುವ ಸಮಯಕ್ಕೆ .....
ಸಾಮಾನ್ಯವಾಗಿ ನಾವಿಬ್ಬರೂ ಮನೆಯಲ್ಲಿ ಹಾಗೂ ಯಾರ ಮುಂದೇನು ಮಾತನಾಡುವುದಿಲ್ಲ. ಅವಕಾಶ ಸಿಕ್ಕರೆ ಮಾತ್ರ ಮಾತನಾಡುವುದು ಅಂದು ಸಂಜೆ ಬಂದವಳಿಗೆ ನನ್ನೊಂದಿಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಇಡೀ ರಾತ್ರಿ ಲೈಟ್ ಆಫ್ ಕೂಡ ಮಾಡದೇ ನಾನು ಮಲಗಿದ್ದರು ಅವಳು ನನ್ನೇ ನೋಡಿಕೊಂಡು ಕೂಳಿತಿದ್ದಳು. ಹಾಗೊಮ್ಮೆ ಈಗೊಮ್ಮೆ ಬಳಿ ಬಂದು ಕೆನ್ನೆ ಗಿಂಡಿ ಹೋಗ್ತಿದ್ದಳು ಎಚ್ಚರವಾಗಲಿ ಎಂದು.
ನಾನು ನಾಳೆಯೇ ಹೊರಡುವ ತಿರ್ಮಾನಕ್ಕೆ ಬಂದಿದ್ದೆ ಕಾರಣ ಅತ್ತೆ ನನ್ನ ನೋಡುತ್ತಲೆ ಮತ್ತಷ್ಟು ಮಾವನನ್ನು ನೆನೆದು ಕಣ್ಣಿರು ಹಾಕುತ್ತಿದ್ದರು ಆ ದೃಶ್ಯ ಕರುಳು ಕಿತ್ತು ಬರುವಂತೆ ಇತ್ತು. ಅದೆ ಕಾರಣ ನಾನು ಹೊರಟಿದ್ದೆ ಒಂದೆ ದಿನಕ್ಕೆ.
ಮುಂಜಾನೆ ಸಮಯಕ್ಕೆ ಸುಶ್ಮೀತಳನ್ನು ಅವಳು ಕೆಲಸ ಮಾಡುತ್ತಿದ್ದ ಶಾಲೆಯ ಬಳಿ ಬಿಡುವಂತೆ ಅತ್ತೆ ಹೇಳಿದ್ದರಿಂದ ನಾನು ಒಪ್ಪಿಕೊಂಡೆ ಅದೆ ಮೊದಲ ಬಾರಿ ನಾನು ಅವಳು ಸ್ಕೂಟಿಯಲ್ಲಿ ಜೊತೆಯಾಗಿ ಹೋಗುತ್ತಿದದ್ದು. ಹಾಗೂ ಮೊದಲ ಬಾರಿ ಒಂದು ಹುಡುಗಿಯೊಂದಿಗೆ ನಾನು ಹಾಗೆ ಸಾಗುತ್ತಿದದ್ದು.
ಅಂದು ನನಗೆ ಯಾವ ರೀತಿಯು ಅನ್ನಿಸಲೇ ಇಲ್ಲ ಕಾರಣ ಮಾವನ ನೆನಪು.
ಆದರೆ ನನ್ನ ಮನಸ್ಸು ಅವಳನ್ನು ಗೇಲಿ ಮಾಡುವ ನೆಪದಲ್ಲಿ ಯಾರಿಗೆ ತಾನೇ ಇಂತಹ ಅವಕಾಶ ಮದುವೆಗೆ ಮುಂಚೆಯೇ ಸಿಗುತ್ತೆ ಹೇಳು ಎಂದೆ. ಅವಳು ಹೌದು ಎನ್ನುತ್ತಲೆ ತನ್ನ ತಲೆಯನ್ನು ನನ್ನ ಭಜದ ಮೇಲಿಟ್ಟು , ಇವತ್ತು ಸಕತ್ ಸಂತೋಷ ಕಣೋ ಸಂಜು ಎಂದಳು ನಾನು ಆಗಲೇ ತಿಳಿದಿದೆ. ಕಾರಣ
ಅವಳಿಗೆ ನನ್ನ ಮೇಲೆ ಇನ್ನೂ ಪ್ರೀತಿ ಇದೆ ಎಂದು ನಾನು ಈಗಾಗಲೇ ಅವಳಿಗೆ ನನ್ನ ಹಾಗೂ ಜಾಣೆಯ ವಿಷಯ ಸಂಪೂರ್ಣ ತಿಳಿಸಿದ್ದೆ. ವಿಷಯ ತಿಳಿದ ಅವಳು ನೀವಿಬ್ಬರೂ ಖಂಡಿತಾ ಒಂದಾಗ ಬೇಕು ಒಂದು ಆಗ್ತಿರ ಎಂದು ಹೇಳಿದ್ದಳು.
ರಸ್ತೆಯಲ್ಲಿ ಆಗಷ್ಟೇ ಜನ ಜಂಜಾಟ ಶುರುವಾಗಿತ್ತು. ಹಿಂದೆ ಕುಳಿತವಳು ನನ್ನ ಕೆನ್ನೆ ಹಿಡಿದು ಗಿಂಡುತ್ತಿದ್ದಳು. ಲೇ ಮೆಂಟಲ್ ರಸ್ತೆ ಇದು ಜನ ನೋಡ್ತಿದ್ದಾರೆ ಏನ್ ಅನ್ಕೋತ್ತಾರೆ ಅಂದರು
ನನ್ನ ಮಾತು ಕೇಳಿಸಿ ಕೊಳ್ಳುವುದರಲ್ಲಿ ಅವಳು ಇರಲಿಲ್ಲ.
ಅವಳು ಸಂತೋಷವಾಗಿದ್ದಳು ಬಹಳ ದಿನಗಳ ಮೇಲೆ ಆ ಮೊಗದಲ್ಲಿ ನಗುವೊಂದು ಮೂಡಿತ್ತು. ಲೋ ಇಷ್ಟು ಬೇಗ ಬಂದ್ಯಾಲ್ಲೋ ಹೋಗಿ ಹೋಗಿ ನಿನಗೆ ಡೈವ್ ಮಾಡು ಅಂತ ಹೇಳಿದೆ ನೋಡು ಸರಿ ಹೊರಡು ಎಂದಳು..
ನನ್ನ ಮನಸ್ಸು ಸಂಪೂರ್ಣ ಮುಂದೆ ಆಗಲಿರುವ ತಪ್ಪಿನ ಬಗ್ಗೆ ಮಾಹಿತಿ ನೀಡಿತ್ತು.
ಅವಳಿಗೆ ಕಾಲ್ ಮಾಡಿ ನೋಡು ನನ್ನ ಜಾಸ್ತಿ ಅಚ್ಚಿಕೊ ಬೇಡ ಸರಿಯಾಗಲ್ಲ ಹಾಗೆ ನನ್ನ ಮದುವೆಯಾಗುವ ಕನಸೆಲ್ಲ ಇದ್ದರೆ ಬೇಡ ಎಂದೆ ಅದು ಆಗದ ಮಾತು ನೀನು ಎಲ್ಲಿ ನಾನು ಎಲ್ಲಿ?
ನಾನು ಈಗಾಗಲೇ ಜಾಣೆಯೊಂದಿಗೆ ಪ್ರೀತಿಯಲ್ಲಿ ಇರುವ ವಿಷಯ ತಿಳಿದಿದೆ ನಿನಗೆ. ನನ್ನಿಂದ ಅಸಾಧ್ಯ ಅದು ಅವಳಿಲ್ಲದೆ ನಾನು ಬದುಕಲಾರೆ ದಯವಿಟ್ಟು ....
ನನ್ನೊಂದಿಗೆ ಯಾರು ಇಲ್ಲ?
ಯಾಕೆ ಆ ದೇವರು ಯಾವಾಗಲೂ ನನ್ನನ್ನು ಒಂಟಿಯಾಗಿರುವಂತೆ ಮಾಡ್ತಾನೆ ನಾನು ಸಾಯುವೆ ಬದುಕುವ ಇಷ್ಟ ನನಗಿಲ್ಲ.
ಈಗೆಲ್ಲ ಸಂದೇಶಗಳು ಅವಳಿಂದ ಬಂದ ಕೂಡಲೇ ಮನಸ್ಸು
ಹೆದರಲು ಶುರು ಮಾಡಿತು. ಕಾರಣ ಮೊದಲೇ ತಂದೆಯನ್ನು ಕಳೆದುಕೊಂಡಿರುವ ಜೀವ ಅದು ನನ್ನ ಅತಿಯಾಗಿ ಪ್ರೀತಿ ಮಾಡ್ತಿದ್ದಾಳೆ ಇದೆ ವಿಷಯಕ್ಕೆ ಜೀವಕ್ಕೆ ಅಪಾಯ ಮಾಡಿಕೊಂಡರೇನು ಅಂತ ಕೆಟ್ಟ ರೀತಿ ಯೋಚನೆ ಮಾಡಲು ಶುರು ಮಾಡಿತ್ತು.
ಅವಳಿಗೆ ಕಾಲ್ ಮಾಡಿ ರಾತ್ರಿಯಾಗಿದೆ ಮೊದಲು ಮನೆಗೆ ಹೋಗುವಂತೆ ಎಷ್ಟು ಒತ್ತಾಯ ಮಾಡಿದರು ಒಂದೆ ಹಠ ನಾನು ಆಮೇಲೆ ಹೋಗ್ತಿನಿ ಒಂಟಿಯಾಗಿ ಇರಬೇಕು ಎಂಬುವುದು ..
ಸರಿ ಎ.ಟಿಟಿಎಫ್ ಕಡೆ ಬಾ ಎಂದಳು.
ಸರಿಯಾಗಿ ಹತ್ತು ನಿಮಿಷದ ನಂತರ ಸ್ಕೂಟಿಯಲ್ಲಿ ಬಂದಳು ಸರಿ ಬಾ ಎಂದು ಹತ್ತಿಸಿಕೊಂಡು ಹುಬ್ಬಳ್ಳಿ ರಸ್ತೆಯಲ್ಲಿ ಹೊರಟೆವು.
ಅದೆಷ್ಟು ಬಾರಿ ಎಲ್ಲಿಗೆ ಎಂದು ಕೇಳಿದರು ಅವಳು ಹೇಳಲೆ ಇಲ್ಲ ಬ್ಯಾಗ್ ತನ್ನ ಕೈಗೆ ಕೊಟ್ಟು ಒಂದಿಷ್ಟು ದೂರದಲ್ಲಿ ಸ್ಕೂಟಿ ನಿಲ್ಲಿಸಿದಳು ನಾನು ಇಳಿದೇ ಬ್ಯಾಗ್ ಅವಳಿಗೆ ಕೊಟ್ಟೆ ಆಗ ಮನಸ್ಸು ಇವಳು ನನ್ನ ಇಲ್ಲಿವರೆಗೂ ಕರೆದುಕೊಂಡು ಬಂದು ಬಿಟ್ಟು ಹೋಗ್ತಾಳೆ ಎಂದು ಊಹಿಸಿ ..
ನಿನ್ನ ಬ್ಯಾಗ್ ಕೊಡು ಎಂದು ಕೂಗಿದೆ ಅವಳು ನನ್ನ ಪರಿಸ್ಥಿತಿ ಕಂಡು ನಗಲು ಶುರುಮಾಡಿದಳು.
ಆಗಷ್ಟೇ ಮಳೆಯು ಆರಂಭವಾಗಿತ್ತು. ಬಹುಶಃ ಅದಕ್ಕು ನಮ್ಮಿಬ್ಬರ ಮನದಲ್ಲಿ ಅಡಗಿರುವ ದುಖಃದ ಪರಿಚಯವಾಗ ಬೇಕಿತ್ತು ಅಂತ ಕಾಣಿಸುತ್ತೆ.
ಇದೆ ಸರಿಯಾದ ಸಮಯ ಎಂದು ನಾನು ನನ್ನ ಹಾಗೂ ಅವಳ ಪರಿಸ್ಥಿತಿ ವಿವರಿಸಲು ಮುಂದಾದೆ. ಅವಳು ಮೌನವಾಗಿಯೇ ಇದ್ದಳು. ಒಮ್ಮೆ ನನ್ನ ಕೈ ಹಿಡಿದು ಕೊಂಡಳು ನಾನು ನನ್ನ ಸಮಸ್ಯೆಯ ಮೂಲಕ ಅವಳಿಗೆ ಬುದ್ದಿ ಹೇಳಲು ಮುಂದಾದೆ.
ಬಹುಶಃ ಬೇರೆ ಯಾರಾದರೂ ಆಗಿದ್ದರೆ ಅದೊಂದು ಪರಿಸ್ಥಿತಿಯಲ್ಲಿ ಆ ಜೀವದ ಮೇಲೆ ಅನುಕಂಪವಾದರು ತೋರಿಸುವ ನಾಟಕವಾದರು ಮಾಡ್ತಿದ್ದರು ಆದರೆ.
ಜಾಣೆಯ ಎಲ್ಲಿದ್ದ ಪ್ರೀತಿ ನನಗೆ ಏನನ್ನು ಮಾಡಲು ಮಾತನಾಡಲು ಆಗಲಿಲ್ಲ. ಕಾರಣ ಜಾಣೆಯನ್ನು ನಾನು ಸಾಕಷ್ಟು
ಪ್ರೀತಿಸುತ್ತಿರುವೇ ಒಂದೊಂದೇ ವಿಷಯ ಅವಳೆದು ಎಳೆಎಳೆಯಾಗಿ ಹೇಳುವಾಗ ಮಳೆಯು ಜೋರಾಗಿ ಬರತೊಡಗಿತ್ತು. ನನ್ನ ಕಣ್ಣಲ್ಲಿ ಜಾಣೆಯ ನೆನೆದು ಕಣ್ಣಿರು ಬರಲು ಆರಂಭವಾಗಿತ್ತು. ಕಾರಣ ಒಂದು ಸಣ್ಣ ಸಮಸ್ಯೆ ನಮ್ಮಿಬ್ಬರನ್ನು ಮೂರನೇ ವ್ಯಕ್ತಿ ದೂರ ಇರುವಂತೆ ಮಾಡಿದ್ದ ಅದೆಷ್ಟೋ ದಿನಗಳು ಕಳೆದು ಹೋಗಿದ್ದವು ಅವಳೊಂದಿಗೆ ಮಾತನಾಡಿ ಅವಳು ಹೇಗಿದ್ದಾಳೆ ಆರಾಮವಾಗಿದ್ದಾಳೆಯೇ ಇಲ್ಲವೋ ಒಂದು ತಿಳಿಯದೆ ಹೃದಯ ಸಂಕಷ್ಟದಲ್ಲಿತ್ತು. ಅದೆ ನೋವು ಕಣ್ಣಿರ ಮೂಲಕ ಹೊರ ಬಂದಿತ್ತು. ಆ ರಾತ್ರಿ ಸುಶ್ಮೀತ ನನ್ನ ಕಣ್ಣೀರು ಒರೆಸುತ್ತಾ ನೋಡು ನನಗೆ ಎಲ್ಲವು ಅರ್ಥವಾಗುತ್ತೆ. ನಿನಗೆ ನಿನ್ನ ಜಾಣೆ ಸಿಕ್ಕೆ ಸಿಗ್ತಾಳೆ ಅವಳನ್ನು ನಿನ್ನಿಂದ ದೂರ ಮಾಡಲು ಆಗಲ್ಲ. ಖಂಡಿತಾ ಎಂದಳು.
ನನ್ನನ್ನು ದಯವಿಟ್ಟು ಕ್ಷಮಿಸು ನಾನು ಇದುವರೆಗೂ ಯಾರಿಗೂ ಮೋಸ ಮಾಡಿಲ್ಲ ಆದರೆ ಇವತ್ತು ಮೋಸ ಮಾಡ್ತಾ ಇದಿನಿ ಅದು ನೋಡು ನಿನಗೆ ಎಷ್ಟು ನೈಸ್ ಆಗಿ ಮೋಸ ಮಾಡ್ತಾ ಇದಿನಿ ಎಂದೆ.
ಹೇ ಹಾಗೆಲ್ಲ ಏನು ಇಲ್ಲ ಜಾಣೆಯ ಅಗತ್ಯ ನಿನ್ನ ಜೀವನದಲ್ಲಿ ಎಷ್ಟು ಅಗತ್ಯ ಇದೆ ಅಂತ ನನಗೆ ತಿಳಿದಿದೆ ಎಂದಳು.
ಅವಳ ಕಣ್ಣುಗಳು ಹಾಗೂ ತನ್ನ ಬಲಗೈಯನ್ನು ಅವಳು ಬಹಳಷ್ಟು ಗಟ್ಟಿಯಾಗಿ ಹಿಡಿದಿದ್ದಳು ಅದುವೇ ಸಾಕಿತ್ತು. ನನಗೆ ನಿನ್ನ ಅಗತ್ಯ ಎಷ್ಟು ಇದೆ ಎಂದು ಹೇಳುವಂತೆ ಇತ್ತು.
ಕರಳು ಕಿತ್ತು ಬರುವಂತೆ ಅನ್ನಿಸುತ್ತಿತ್ತು. ಒಂದೊಂದು ಆ ದೇವರಿಗೆ ಬೈಯುವ ಮನಸ್ಸು, ಆ ಕಣ್ಣುಗಳು ನನಗೆ ಯಾರು ಇಲ್ಲ ತಂದೆಯನ್ನು ಕಳೆದುಕೊಂಡಿರುವೆ ನನಗೆ ಅಂತ ಇರೋದು ನೀನೊಬ್ಬನೇ ಅಂತ ಹೇಳುತ್ತಿತ್ತು.
ಅಪ್ಪ ಬಿಟ್ಟರೆ ಈಗೇ ನನ್ನ ಕೈ ಹಿಡಿದವನು ನೀನೊಬ್ಬನೇ ಅಂದಳು ಅಬ್ಬಾ ಮನಸ್ಸು ಗೊಂದಲಕ್ಕೆ ಸಿಲುಕಿತ್ತು. (ಅಲ್ಲಿನ ಪರಿಸ್ಥಿತಿ ನನಗೆ ಸರಿಯಾಗಿ ವಿವರಿಸಲು ಸಾಧ್ಯವಾಗುತ್ತಿಲ್ಲ)
ನೋಡು ಜೀವನ ಇಷ್ಟೇ ಯಾರ ಮೇಲು ನಂಬಿಕೆ ಇಡಬೇಡ ಯಾವುದು ಶಾಶ್ವತವಲ್ಲ ಮಾವನ ಆಸೆಯಂತೆ ನೀನು ಡಾಕ್ಟರ್ ಆಗಬೇಕು.
ಸರಿ ಆದರೆ ಒಂದು ಮಾತು ನೀನು ಜಾಣೆಯೊಂದಿಗೆ ಇರು ಆದರೆ ಒಂದು ಮಾತು ನಾನು ನಿನಗೆ ಸಿಕ್ಕರೆ ನನ್ನ ಚನ್ನಾಗಿ ನೋಡ್ಕೋಬೇಕು.. ಯಾಕೆ ಅಂದ್ರೆ ಅಪ್ಪ ನನ್ನ ಹೀಗೆ ನೋಡ್ಕೋತ ಇದ್ದರು.. ಆ ಸಮಯಕ್ಕೆ ಮನಸ್ಸು ನೇರವಾಗಿ ಉತ್ತರ ಹೇಳದೆ
ಇದೊಂದು ಮಾತು ನನ್ನಿಂದ ಆಗದು ಈ ಮನಸ್ಸಿಗೆ ಜಾಣೆ ಬಿಟ್ಟರೆ ಬೇರೆ ಯಾರ ಆಗಮನ ಆಗದು. ಅವಳೊಬ್ಬಳಿಗೆ ಮೀಸಲು ಈ ಜಾಗ ಅವಳಿಗಾಗಿ ಈ ನನ್ನ ಪ್ರೀತಿ, ಹೃದಯ ಇದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಅಸಾಧ್ಯ ಎಂದುಕೊಂಡೆ ಮನಸ್ಸಿನಲ್ಲಿ. ಅವಳು ಅದೆಷ್ಟು ಹೇಳಿದರು ನಾನು ನನ್ನ ಜಾಣೆಯ ಜಪದಲ್ಲಿ ಮುಳುಗಿದ್ದೆ.
ಕೊನೆಗೆ ನೋಡು ಜಾಣೆಯನ್ನು ಯಾವತ್ತಿಗೂ ಕಳೆದುಕೊಳ್ಳಬೇಡ ನಿನ್ನ ಸ್ಥಾನದಲ್ಲಿ ಬೇರೆ ಯಾರಾದರೂ ಆಗಿದ್ದರೆ ಬೇರೆಯದೆ ಆಗುತ್ತಿತ್ತು. ಆದರೆ ನೀನು ಅವಳನ್ನು ಬಿಟ್ಟು ಕೊಡಲೇ ಇಲ್ಲ ಅದೆಷ್ಟು ಮುಗ್ಧ ಪ್ರೀತಿ ನಿಮ್ದು ಅವಳು ಯಾವತ್ತಿಗೂ ನಿನ್ನವಳೇ
ಸರಿ ನಾನಿನ್ನೂ ಬರ್ತಿನಿ ಎಂದವಳ ಕಣ್ಣಲ್ಲಿ..
ನನ್ನ ಕಳೆದುಕೊಳ್ಳುತ್ತಿರುವ ನೋವು ಅವಳ ಕಣ್ಣಲ್ಲಿ ನೀರಿನ ಮೂಲಕ ಬಂತು ತನ್ನ ತಂದೆ ಸತ್ತಾಗ ಕಣ್ಣಿರು ಹಾಕದ ಇವಳು ನನಗಾಗಿ ಛೇ ಅದೆಷ್ಟು ಪ್ರೀತಿ ಇವಳಿಗೆ, ಆದರೆ ಇವಳ ಪ್ರೀತಿ ಪಡೆಯುವ ಯೋಗ್ಯತೆ ನನಗಿಲ್ಲ ಅಷ್ಟೇ ಎಂದು ಕೊಂಡು ಬಂದೆ.
ಒಂದು ಲಾಂಗ್ ರೈಡ್ ಹೋಗಬೇಕು ಅಂತ ಆಸೆ ಇತ್ತು ನಿನ್ನೊಂದಿಗೆ ಮತ್ತೆ ಎಂದಿಗೂ ನೀ ಸಿಗುವುದಿಲ್ಲ ಎಂದು ಕೂಡಲೇ ಮನಸ್ಸು ಹಠ ಹಿಡಿದು ಬಿಡ್ತು ಅದಕ್ಕೆ ಎಂದು ಹೊರಟೇ ಬಿಟ್ಟಳು..
ವಿಚಿತ್ರ ಜೀವನ
ಐ ಲವ್ ಯು ಜಾಣೆ ......