ಸನ್ನಿಧಾನ - ಕಥೆಗಳ ಬಗ್ಗೆ ಒಂದು ಕಾದಂಬರಿ !

ಸನ್ನಿಧಾನ - ಕಥೆಗಳ ಬಗ್ಗೆ ಒಂದು ಕಾದಂಬರಿ !

ಇದು ಕೆ. ಸತ್ಯನಾರಾಯಣ ಅವರು 1997 ರಲ್ಲಿ ಬರೆದದ್ದು. ಮನೋಹರ ಗ್ರಂಥಮಾಲೆ ಧಾರವಾಡದಿಂದ ಪ್ರಕಟವಾಗಿದೆ. ಇದು ಇದು 170 ಪುಟಗಳ ಕಾದಂಬರಿ. ಈ ತನಕ ನಾನು ಓದಿರುವುದು 50 ಪುಟಗಳಷ್ಟೇ. ಆದರೂ ಕೂಡ ಈ ತನಕ ಇದರ ಬಗ್ಗೆ ನನ್ನ ಅಭಿಪ್ರಾಯವನ್ನು ಇಲ್ಲಿ ದಾಖಲಿಸ ಬಯಸುತ್ತೇನೆ. ಪುಸ್ತಕವನ್ನು ಪೂರ್ತಿ ಓದಿ ಮುಗಿಸಿದ ಮೇಲೆ ಮತ್ತೆ ಬರೆದೇನು.

ನಾವು ಕಥೆಗಳನ್ನು ಏಕೆ ಓದುತ್ತೇವೆ ? ಅವುಗಳಿಂದ ನಮಗೆ ಇರುವ ಅಪೇಕ್ಷೆ ಆದರೂ ಏನು? ಕಥೆಗಳನ್ನು ಬರೆಯುವರು ಏಕೆ ಬರೆಯುತ್ತಾರೆ ? ಪ್ರಕಟಿಸುವರು ಕಥೆ ಹೇಗೆ ಇರಬೇಕು ಎಂದು ಬಯಸುತ್ತಾರೆ? ವಿಮರ್ಶಕರು ಏನು ಬಯಸುತ್ತಾರೆ ? ಕಥೆ ಹೇಗಿದ್ದರೆ ನಮಗೆ ಚೆನ್ನ? ಯಾವಾಗಲೂ ಕಥೆಯಿಂದ ಏನಾದರೂ ಕಲಿಯುವುದು ಇರಲೇಬೇಕೇ ? ಕಣ್ಣ ಮುಂದೆ ಕಾಣುವ ಜನರ ಜೀವನ ನಮಗೆ ಹೇಗನಿಸುತ್ತದೆ? ಮುಂತಾದ ಪ್ರಶ್ನೆಗಳನ್ನು ಕಣ್ಣ ಮುಂದೆ ಕಾಣುವ ಜನರ ಜೀವನದ ನಿಜ ಕಥೆಗಳನ್ನು ಹೇಳುತ್ತಲೇ ಲೇಖಕರು ಎತ್ತಿದ್ದಾರೆ.

ಪುಸ್ತಕ ಕೆಳಗಿಡುವ ಹಾಗಿಲ್ಲ. ಈ ಪುಸ್ತಕದ ಓದು ಪೂರ್ತಿ ಮುಗಿಯೋ ಹೊತ್ತಿಗೆ ನನ್ನ ಓದಿನ ಹವ್ಯಾಸವನ್ನು ಕೊಂಚ ಅಥವಾ ಬಹಳಷ್ಟು ಬದಲಾಯಿಸಿ ಬಿಡುತ್ತದೆ ಏನೋ.

Rating
No votes yet