ತಾತ್ಸಾರ

Submitted by prashanth.jsp on Tue, 05/07/2019 - 19:56
ಚಿತ್ರ

ಇಬ್ಬರು ಸ್ನೇಹಿತರು weekend ಗೆ ಏನು ಮಾಡುವುದು ಎಂದು ಯೋಚಿಸುತ್ತಿರುವಾಗ ಒಬ್ಬ ಹೇಳಿದ ನನ್ನ car ಅಲ್ಲಿ ನಂದಿ ಬೆಟ್ಟಕ್ಕೆ ಹೋಗೋಣ ಅಂತ. ಇನ್ನೊಬ್ಬನಿಗೂ ಅದು ಸರಿ ಅನಿಸಿ, ಮರುದಿನ ಬೆಳಗ್ಗೆ 9 ಕ್ಕೆ ಹೊರಟರು. ಏನೊ ಒಂದು Josh ಅಲ್ಲಿ car ನ ಸ್ವಲ್ಪ ವೇಗವಾಗಿ ಓಡಿಸುತ್ತಿದರು. ಚೆನ್ನಾಗಿದ್ದ road ಅಲ್ಲಿ ಇದ್ದಕಿದ್ದಂತೆ ಒಂದು ಹಳ್ಳ ಬಂತು suddenly ಅದನ್ನ ನೋಡಿ break ಹಾಕದೆ left cut ಮಾಡಿ ಹಳ್ಳನ ತಪ್ಪಿಸಿದ. ಏನೊ ಸಾಧಿಸಿದ ಖುಷಿ ಅದೇ ಖುಷಿ ಅಲ್ಲಿ ದಿನ ಕಳೆಯಿತು.
ಆದರೆ ಮರುದಿನ ಅವರಿಗೊಂದು ಆಘಾತ ಕಾದಿತ್ತು. ಬೆಳಗ್ಗೆ paper ಓದುತ್ತಿರುವಾಗ ಒಂದು ಸುದ್ದಿ ಓದಿದ, ಅದನ್ನು ಓದುತಿದ್ದಂತೆ ಸ್ಥಳದಲ್ಲೆ ಕುಸಿದು ಬಿದ್ದ. ಅದು ಒಂದು ಅಪಘಾತದ ಸುದ್ದಿ ಆಗಿತ್ತು.
ಒಂದು ಚಿಕ್ಕ ಕುಟುಂಬ ಗಂಡ, ಹೆಂಡತಿ ಪುಟ್ಟ ಮಗು two wheeler ಅಲ್ಲಿ ಹೋಗುತ್ತಿರುವಾಗ ಮುಂದೆ ಹೋಗುತ್ತಿದ್ದ car suddenly left ಗೆ ಬಂದ ಕಾರಣ ಅಪಘಾತ ತಪ್ಪಿಸಲು sudden break ಹಾಕಿದ್ದರಿಂದ bike skid ಅಗಿ ಮೂರೂ ಜನ ಮೃತ ಪಟ್ಟಿದ್ದರು. ಆ bike ಮುಂದೆ ಇದ್ದ ಆ car ಇವರದೇ ಆಗಿತ್ತು.
ತುಂಬಾ ಜನಕ್ಕೆ ಅವರ driving ಮೇಲೆ ತುಂಬಾ confidence ಇರುತ್ತೆ ಅದು ಒಳ್ಳೇಯದೆ ಹಾಗಂತ rules break ಮಾಡಬಾರದು ಅಲ್ವಾ. Car ಅವನು break ಹಾಕ್ತಾ mirror ಅಲ್ಲಿ ನೋಡಿದ್ರೆ ಆ ಅಪಘಾತ ಅಗುತ್ತಿರಲಿಲ್ಲಾ. ಸ್ವಲ್ಪ side ತಗೋಂಡ್ರೆ ಏನಾಗುತ್ತೆ ಹಿಂದೆ ಬರೋರು ನೋಡ್ಕೋಡು ಬರಬೇಕು ಅನ್ನೋ ತಾತ್ಸಾರ ಮನೋಭಾವನೆ. ಇದನ್ನು ನಾವು ಸಾಮಾನ್ಯವಾಗಿ ದಿನ ನಿತ್ಯ ಕಾಣುತ್ತೇವೆ suddenly left ತಗೊಳೊದು suddenly right ತಗೊಳೊದು ಬೇಕಾದ್ರೆ ಹಿಂದಿರೋರು break ಹಾಕ್ಕೊಳ್ಳಿ ಅನ್ನೋ ತಾತ್ಸಾರ ಮನೋಭಾವನೆ. ಕೆಲವೊಂಮ್ಮೆ ಚಿಕ್ಕ ತಪ್ಪಿಗೆ ದೊಡ್ಡ ಬೆಲೆ ಕೊಡಬೇಕಾಗುತ್ತೆ. ಹಾಗಾಗುವುದು ಬೇಡ ನಮ್ಮಿಂದಾಗಬಹುದಾದ ಸಾಮಾನ್ಯ ಬದಲಾವಣೆ ನಾವು ತರೊಣ. ಬದಲಾವಣೆ ನಮ್ಮಿಂದ ಸಾಧ್ಯ, ಅದು ನಮ್ಮಿಂದಲೇ ಆರಂಭವಾಗಲಿ

ನಿಮ್ಮ ಪ್ರಶಾಂತ...

Rating
No votes yet