ಒಂದು ಅಪೂರ್ಣ ಕಥೆ, ಮುಂದ ಏನು :)

ಒಂದು ಅಪೂರ್ಣ ಕಥೆ, ಮುಂದ ಏನು :)

ಕಾಲೇಜು ಮುಗಿಸಿ ಮನೆಗೆ ಹೊರಟವನು ಶಾಸ್ತ್ರಿನಗರ ಬಸ್ ಸ್ಟಾಂಡ್ ನಲ್ಲಿ ಕುಳಿತಿದ್ದೆ. ಸಣ್ಣಗೆ ಮಳೆ ಜಿನುಗುತ್ತಿದುದರಿಂದ ಸಂಜೆ ೫ ಗಂಟೆಗೇ 
ಕತ್ತಲಾಗಿತ್ತು. ನನಗೆ ಮನೆಗೆ ಹೊಗಲು ಮನಸ್ಸಾಗದೆ ಮಳೆಯನ್ನು ನೋಡುತ್ತಾ ಅಲ್ಲೇ ಕುಳಿತೆ. ಬಂದ ಎರಡು ಬಸ್ಸಲ್ಲೂ ಹೋಗದೆ ಅಲ್ಲೇ 
ಕುಳಿತಿದ್ದೆ. ಬಸ್ ಸ್ಟಾಂಡ್ ನಲ್ಲಿದ್ದ ಜನರೆಲ್ಲ ಆದಷ್ಟು ಬೇಗ ಮನೆ ತಲುಪಿಕೊಳ್ಳಬೇಕೆಂಬ ಅವಸರದಲ್ಲಿ ಬಂದ ಬಸ್ಸಿಗೇ ಹತ್ತಿ ಹೋಗಿಬಿಟ್ಟರು. 
ಬಸ್ ಸ್ಟಾಂಡ್ ನಲ್ಲಿ ಒಬ್ಬಳು ಹುಡುಗಿ ಕುಳಿತಿದ್ದಳು, ಅವಳು ಯಾರಿಗೋ ಕಾಯುತ್ತಿದ್ದಾಳೇನೋ ಅಂತ ಅನ್ನಿಸುತ್ತಿತ್ತು, ಪದೇ ಪದೇ ಎದ್ದು 
ಆಕಡೆ ಈಕಡೆ ನೋಡುತ್ತಿದ್ದಳು ಮತ್ತೆ ಗಡಿಯಾರ ನೋಡಿಕೊಂಡು ಕುಳಿತುಕೊಳ್ಳುತ್ತಿದ್ದಳು. ಸುಮಾರು ಬಸ್ಸುಗಳು ಹೋದವು ಅವಳು ಬಸ್ಸಿಗೂ 
ಹೊಗಲಿಲ್ಲ, ಅವಳನ್ನು ಹುಡುಕಿಕೊಂಡು ಯಾರೂ ಬರಲೂ ಇಲ್ಲ. ನನಗೂ ಯಾಕೋ ಕುತೂಹಲವಾಗಿ ಅಲ್ಲೇ ಕುಳಿತೆ.
 
ಮಳೆ ಬಂತು ಅಂತ ಕರೆಂಟ್ ಹೋಗಿತ್ತು, ಪಕ್ಕದಲ್ಲೇ ಇದ್ದ ಕೆಲವು ಅಂಗಡಿಗಳಲ್ಲಿ ಜನರೇಟರ್ ಆನ್ ಮಾಡಿದ್ದರಿಂದ ಸಲ್ಪ ಬೆಳಕು ಇತ್ತು. 
ಕತ್ತಲೆಯ ಬಸ್ ಸ್ಟಾಂಡ್ ನಲ್ಲಿ ನಾನು ಮತ್ತು ಅವಳು ಇಬ್ಬರೇ ಇರುವಾಗ ಅವಳೇನು ಯೋಚನೆ ಮಾಡುತ್ತಿರಬಹುದು ಅಂತ ಅವಳ 
ಮುಖ ನೋಡೋಣ ಅಂದುಕೊಂಡರೂ ಕತ್ತಲೆಯಲ್ಲಿ ಕಾಣಿಸಲೇ ಇಲ್ಲ. 
 
ನಾನೇ ಅವಳನ್ನು ಮಾತನಾಡಿಸಿದರೆ ಹೇಗಿರುತ್ತೆ ಅಂತ ಯೋಚನೆ ಮಾಡುತ್ತಿದ್ದೆ, ಮಾತನಾಡಿಸುವುದಾದರೆ ಏನೆಂದು ಮಾತನಾಡಿಸುವುದು? 
ನಾನೇನೋ ಕೇಳಲು ಹೋಗಿ ಅವಳು ತಪ್ಪಾಗಿ ತಿಳಿದರೆ, ಯಾಕೋ ಈ ಕತ್ತಲೆಯಲ್ಲಿ ಅವಳನ್ನು ಮಾತನಾಡಿಸಲು ಮನಸ್ಸು ಬರಲಿಲ್ಲ. 
Rating
No votes yet