ಮೀಸಲ್ಸ್!!

Submitted by rasikathe on Thu, 06/20/2019 - 07:53

ಮೀಸಲ್ಸ್!!
 
ಡಾ. ಮೀನಾ ಸುಬ್ಬರಾವ್
ಕ್ಯಾಲಿಫೋರ್ನಿಯ
 
ಸಿ. ಡಿ. ಸಿ ಅವರು ಈ ವರುಷದ(೨೦೧೯ ರ) ಮೀಸಲ್ಸ್ ರೋಗದ ಸಂಖ್ಯೆ ಅಮೇರಿಕದಲ್ಲಿ ೧೦೦೧ (ಒಂದು ಸಾವಿರಕ್ಕೂ) ಮೀರಿದೆ ಎಂದು ಖಚಿತ ಪಡಿಸಿದ್ದಾರೆ. ಇದು ಪರೀಕ್ಷಿಸಿ ಖಚಿತ ಪಡಿಸಿರುವ ಸಂಖ್ಯೆಯಾಗಿದೆ. ೧೯೯೨ ರಲ್ಲಿ ೨೧೨೬ ಮೀಸಲ್ಸ್ ಕೇಸಸ್ ಕಂಡು ಬಂದಿತ್ತು. ಅದನ್ನ ಬಿಟ್ಟರೆ, ಈ ವರುಷದ ಕೇಸಸ್ ಎರಡನೆಯ ಸ್ಥಾನದಲ್ಲಿದೆ (ಹೆಚ್ಚು ಕೇಸಸ್). ಇದಕ್ಕೆ ಕಾರಣಗಳು ಹಲವಾರು ಇದ್ದರೂ, ಮುಖ್ಯವಾಗಿ ಮೀಸಲ್ಸ್ ಲಸಿಕೆಯನ್ನು(ವ್ಯಾಕ್ಸಿನ್) ಮಕ್ಕಳಿಗೆ ಹಾಕಿಸದಿರುವುದು.
 
ಮಕ್ಕಳಿಗೆ ಮೀಸಲ್ಸ್ ವ್ಯಾಕ್ಸಿನ್ ಹಾಕಿಸದಿರುವುದಕ್ಕೆ ಮುಖ್ಯ ಕಾರಣ ಸಂದರ್ಶಿಸಿದಾಗ ತಿಳಿದು ಬಂದಿದ್ದು, ಅವರಲ್ಲಿರುವ(ತಂದೆ ತಾಯಂದಿರಲ್ಲಿ) ಮೂಢನಂಬಿಕೆ "ಮೀಸಲ್ಸ್ ವ್ಯಾಕ್ಸಿನ್ ಯಿಂದ ಮಕ್ಕಳಿಗೆ ಆಟಿಸಮ್ ಎಂಬ ಡಿಸೀಸ್ ಬರುತ್ತದೆ". ಬಹಳಷ್ಟು ಸಂಶೋಧನೆಗಳು ಇದರ ಬಗ್ಗೆ ಇಲ್ಲೀವರೆಗೆ ನಡೆದಿವೆ. ಯಾವುದರಲ್ಲಿಯೂ "ಮೀಸಲ್ಸ್ ಲಸಿಕೆಯಿಂದ ಆಟಿಸಮ್ ಬರುತ್ತೆ" ಎನ್ನುವುದು ಖಚಿತವಾಗಿಲ್ಲ. ಅಸ್ಟೇ ಅಲ್ಲದೇ ಮೀಸಲ್ಸ್ ಲಸಿಕೆ ಹಾಕಿಸಿದ ಮಕ್ಕಳಲ್ಲಿ ಆಟಿಸಮ್ ಹೆಚ್ಚಿನ ರೀತಿಯಲ್ಲಿ (ಮೀಸಲ್ಸ್ ಲಸಿಕೆ ಹಾಕಿಸದಿದ್ದ ಮಕ್ಕಳಿಗಿಂತ) ಕಂಡು ಬಂದಿಲ್ಲದಿರುವುದು ಕಾಣಬಹುದು. 
 
ಈ ಮೀಸಲ್ಸ್ ಕೇಸಸ್ ಕಂಡು ಬಂದಿರುವುದು ಹೆಚ್ಚಾಗಿ ಮೀಸಲ್ಸ್ ವ್ಯಾಕ್ಸಿನ್ ಹಾಕಿಸದೇ ಇರುವ ಮಕ್ಕಳಲ್ಲಿ. ಇಸವಿ ೨೦೦೦ ರಲ್ಲಿ ಮೀಸಲ್ಸ್ ಅಮೇರಿಕಾದಿಂದ ಎಲಿಮಿನೇಟ್ ಆಗಿದೆ ಎಂದು ಘೋಷಿಸಲಾಗಿತ್ತು. ಅರ್ಥಾತ್, ಒಂದು ವರುಷ ಅವಧಿಯಲ್ಲಿ ಮೀಸಲ್ಸ್ ಹರಡಿರುವುದು ಎಲ್ಲೂ ಕಂಡು ಬಂದಿರಲಿಲ್ಲ. ಬೇರೇ ದೇಶದಿಂದ ಬಂದವರಲ್ಲಿ ಅಲ್ಲಿಂದ ಬಂದ ಮೀಸಲ್ಸ್ ಎಲ್ಲೋ ಅದಕ್ಕೆ ಸೀಮಿತವಗಿ ಕಾಣಿಸುತಿತ್ತು ಅಷ್ಟೇ. ಈಚೀಚೆಗೆ ಹೆಚ್ಚಿನ ಮಕ್ಕಳಿಗೆ ಲಸಿಕೆ ಹಾಕಿಸದಿರುವ ಕಾರಣ, ಹೀಗೆ ಹೊರದೇಶದಿಂದ ಬಂದ ಮೀಸಲ್ಸ್ ಕೇಸಸ್ ಸಾಂಕ್ರಾಮಿಕವಾಗಿ ಲಸಿಕೆ ಹಾಕಿಸದ ಮಕ್ಕಳಿಗೆ ಹರಡಿ ಈ ಸಂಖ್ಯೆಯನ್ನು ಮುಟ್ಟಿರುವುದು. 
 
ಇದು ಶುರುವಾಗಿದ್ದು ಅಕ್ಟೋಬರ್ ೨೦೧೮ ರಲ್ಲಿ ನ್ಯೂ ಯಾರ್ಕ್ ಪಟ್ಟಣದಲ್ಲಿ. ಅಲ್ಲಿಗೆ ದಿನಾ ಬೇರೆ, ಬೇರೆ ದೇಶಗಳಿಂದ ಬರುವ ಪ್ರಯಾಣಿಗರು ಸಾವಿರಾರು. ಅಲ್ಲಿಂದ ಇಲ್ಲೀವರೆಗು ಮೀಸಲ್ಸ್ ಕೇಸಸ್ ೧೦೦೧ ದಾಟಿದೆ. ಮೀಸಲ್ಸ್ ವ್ಯಾಕ್ಸಿನ್ (ಲಸಿಕೆ) ಅನ್ನು ಹಾಕಿಸುವುದರಿಂದ ಇದನ್ನು ತಡೆಗಟ್ಟಬಹುದಿತ್ತು ಸುಮಾರು ಮಟ್ಟಿಗೆ. ಲಸಿಕೆ ಹಾಕಿಸದಿದ್ದ ಮಕ್ಕಳು ಇದಕ್ಕೆ ತುತ್ತಾಗಿ ಸಾಂಕ್ರಾಮಿಕವಾಗಿ ಬೇರೆ ಮಕ್ಕಳಿಗೆ ಮತ್ತು ಇಮ್ಮೂನಿಟಿ ಇಲ್ಲದ ದೊಡ್ಡವರಿಗೆ ಹರಡುತ್ತಿದ್ದು, ವೇಗವಾಗಿ ಮೀಸಲ್ಸ್ ಈ ಸಂಖ್ಯೆ ದಾಟಲು ಕಾರಣವಾಗಿದೆ. 
 
ಇದು ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ತುಂಬಾ ಆತಂಕವಾಗಿದೆ. ಎಲ್ಲರೂ ಮಾಡಲೇಬೆಕಾದ ಕೆಲವು ಕ್ರಮಗಳಿಂದ ಮಾತ್ರ ಇದನ್ನು ಹತೋಟಿಯಲ್ಲಿ ಇಡಲು ಸಾಧ್ಯವಾಗಿದೆ. 
ಸಾವಜನಿಕರು ತೆಗೆದುಕೊಳ್ಳಬೇಕಾದ ಕೆಲವು ಕ್ರಮಗಳು ಇಲ್ಲಿವೆ......
 
೧. ನಿಮ್ಮ ಮಕ್ಕಳಿಗೆ ಮೀಸಲ್ಸ್ ಲಸಿಕೆ ಹಾಕಿಸದಿದ್ದಲ್ಲಿ ಕೂಡಲೇ ಹಾಕಿಸುವುದು. 
( ಎಲ್ಲ ಮಕ್ಕಳಿಗೂ ಎರಡು ಡೋಸಸ್ ಮೀಸಲ್ಸ್ ಲಸಿಕೆ ಹಾಕಿಸಬೇಕು.... ೧೨ ರಿಂದ ೧೫ ತಿಂಗಳಲ್ಲಿ ಮತ್ತು ೪- ೬ ವರುಷದಲ್ಲಿ) 
 
೨. ದೊಡ್ಡವರು ( ೧೮ ವರುಷ ಮೇಲ್ಪಟ್ಟವರು) ೧೯೫೭ ಮತ್ತು ನಂತರ ಹುಟ್ಟಿದವರು, ಮೀಸಲ್ಸ್ ಇಮ್ಮೂನಿಟಿ ಇಲ್ಲದಿದ್ದರೆ, ಕಡೇ ಪಕ್ಷ ಒಂದು ಡೋಸ್ ವ್ಯಾಕ್ಸಿನ್ ಆದರೂ ಹಾಕಿಸಬೇಕು.
 
೩. ೬- ೧೧ ತಿಂಗಳು ಮಗುವಿಗೆ ವಿದೇಶ ಪ್ರಯಾಣದ ಮೊದಲು ೧- ಡೋಸ್ ಮೀಸಲ್ಸ್ ವ್ಯಾಕ್ಸಿನ್ ಹಾಕಿಸಬೇಕು ( ಅದೂ ಮೀಸಲ್ಸ್ ಇರುವ ದೇಶಗಳಿಗೆ ಪ್ರಯಾಣ ಮಾಡುತ್ತಿದ್ದರೆ, ಕಡ್ಡಾಯವಾಗಿ ಹಾಕಿಸಬೇಕು).
 
೪. ಹೆಲ್ತ್ ಕೇರ್ ವರ್ಕರ್ಸ್ (ಆರೋಗ್ಯ ಸಿಬ್ಭಂದಿಯಲ್ಲಿ ಕೆಲಸಮಾಡುವ), ಹೈ ಸ್ಕೂಲ್ ವಿದ್ಯಾರ್ಥಿಗಳಿಗೆ ಮತ್ತು ವಿದೇಶಗಳಿಗೆ ಪ್ರಯಾಣ ಮಾಡುವವರು ೨- ಡೊಸ್ ಮೀಸಲ್ಸ್ ಲಸಿಕೆಯನ್ನು ಹಾಕಿಸಬೇಕು. 
 
೫. ಸಿ. ಡಿ. ಸಿ. ಜಾಲತಾಣದಲ್ಲಿ ಹೆಚ್ಚಿನ ವಿವರಣೆಗೆ ಭೇಟಿ ಕೊಡಿ. 
 
೬. ಮೀಸಲ್ಸ್ ರೋಗ ಲಕ್ಷಣಗಳನ್ನು ನೆನಪಿನಲ್ಲಿಡಿ....ಜ್ವರ, ಕೆಮ್ಮು, ನೆಗಡಿ, ಮತ್ತು ಕಣ್ಣುಗಳು ಕೆಂಪಾಗುವಿಕೆ ( ಕಂಜಕ್ಟಿವೈಟಿಸ್). ಜ್ವರ ಸಣ್ಣದಾಗಿ ಶುರುವಾಗಿ ನಂತರ ೧೦೪ ರಿಂದ ೧೦೫ ರವರೆಗೆ ಏರುವ ಸಂಭವವಿದೆ. ಜ್ವರದ ಸ್ಪೈಕ್ ಕಂಡನಂತರ ಕೆಂಪಾಗಿ, ಬ್ಲಾನ್ಚಿಂಗ್ ರಸಿಕೆ ಶುರುವಾಗುತ್ತದೆ. ಮೊದಲು ಮುಖದಲ್ಲಿ ಕಾಣಿಸಿಕೊಂಡು ಬೇಗನೇ ಅಲ್ಲಿಂದ ದೇಹದ ಕೆಳಭಾಗಕ್ಕೆ ಹರಡುತ್ತದೆ. ಸ್ವಲ್ಪ ಕಡಿತವೂ ಕಾಣಿಸಿಕೊಳ್ಳುತ್ತದೆ. ಅನುಮಾನವಿದ್ದಲ್ಲಿ ವೈದ್ಯರ ಹತ್ತಿರ ಪರೀಕ್ಷಿಸಿಕೊಳ್ಳಬೇಕು. 
 
ಮೀಸಲ್ಸ್ ಒಂದು ವೈರಲ್ ರೋಗ, ಸಂಕ್ರಾಮಿಕವಾಗಿ ಬೇಗ ಹರಡುತ್ತದೆ. ೪- ದಿನ ರಸಿಗೆ  ಬರುವ ಮೊದಲಿಂದ ಹಿಡಿದು ೪ ದಿನ ರಸಿಗೆ ಬಂದಮೇಲಿನ ಅವಧಿಯಲ್ಲಿ ಹತ್ತಿರ ಇದ್ದವರಿಗೆ ಈ ರೋಗ ಹರಡುತ್ತದೆ. ಕೆಮ್ಮು, ನೆಗಡಿಯಿಂದ ಹೊರಬರುವ ಮ್ಯೂಕಸ್ ಖಣಗಳು ರೋಗಿಯ ದೇಹದಿಂದ ಹೊರಗಡೆ ಗಾಳಿಯಲ್ಲಿ ಇದ್ದು, ಅದನ್ನು ಹತ್ತಿರ ಇರುವವರು ಸೇವಿಸಿದಾಗ, ಅವರ ರಕ್ತದಲ್ಲಿ ಇಮ್ಮೂನಿಟಿ ( ಮೀಸಲ್ಸ್ ಗೆ) ಇಲ್ಲದಿದ್ದಲ್ಲಿ ಅವರಿಗೆ ಬರುವ ಸಾಧ್ಯತೆ ಇದೆ. ರೆಸ್ಪಿರೇಟರಿ ಪಾರ್ಟಿಕಲ್ಸ್ ರೋಗಿಯಿಂದ ಹೊರಗಡೆ ಗಾಳಿಯಲ್ಲಿ ಸೇರುವುದರಿಂದ ಹತ್ತಿರ ಇರುವವರು, ಒಟ್ಟಿಗೆ ಮಲಗುವವರಿಗೆ, ಸಾರ್ವಜನಿಕ ಸ್ಥಳಗಳಲ್ಲಿ - ಶಾಲೆ, ಏರ್ ಪೋರ್ಟ್, ವಿಮಾನದೊಳಗೆ, ಬಸ್ಸು, ಕಾರು, ಮಾರುಕಟ್ಟೇ ಮುಂತಾದ ಜಾಗಗಳಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುವುದು ಜಾಸ್ತಿ. 
 
ಇನ್ಕೂಬೇಶನ್ ಅವಧಿ ೬ -೨೧ ದಿನಗಳು, ಅಂದರೆ, ರೋಗಕ್ಕೆ ಎಕ್ಸ್ಪೋಸ್ ಆದಮೇಲೆ ೬- ೨೧ ದಿನಗಳಲ್ಲಿ ರೋಗ ಕಾಣಿಸಿಕೊಳ್ಳತ್ತೆ. ಮೇಲೆ ಹೇಳಿದಂತೆ ಸ್ವಲ್ಪ ಜ್ವರದಿಂದ ಶುರುವಾಗಿ, ನೆಗಡಿ, ಕೆಮ್ಮು ಕಾಣಿಸಿಕೊಂಡು, ಜ್ವರ ಮೇಲೇರಿದ ಮೇಲೆ, ರಸಿಗೆ (ರ್ಯಾಷ್) ಶುರುವಾಗತ್ತೆ. 
 
೫-೬ ದಿನಗಳ ನಂತರ ರಸಿಗೆ, (ರ್ಯಾಷ್) ಬಂದ ದಾರಿಯಿಂದಲೇ ಮರೆಯಾಗುತ್ತೆ(ಕಡಿಮೆಯಾಗುತ್ತೆ). ಮುಖದಿಂದ ಶುರುವಾಗಿ, ದೇಹದ ಕೆಳಗಿನ ಭಾಗಗಳಿಂದ ಮರೆಯಾಗುತ್ತದೆ. ನಾರ್ಮಲ್ ಇಮ್ಯೂನಿಟಿ ಇದ್ದವರೆಲ್ಲರು ಸುಮಾರಷ್ಟು ಜನ ಗುಣ ಹೊಂದುತ್ತಾರೆ. ೧- ವರುಷ ಕೆಳಗಿನ ಮಕ್ಕಳಿಗೆ ಮತ್ತು ೫- ವರುಷದ ಕೆಳಗಿನ ಮಕ್ಕಳಲ್ಲಿ ಇದು ತುಂಬಾ ಸುಸ್ತು ಮಾಡಿ, ನಿಮೋನಿಯಾ ಆಗಿ (ಅದರಲ್ಲೂ ವ್ಯಾಕ್ಸಿನ್ ಹಾಕಿಸದೇ ಇಮ್ಯೂನಿಟಿ ಇಲ್ಲದ ಮಕ್ಕಳಲ್ಲಿ) ಮಕ್ಕಳು ಸಾವನ್ನಪ್ಪಬಹುದೂ ಕೂಡಾ.
 
ಆದ್ದರಿಂದ ಇದನ್ನು ತಡೆಗಟ್ಟುವುದು (ವ್ಯಾಕ್ಸಿನ್ ಹಾಕಿಸುವುದರಿಂದ) ತುಂಬಾ ಮುಖ್ಯವಾದ ಮತ್ತು ಆದ್ಯತೆಯ ಜವಾಬ್ದಾರಿ (ನಮ್ಮೆಲ್ಲರ) ಸಾರ್ವಜನಿಕರದ್ದಾಗಿದೆ.
 
೨- ಸಿಂಡ್ರೋಮ್ಗಳು ಮೀಸಲ್ಸ್ ಇಂದ ಬರಬಹುದಾಗಿದೆ. ಇವು ನ್ಯೂರಾಲಜಿಕ್ ಕಾಂಪ್ಲಿಕೇಶನ್ಸ್ಗಳು. ೧. ಏ. ಡಿ. ಈ. ಎಮ್....ಅಕ್ಯೂಟ್ ದಿಸೆಮಿನೇಟೆಡ್ ಎನ್ಕೆಫಲೋ ಮೈಲೈಟಿಸ್. ೨. ಸಬ್ ಅಕ್ಯೂಟ್ ಸ್ಕ್ಲೀರೋಸಿಂಗ್ ಪ್ಯಾನ್ ಎನ್ಕೆಫಲೈಟಿಸ್. 
 
೧. ಇದು ಮೀಸಲ್ಸ್ ಇಂದ ರೀಕವರಿ ಫೇಸ್ ನಲ್ಲಿ ಕಾಣಿಸಿಕೊಳ್ಳುತ್ತೆ. ಇದು ಆಟೋ ಇಮ್ಮ್ಯೂನ್ ರೆಸ್ಪಾನ್ಸ್ ಮೀಸಲ್ ವೈರಸ್ಗೆ ಇಂದ ಕಾಣಿಸಿಕೊಳ್ಳಬಹುದಾದ ಸಿಂಡ್ರೋಮ್. ಇದು ಒಂದು ತರ ಡೀಮೈಲಿನೇಟಿಂಗ್ ರೋಗ, ಮೆದುಳಿನ ನರ್ವ್ಸ್ ಗಳು ಮೈಲಿನ್ ಎಂಬ ಹೊರಪದರವನ್ನು ಕಳೆದುಕೊಳ್ಳುತ್ತದೆ ಮತ್ತು ನರ್ವ್ಸ್ಗಳ ಕಾರ್ಯಗಳು ಸ್ಥಗಿತಗೊಳ್ಳುತ್ತದೆ ನಿಧಾನವಾಗಿ.
 
೨. ಇದು ಒಂದು ಡೀಜೆನೆರೇಟೀವ್ ಡಿಸೀಸ್ - ಸೆಂಟ್ರಲ್ ನರ್ವಸ್ ಸಿಸ್ಟೆಮ್ನ, ಸುಮಾರು ೭-೧೦ ವರುಷ ಮೀಸಲ್ಸ್ ಆದಮೇಲೆ ಬರುವ ಸಂಭವ ಇದೆ. ಇದು ಒಂದು ಮೀಸಲ್ಸ್ ನ ಜೆನೆಟಿಕ್ ವೇರಿಯಂಟ್ ಇಂದ ಮೆದುಳಲ್ಲಿ ಉಂಟುಮಾಡುವ ಇನ್ಫೆಕ್ಶನ್ ಇಂದ ಅಗಬಹುದಾಗಿದೆ ಎಂದು ತಿಳಿಯಲಾಗಿದೆ. 
 
ಆದ್ದರಿಂದ, ನಿಮ್ಮ ಮಕ್ಕಳಿಗೆ ಮೀಸಲ್ಸ್ ಲಸಿಕೆ ಹಾಕದಿದ್ದಲ್ಲಿ ದಯವಿಟ್ಟು ಇಂದೇ ಹಾಕಿಸಿ. ದೊಡ್ಡವರಿಗೂ ಮೇಲೆ ಹೇಳಿದಂತೆ ೧೯೫೭ ಮತ್ತು ನಂತರ ಹುಟ್ಟಿದವರಿಗೆ ಮೀಸಲ್ಸ್ ವ್ಯಾಕ್ಸಿನ್ ಅವಶ್ಯಕವಾಗಿ ಮೀಸಲ್ಸ್ ತಡೆಗಟ್ಟಲು ಬೇಕಾಗಿದೆ.  ಸಿ. ಡಿ. ಸಿ ತಾಣದಲ್ಲಿ ಹೆಚ್ಚಿನ ವಿವರಗಳು ಲಭ್ಯ. ಪ್ರಶ್ನೆಗಳಿದ್ದರೆ ಸ್ಥಳೀಯ ಹೆಲ್ತ್ ಡಿಪಾರ್ಟ್ಮೆಂಟಲ್ಲಿ ವಿಚಾರಿಸಿ. 
 
ಮರೆಯದಿರಿ!!! "ಆರೋಗ್ಯವೇ ಭಾಗ್ಯ" ವಲ್ಲವೇ!!