ಹಾಗಲಕಾಯಿ ಗೊಜ್ಜು
ಬಿಳಿ ಹಾಗಲಕಾಯಿ -೩
ಕೆಂಪು ಮೆಣಸಿನಕಾಯಿ ಪುಡಿ [ಕಾರದ ಪುಡಿ] - ೨ ಚಮಚ
ದನಿಯ / ಸಾಂಬಾರು ಪುಡಿ - ೧. ೫ ಚಮಚ
ಅರಿಶಿಣ ಪುಡಿ - ೦.೫ ಚಮಚ
ಉಣಸೆ ಹಣ್ಣು / ನಿಂಬೆ ಹಣ್ಣು
ಉಪ್ಪು
ಬೆಲ್ಲ [ನಿಮ್ಮ ಅಭಿರುಚಿ]
ಒಗ್ಗರಣೆಗೆ - ೩ ಚಮಚ ಎಣ್ಣೆ , ಸಾಸಿವೆ, ಜೀರಿಗೆ , ಕರಿಬೇವು , ಇಂಗು
ವಿಧಾನ ತಿಳಿಸುವ ಮುಂಚೆ :
ಹಾಗಲಕಾಯಿ ಎಂದಾಕ್ಷಣ ಕೆಲವರು ಮುಖ ಮುದುರಿಕೊಳ್ಳುತ್ತದೆ , ಎಷ್ಟು ಬೆಲ್ಲ ಹಾಕಿ ಮಾಡಿದರೂ ಕೆಲವರಿಗೆ ಇಷ್ಟವಾಗುವುದಿಲ್ಲ , ಆದರೆ ಈ ರೀತಿ ಮಾಡಿದ ಗೊಜ್ಜು ಎಲ್ಲರು ಇಷ್ಟ ಪಡುತ್ತಾರೆ . ನನಗೆ ಬಂದ ಅನುಭವದಲ್ಲಿ ಹಾಗಲಕಾಯಿ ತಿನ್ನಲ್ಲ ಅನ್ನುವವರು ಇಷ್ಟಪಟ್ಟು ತಿಂದಿದ್ದಾರೆ . ತಪ್ಪದೇ ಪ್ರಯತ್ನ ಮಾಡಿ ಹಾಗೂ ಹಾಗಲಕಾಯಿಂದಿರುವ ಪ್ರಯೋಜನವನ್ನ ಪಡೆದುಕೊಳ್ಳಿ .
ಸೂಚನೆ: ಮೇಲೆ ತಿಳಿಸಿರುವ ಅಳತೆಯಂತೆಯೇ ಮಾಡುವ ಅವಶ್ಯಕತೆ ಇರುವುದಿಲ್ಲ , ನಿಮ್ಮ ರುಚಿಗೆ ತಕ್ಕಷ್ಟು ಕಾರ ಮತ್ತು ಹುಳಿ ಬಳಸಿಕೊಳ್ಳಿ .
ಮಾಡುವ ವಿಧಾನ :
೧. ಹಾಗಲಕಾಯಿ ತೊಳೆದುಕೊಂಡು , ಎರಡು ಬದಿಯ ತೊಟ್ಟನ್ನು ಕತ್ತರಿಸಿ , ಮದ್ಯಕ್ಕೆ ಒಂದು ಸೀಳು ಮಾಡಿ , ನೀರು ಮಾತು ಸ್ವಲ್ಪ ಉಪ್ಪು ಹಾಕಿ ೧೫ ನಿಮಿಷ ಬೇಯಿಸಿ[ಆದಷ್ಟು ಕಡಿಮೆ ನೀರಲ್ಲಿ / ಹಬೆಯಲ್ಲಿ ಬೇಯಿಸಿದರೆ ಉತ್ತಮ ]
ಹಾಗಲಕಾಯಿ ಮೃದುವಾಗುವಂತೆ, ತುಂಬಾ ಜಾಸ್ತಿ ಬೇಯಿಸಬಾರದು . [ ಹಾಗಲಕಾಯಿಯ ಮೇಲಿರುವ ಮುಳ್ಳುಗಳಂತವನ್ನ ತೆಗೆದರೇ ಕಹಿ ಇನ್ನು ಕಡಿಮೆ ಆಗುತ್ತದೆ].
೨. ಕಾರದಪುಡಿ , ದನಿಯ/ಸಾಂಬಾರು ಪುಡಿ , ಉಪ್ಪು , ಅರಿಶಿಣ ಪುಡಿ ನೀರಿನೊಂದಿಗೆ ಸೇರಿಸಿ , ಗಟ್ಟಿಯಾಗಿ ಕಲಸಿಕೊಳ್ಳಿ .
ಬೆಂದ ಹಾಗಲಕಾಯಿಯನ್ನು ಬಸಿದು , ಬಿಸಿ ಇದ್ದಾಗಲೇ ಸೀಳು ಮಾಡಿದ ಹಾಗಲಕಾಯಿ ಒಳಗೆ ಕಲಸಿಟ್ಟ ಮಸಾಲೆ ತುಂಬಿ , ತಣ್ಣಗಾಗುವ ವರೆಗೂ ಬಿಡಿ.
ನಂತರ ಸಣ್ಣ ಹೋಳುಗಳಾಗಿ ಕತ್ತರಿಸಿಡಿ .
೩. ಒಂದು ಗಟ್ಟಿ ತಳವಿರುವ ಅಥವಾ ನಾನ್ ಸ್ಟಿಕ್ ಪಾನ್ ಲಿ, ಎಣ್ಣೆ ,ಇಂಗು,ಸಾಸಿವೆ , ಜೀರಿಗೆ , ಕರಿಬೇವು ಹಾಕಿ ವಗ್ಗರಣೆ , ನಂತರ ಹಾಗಲಕಾಯಿ ಹೋಳುಗಳನ್ನ ಹಾಕಿ ಬಾಡಿಸಿ , ೫ ನಿಮಿಷದ ನಂತರ ಸ್ವಲ್ಪ ಉಳಿದ ಮಸಾಲೆಯನ್ನು ಹಾಕಿ ಬಾಡಿಸಿ. ನಂತರ ಅರ್ಧ ಹೋಳು ನಿಂಬೆ ಹಣ್ಣಿನ ರಸ ಅಥವಾ ಉಣಸೆ ಹಣ್ಣಿನ ರಸ ಸೇರಿಸಿ , ಎಣ್ಣೆ ಹಾಗಲಕಾಯಿಯಿಂದ ಬಿಡುವರೆಗೆ ಬಾಡಿಸಿ . ಉಪ್ಪು ಉಳಿ ರುಚಿ ನೋಡಿ ಕಡಿಮೆಯಾಗಿದ್ದರೆ ಮತ್ತೆ ಹಾಕಿ[ಬೆಲ್ಲ ಬೇಕಾದಲ್ಲಿ ಹಾಕಿ] ಬಾಡಿಸಿ ಇಳಿಸಿ.
ಚಪಾತಿ ಜೊತೆಯಾದರೆ ಗೊಜ್ಜಿಗೆ ಸ್ವಲ್ಪ ತುಪ್ಪ ಸೇರಿಸಿ ತಿಂದರೆ ತುಂಬಾ ರುಚಿಕರ . ಅನ್ನದ ಜೊತೆಗೂ ತಿನ್ನಬಹುದು