ಬದಲಾದ ಜೀವ - ಕಂತು ೧

ಬದಲಾದ ಜೀವ - ಕಂತು ೧

ಚಿತ್ರಕೃಪೆ - ಗೂಗಲ್ 
    ಶಿವಪುರಾಣದ ಪ್ರಕಾರ ಶಿವ ದೊಡ್ಡವನು , ವಿಷ್ಣುಪುರಾಣದ ಪ್ರಕಾರ ವಿಷ್ಣು ಮಹಾತ್ಮ , ಭಗವತ್ಗೀತೆಯಲ್ಲಿ ಎಲ್ಲರು ಶ್ರೇಷ್ಠರಾದರೂ ಕೃಷ್ಣ ಮಾತ್ರವೇ ಭಗವಾನ್ . 
ಹೀಗೆ ನಮ್ಮಪಾಜಿ ಯಾವಾಗಲು ಒಂದು ಮಾತು ಹೇಳೋರು ಅವರವರ  ಮೂಗಿನ ನೇರಕ್ಕೆ ಮಾತ್ರವೇ ಅವರವರ ಭಾವನೆ , ತತ್ವಗಳನ್ನು ಹೊರಹಾಕುತ್ತಾರೆ ಅಂತ .
ಪ್ರೀತಿ ಭಾವಕೈತೆ ಅಳವಡಿಸಿಕೊಳ್ಳಲಿ ಅಂತ ಈ ಪುರಾಣಗಳನ್ನು ಓದಲಿ ಅಂತ ಕಟ್ಟುನಿಟ್ಟಾಗಿ ಪಾಲಿಸಲಿ ಅಂತ ಈ ಕಥೆಗಳನ್ನ ಎಲ್ಲ ರೂಪದಲ್ಲಿ ತಂದರು ಅವರವರ ಪಾಡಿಗೆ ಇರುವುದು ಎಲ್ಲರ ಹವ್ಯಾಸವಾಗಿಬಿಟ್ಟಿದೆ . 
ಕಷ್ಟವೋ ನಷ್ಟವೋ ರೈತ, ಕೂಲಿಕಾರ್ಮಿಕರಾದರೋ , ಗಂಡ ಹೆಂಡತಿ ಒಟ್ಟೊಟ್ಟಿಗೆ ದುಡಿಯುತ್ತಾರೆ , ಕೂಲಿ ಕೆಲಸ ನೆಪದಲ್ಲೂ ಒಟ್ಟಿಗಿರುತ್ತಾರೆ. ಮತ್ತೆ ಮಕ್ಕಳು ಸಂಸಾರದೊಂದಿಗೆ ಊಟ ನಡೆಯುತ್ತದೆ. 
ಹಂಚಿ ತಿನ್ನುವ ಗುಣ ರಕ್ತಗತವಾಗಿ ಬಂದಿರುತ್ತದೆ . 

  ಆದರೆ ಈ ಐಟಿ ,ಬಿಟಿ ಮತ್ತು ಬಿಸಿನೆಸ್ ಅಂತ ದುಡ್ಡಿನ ಹಿಂದೆ ದಾಪುಗಾಲು ಹಾಕುತ್ತ ಹೊರಟಿರುವವರಿಗೆ ಯಾವ ಉದ್ದೇಶದ ಹಿಂದೆ ನಾವು ದುಡಿಯುತ್ತಿದ್ದೇವೆ ಎಂಬುದೇ ಮರೆತು ಹೋಗಿದೆ . 

   ಇತ್ತೀಚೆಗೆ ಒಂದು ಕತೆ ಕೇಳಿದೆ , ಇಬ್ಬರು ಕಾರ್ಮಿಕರಲ್ಲಿ ಒಬ್ಬ ಗುಂಡಿ ತೆಗೆಯುತ್ತಿರುತ್ತಾನೆ ,ಮತ್ತೊಬ್ಬ ಮುಚ್ಚುತ್ತಿರುತ್ತಾನೆ ,ಹೀಗೆ ಸುಮಾರು ಪರ್ಲಾಂಗುಗಳನ್ನು ಮುಗಿಸುತ್ತಿದ್ದವರನ್ನು ಒಬ್ಬ ಕೇಳ್ತಾನೆ ಏಕೆ ಹೀಗೆ ಮಾಡ್ತಾ ಇದ್ದೀರಿ ಅಂತ ಅದ್ಕೆ ಅವ್ರು 'ನಾವು ಮೂವರಿಗೆ ಒಂದೊಂದು ಕೆಲಸ ನಿರ್ವಹಿಸೋದಿಕ್ಕೆ ಹೇಳಿದ್ದಾರೆ ನಾನು ಹಗೆಯೋದು , ಮತ್ತೊಬ್ಬನದು ಸಸಿಗಳನ್ನು ಇಡೋದು , ಇವನದು ಮಣ್ಣು ಮುಚ್ಚೋದು, ಆದ್ರೆ ಗಿಡ ಹಾಕುವವ ರಜೆಯಲ್ಲಿದ್ದ್ದಾನೆ ,ನಮ್ಮ ಕೆಲಸ ನಾವು ಮಾಡ್ತಿದಿವಿ ಅಂದನಂತೆ , ಹೀಗೆ ನೂರರಲ್ಲಿ ೮೦ ಜನ ಕೆಲಸದ ಹಿಂದಿನ ಉದ್ದೇಶವಿಲ್ಲದೆ , ಅರ್ಥವಿಲ್ಲದ ಜೀವನ ನಡೆಸುತ್ತಿದ್ದಾರೆ. 

   ಹಣ ಸಂಪಾದಿಸು ಅಥವಾ ಹೆಸರು ಸಂಪಾದಿಸು ಅನ್ನೋ ಕಾರ್ಯ ಇಟ್ಕೊಂಡು ಬೆಳಿಗ್ಗೆ ಎದ್ರೆ ಯಂತ್ರದಂತೆ ಅಡುಗೆ ಮಾಡ್ಬೇಕು ಕೆಲಸಕ್ಕೆ ಹೋಗ್ಬೇಕು ಅಂತ ಹೆಂಡತಿ , ಗಂಡ ಇವತ್ತಿನ ಕೆಲಸದಲ್ಲಿ ಇನ್ನು ಚೆನ್ನಾಗಿ ಮಾಡಬೇಕು ಅಂತ ಯೋಚನೆಯಲ್ಲಿ ಎದ್ದು ಅವರ ಬಾಸ್ ಏನು ಹೇಳಿದ್ರು, ಹೇಳಬಹುದು ಅಂತ ನೆನಪಿಸಿಕೊಳ್ಳುತ್ತಾ ಆಫೀಸ್ ಗೆ ಹೊರೋಡೋದು. ಇನ್ನು ಆಫೀಸ್ ಪ್ರಪಂಚ ಅಲ್ಲಿಯವರ ಜೊತೆ ಹೇಗಿರಬೇಕು ಅಂತ ಕೆಲವು ಟ್ರೈನಿಂಗ್ ಗಳು ಅದು ಕೆಲಸವನ್ನ ನಿಯಮದಿಂದ ಹೇಗೆ ಮಾಡಿಸಬೇಕು ಅನ್ನೋ ಉದ್ದೇಶವಾಗಿರುತ್ತೆ , ಆ ಟ್ರೇನಿಂಗ ಒರತುಪಡಿಸಿ ಸಹೋದ್ಯೋಗಿಗಳೇ ಒಂದು ಟ್ರೇನಿಂಗ ಗುಂಪು ಮಾಡಿಕೊಳ್ಳುತ್ತಾರೆ .
 ಮುಂಚೆ ಹೇಳಿದ ನಿದರ್ಶನದಂತೆ ಮನೆಯವರ ವಿಷಯದಲ್ಲಿ ದಿನಸಿ ತರುವುದು , ಮನೆ ಕಟ್ಟಿಸಬೇಕು, ಅವಶ್ಯಕತೆ ಪೂರೈಸಿದರೆ ಆಯ್ತು , ಬರೀ  ಹೀಗೆ ತನ್ನ ಕರ್ತವ್ಯ ತೀರಿಸೋ ಯೋಚನೆಯಲ್ಲಿ ಮಾತ್ರ ದುಡಿಯುತ್ತಾರೆ . ಮಾತಾಡುವ ವಿಷಯಗಳನ್ನು ಹಂಚಿಕೊಂಡು ಪ್ರೀತಿ ಪಾತ್ರರಾದವರನ್ನು ಕುಷಿಯಾಗಿಡುವ ,ಕೊನೆಗೆ ಇಷ್ಟೆಲ್ಲಾ ಕರ್ತವ್ಯಗಳನ್ನು ಮಾಡುತ್ತಿರುವುದು ಸಂಸಾರದ ಜೊತೆ ಕುಷಿಯಾಗಿರೋದಿಕ್ಕೆ ಅನ್ನೋದನ್ನ ಮರೆತು ದುಡಿಯೋದು , ಕರ್ತವ್ಯ ನಿಭಾಯಿಸೋದೆ ಗುರಿಯಾಗಿಸಿಬಿಡುತ್ತಾರೆ . 
ಆದರೆ ತಮ್ಮ ಕಚೇರಿಯಲ್ಲಿ ತಮಗೆ ವಹಿಸಿದ ಕರ್ತವ್ಯಗಳನ್ನು ನಿಯತ್ತಿಂದ ಮಾಡದೆ ಅವರ ತಪ್ಪುಗಳನ್ನು ಬೇರೆಯವ ಮೇಲೆ ಹಾಕೊಂಡು ನಾನು ಮಾಡಿದ್ದೆ ಸರಿ ಅಂತ ಸಾದಿಸೋಕೆ ಕೆಲವೊಂದು ಸಾಕ್ಷಿಗಳ ಅವಶ್ಯಕತೆಗೋಸ್ಕರ ,ಸ್ನೇಹದ ಹೆಸರಿನಲ್ಲಿ ಸಹೋದ್ಯೋಗಿಗಳ ಜೊತೆ ಗಾಸಿಪ್ ಮಾಡುತ್ತಾ ಸಮಯ ವ್ಯರ್ತ ಮಾಡ್ತಾರೆ. ಅವರಿಗೂ ಗೊತ್ತು ಅವರವರ ಕೆಲಸವಾಗೋವರೆಗೆ ಮಾತ್ರ ಇವರಿರುತ್ತಾರೆ , ಸಮಯ ಬಂದಾಗ ನಾವ್ಯಾರೆಂಬ ಪುಕಾರು ಎತ್ತದಂತೆ ಕೆಲಸ ಮಾಡುತ್ತಾರೆ ಅಂತ, ಆದರೂ ಬಟ್ಟೆ ಬದಲಾಯಿಸುವಂತೆ ತನ್ನ ಮಾತುಗಳಿಗೆ ಯಾರು ಸರಿ ಎನ್ನುತ್ತಾರೋ ಅಥವಾ ಎಲ್ಲದನ್ನೂ ಕಷ್ಟ ಎಂದು ಹೇಳಿಕೊಂಡು ಅನುಕಂಪ ಗಿಟ್ಟಿಸಿಕೊಂಡು ತನ್ನ ಕೆಲಸ ಮಾಡಿಸಿಕೊಳ್ಳಲು ಅಥವಾ ಪ್ರಮೋಷನ್ ಗಿಟ್ಟಿಸಿಕೊಳ್ಳುವ ಸಲುವಾಗಿ ನೀವೆಲ್ಲ ಒಳ್ಳೆಯವರು ಅಂತಾನೋ ,ಎಲ್ಲದನ್ನು ನಿಮ್ಮತ್ರ ಮಾತ್ರ ಹೇಳೋದು ಅಂತ ಕೆಲವು ಸಣ್ಣ ವಿಚಾರವನ್ನು ತಿಳಿಸಿ ಕೆಲಸ ಗಿಟ್ಟಿಸಿಕೊಳ್ಳುವವರ ಸಂಘ ಮಾಡಿಕೊಂಡಿರುತ್ತಾರೆ. ಅವರಿವರ ವಿಚಾರಗಳಲ್ಲಿ ತಲೆಹಾಕಿ ತನ್ನ ಏಳಿಗೆ ಅಥವಾ ತನ್ನ ಗುರಿ , ಕೌಶಲ್ಯತೆ ಮರೆತು ,ಆಳುವವರ, ತುಂಬಾ ನೈಸ್ ಆಗಿ ಮಾತಾಡುವರ ಮೋಡಿಯಲ್ಲಿ ಬಿದ್ದು ಕೊನೆಗೆ ಕಛೇರಿ ಕೆಲಸದಿಂದ ಹೇಗೆ ಬಿಡುವು ಮಾಡಿಕೊಳ್ಳುವುದು ಅಥವಾ ಯಾರಿಗೋ ಸಹಾಯಮಾಡಲು ತನ್ನ ಕರ್ತವ್ಯ ನಿಷ್ಠೆಯಿಂದ ದೂರಸರಿಯುವುದು ಎಲ್ಲವೂ ಶುರುವಾಗುತ್ತದೆ. 

ಅಳಿಯುವ/ಅಳಿಸುವ  ಯೋಚನೆ /ಯೋಜನೆ ಇರುವವರು ರೋಗಿ 
ನ್ಯಾಯಬದ್ಧವಾಗಿ ದುಡಿಯುವ , ನಿಯತ್ತಾಗಿ ಇರುವವರು ಯೋಗಿ 
ತನ್ನ ಕರ್ತವ್ಯ ನಿಷ್ಠೆಯನ್ನು ಕಚೇರಿಯಲ್ಲಿರಿಸಿ , ಪ್ರೀತಿ ಬಾಂಧವ್ಯವನ್ನು ಮನೆಯವರೊಂದಿಗೆ ಭವ್ಯ ಮಂಟಪವನ್ನಾಗಿರಿಸುವನು ಮಾತ್ರ ಭೋಗಿ . 

ಕಂತು -೧

  ಒಂದು ಆವಿಷ್ಕಾರದಲ್ಲಿ ಎಷ್ಟು ಅನುಕೂಲಗಳಿರುತ್ತವೆಯೋ ಅಷ್ಟೇ ಅನಾನುಕೂಲಗಳಿರುತ್ತವೆ ಎನ್ನುವುದಕ್ಕಿಂತ ಎಷ್ಟು ಉಪಯೋಗ ಪಡೆದುಕೊಳ್ಳುತ್ತೇವೆಯೇ ಅದಕ್ಕಿಂತ ಹೆಚ್ಚಾಗಿ ದುರುಪಯೋಗಿಸಿಕೊಳ್ಳುವುದನ್ನು ಈ ಪೀಳಿಗೆವಯರಿಗೆ ಹೇಳಿಮಾಡಿಕೊಟ್ಟಂತದ್ದು. 

  ಫೇಸ್ಬುಕ್ ಒಂದು ಆವಿಷ್ಕಾರವೇ ನಿಜ ಆದರೆ ಸದುದ್ದೇಶ ಎಲ್ಲ ಗೆಳೆಯರನ್ನ ಒಂದುಗೂಡಿಸುವ ಯಾವಾಗಲು ಸಂಪರ್ಕದಲ್ಲಿರುವಂತೆ ಮಾಡುವುದಾಗಿತ್ತು. ಆದರೆ ಕಾಲ ಬದಲಾದಂತೆ ಮನುಷ್ಯನ ಆಂತರಿಕ ಬದಲಾವಣೆಗಳು ಜಾಸ್ತಿಯೇ ಮೊದಲೆಲ್ಲ ಒಬ್ಬನ ಏಳಿಗೆ ಕಂಡು ಖುಷಿಪಡುತ್ತಿದ್ದವರು ಅಸೂಯೆಯೇ ಜಾಸ್ತಿಯಾಗಿಬಿಟ್ಟಿದೆ . ಇಂತಹ ಅಸೂಹೆ ಸ್ಪರ್ಧಾತ್ಮಕ ಮನೋಭಾವದಿಂದಲೇನೋ ಇಷ್ಟೊಂದು ಇಷ್ಟೊಂದು ನಮಗೆ ಸಿಗುತ್ತಿರುವುದು ಎಂದರೆ ತಂಪಾಗಲಾರದು . ಆದರೂ ಮನುಷ್ಯ ಮಾನವೀಯತೆ ಕಳೆದುಕೊಂಡು ಸ್ಪರ್ದಿಸುತ್ತಿರುವುದು ಶೋಚನೀಯವೂ ಹೌದು. 
ಯಾರಾದರು ಮಾಡಬೇಡ ,ಅದೆಲ್ಲ ಸುಮ್ಮನೆ ವ್ಯರ್ತ ಅಂದರೆ ಅದನ್ನು ಮಾಡಿಯೇ ತೀರುತ್ತೇನೆ ಎಂಬ ಪೀಳಿಗೆಯಾದರಿಂದ , ಬೆಳಿಗ್ಗೆಯ ಪ್ರಾರ್ಥನೆ , ಧ್ಯಾನ , ಕಾಫಿ ಬದಲು ಮೊದಲು ಫೇಸ್ಬುಕ್ ನೋಡುವ ಅಭ್ಯಾಸವಾಗಿರುವುದು ಸಹಜವಾಗಿದೆ . 

  ಇಂತಹ ಪೀಳಿಗೆಯ ಜನದ ನಡುವೆಯೂ ಮನರಂಜನೆಗೆಂದಷ್ಟೇ ಫೇಸ್ಬುಕ್ ತೆಗೆಯುತ್ತಿದ್ದ ಶಿವಕುಮಾರ್.  ಇತ್ತೀಚೆಗಂತೂ ಎಲ್ಲ ಸುಮ್ಮನೆ ಲೈಕ್ ಮಾಡದೆ ವಿಶೇಷವಾಗಿದ್ದರೆ ಮಾತ್ರ ಕಿಲೇ ಮಾಡುತ್ತಾ ಮೌಸ್ ಸ್ಕ್ರಾಲ್ ಮಾಡುತ್ತಿದ್ದ ತನ್ನ ಗೆಳಯರೆಲ್ಲರ ಟ್ರಿಪ್ ಉಪ್ಡೇಟ್ಗಳು ,ಅದಕ್ಕಿಂತ ಹೆಚ್ಚಾಗಿ ವಿದ್ಯಾಭ್ಯಾಸ ಮುಗಿದು ೨ ವರ್ಷಗಳಾಗಿದ್ದರಿಂದ ಎಲ್ಲರದು ಮದುವೆ,  ಮದುವೆ ನಂತರದ ಪ್ರವಾಸದ ಫೋಟೋಗಳು ಜಾಸ್ತಿ ಇದ್ದವು . 
ಕೆಲವರು ಸ್ಟೇಟಸ್ ಅಪ್ಡೇಟ್  ಎನ್ನುವಂತೆ ತಾನು ಬೆಳಿಗ್ಗೆನಿಂದ ಮಾಡಿದ್ದನೆಲ್ಲ  ಮನೆಯವ್ರಿಗೆ ,ಬಾಸ್ಗಳಿಗೆ ಒಪ್ಪಿಸುವ ಬುದ್ದಿ ಇಲ್ಲದಿದ್ದರು ತನ್ನ ಫೇಸ್ಬುಕ್ ಪ್ರೊಫೈಲ್ ನಲ್ಲಿ ಅಪ್ಡೇಟ್ ಮಾಡುವುದು ಸಹಜವಾಗಿತ್ತು . 
ಅಂತದೇ ಎರಡು ಮೂರು ಸ್ಟೇಟಸ್ ಫೋಟೋಗಳನ್ನು ನೋಡಿದ ಶಿವಕುಮಾರ್ ತನ್ನ ಗೆಳತಿಯನ್ನು ಒಂದು ಸಲ ಮೀಟ್ ಮಾಡಿದರೆ ಎಂದು ಮನಸು ಹೇಳಿದಂತಾಯ್ತು . ಮತ್ತೆ "ಛೇ ಇಲ್ಲಿ ಒಂತರ ಬೇರೆಯವರನ್ನ ನೋಡಿ ಹೊಟ್ಟೆ ಹುರಿದುಕೊಳ್ಳೋದೇ ಜಾಸ್ತಿಯಾಗಿದೆ ಕಣೋ " ಎಂದು ತನ್ನ ಗೆಳಯ ಹರೀಶ್ ಹೇಳಿದಾಗ "ಅದ್ಯಾಕೆ ಹಾಗೆ ,ಏನು ಅಂದ್ಕೊಳೋಕೆ ಹೋಗ್ಬೇಡ ಸುಮ್ನೆ ಇರು , ನಂಗೆ ಏನು ಅನ್ಸಲ್ವಲ್ಲ ಮುಂದೆ ಕೆಲಸ ನೋಡೋ " ಎಂದಿದ್ದು ನೆನಪಾಯ್ತು . 

  ನಾನು ಅಷ್ಟೊಂದು ಅಡಿಕ್ಟ್ ಆಗದೆ ಇದ್ದವನು ಇವತ್ತು ಯಾಕೆ ಹೀಗೆ ಅಂದುಕೊಂಡರು , ಮೂರು ದಿನದಿಂದಲೂ ಗೆಳತಿ ಅನು ತುಂಬಾ ನೆನಪಾಗುತ್ತಿದ್ದಳು.ಮೊದಲ ಭೇಟಿ, ನಗು ,ಮತ್ತು ಮೂವಿ ಒಂದೊಂದೇ ನೆನೆಸಿಕೊಳ್ಳುತ್ತಾ, ಎಷ್ಟು ತಿಂಗಳುಗಳಾಯ್ತು ಸಿಕ್ಕಿ ಅಂತ  ಲೆಕ್ಕ ಹಾಕಲು ಶುರುಮಾಡಿದ್ದ.  
ತಕ್ಷಣ ಫೋನ್ ಕಾಲ್ ಮಾಡಿ ಹೇಳ್ಬೇಕೆನ್ನಿಸಿದ್ರು ,ಆದರೆ ಕೆಲಸದ ಸಮಯದಲ್ಲಿ ಮಾಡಿದಾಗಲೆಲ್ಲ "ಯಾಕಪ್ಪ ಆಫೀಸ್ ಲಿ ಕೆಲಸ ಇಲ್ವಾ ನೀನೆ ಪುಣ್ಯ್ವಂತ ಬಿಡು ,  ನನಗೆ  ಕೆಲಸ ಇದೆ ಮಾಡ್ತೀನಿ ಇರು" ಎನ್ನುತ್ತಾ ಯಾವ ಕಾರಣಕ್ಕೆ ಮಾಡಿದ್ದು ಎನ್ನುವುದನ್ನು ವಿಚಾರಿಸದೆ ಜಸ್ಟ್ ಕಾಫಿ  ಊಟ ಆಯ್ತಾ ಅಂತ ಕೇಳಿ ಕಾಲ್ ಮಾಡ್ತಾ ಇದ್ದುದು ನೆನಪಾಗಿ ಸುಮ್ಮನಾದ. 
 
   ಮತ್ತರ್ಧ ಗಂಟೆಯಾದಮೇಲೆ ಯಾವಾಗಲು ಈ ತರಹನೇ ಯಾಕೆ ಯೋಚಿಸಬೇಕು , ಆದರು ನೋಡ್ಬೇಕು ಅನ್ನೋ ವಿಷ್ಯ ಹೇಳೋದನ್ನ ಮತ್ತೆ ನಿರಾಶೆಯಾದ್ರೆ ಆ ಬೇಜಾರಲ್ಲಿ  ನಾನು ಇನ್ನು ಸ್ವಲ್ಪ ದಿನ ತಗೋಳ್ತೀನಿ , ಊಟದ ಟೈಮ್ ಲಿ ಮಾಡ್ತೀನಿ ಅಂದ್ಕೊಂಡು ಫೇಸ್ಬುಕ್ ಲಾಗ್ಔಟ್ ಮಾಡಿದ.  
ಮನಸ್ಸು ಮದ್ಯಾಹ್ನ ಯಾವಾಗ ಆಗುತ್ತೋ ಅಂತ ಕಾಯ್ತಾ ಇತ್ತು , ಆದರೂ ಕೆಲಸದಲ್ಲಿ ಪ್ರವೀಣನಿದ್ದರಿಂದ ಕೈ ಮೌಸ್ ಮತ್ತೆ ಕೀಬೋರ್ಡ್ ಮೇಲೆ ಹೋಗಿ ಯಾವುದೊ ಬಾಕಿ ಇದ್ದ ಕೆಲಸ ಮುಗಿಸಿದ . 
 
                                                                                 ***************************************
 
"ಹಲೋ  ಫ್ರೀ ಇದ್ದೀರಾ !! ಮಾತಾಡಬಹುದಾ"  ಚುಡಾಯಿಸುವ ಧ್ವನಿಯಲ್ಲಿ ಕೇಳಿದ . 
"ಹೂಂ  ಹೇಳಿ ಶಿವು " ಆತ್ಮೀಯತೆಯಿಂದ ಕೇಳಿದಳು . 
"ಅನರ್ಗ್ಯ ನಿನ್ನ ನೋಡೋ ಹಾಗಿದೆ ಕಣೆ " ಎಂದ . 
ಪೂರ್ತಿ ಹೆಸರು ಕರೆದಿದ್ದು ಕೋಪ ಬಂದರು , ನೋಡೋ ಹಾಗೆ ಹಾಗಿದೆ ಅಂದಿದ್ದು  ಕೋಪವನ್ನು ತಡೆದಿತ್ತು . ಶಿವು ಮೊದಲ ದಿನದಿಂದಾನು ಅನು ಎಂದೇ ಕರೆದಿದ್ದರಿಂದ ಯಾವಾಗಾದರೂ ಪೂರ್ತಿ ಹೆಸರು ಕರೆದರೆ ಕೋಪ ಬಂದು ಕೂಗಾಡುತಿದ್ದಳು.ಇವತ್ತು ನೋಡೋಹಾಗೆ ಹಾಗಿದೆ ಎಂದು ಹೇಳುವ ತವಕ ಅವಳನ್ನು ಹಾಗೆ ಕರೆಸಿತ್ತು.  ಅವಳಿಗೆ ಕಾಲೇಜಿನಲ್ಲಿ ಒಂದಿಬ್ಬರು ,ಅವರ ಚಿಕ್ಕಪ್ಪ ಬಿಟ್ಟರೆ ಶಿವು ಮಾತ್ರವೇ ಅನು ಎಂದೆನ್ನುತ್ತಿದ್ದಿದು . ಬಹಳ ವಿರಳ ಹೆಸರಾಗಿದ್ದರಿಂದ ಮತ್ತೆ ಅಣು ಸಹಜ ಹೆಸರಿದ್ದರಿಂದ ಎಲ್ಲರು ಅನರ್ಗ್ಯ ಎಂದೇ ಕರೆಯುತ್ತಿದ್ದರು. 
 
"ಅಯ್ಯೋ ಅದಕ್ಕೇನಂತೆ ಬರ್ತೀನಿ ಬಿಡೋ, ನೀನು ಬಾಯಿಬಿಟ್ಟು ಕೇಳಿದ್ಮೇಲೆ" ಎಂದಳು ಮುಗಳ್ನಗುತ್ತಾ . 
 
"ತಾಳು ಸಂಜೆ ಕಾಲ್ ಮಾಡ್ತೀನಿ" ಗಡಿಬಿಡಿಯಿಂದ ಹೇಳಿ ಕಾಲ್ ಕಟ್ ಮಾಡಿದಳು. ಯಾರೋ ಕರೆದಿರಬೇಕು ಎಂದು ಸುಮ್ಮನಾದ . 
ಸಂಜೆಯಾಯ್ತು ಆಫೀಸಿನಿಂದ ಹೊರೋಡೋದು ಸಂಭ್ರಮವೇ ಇಂದು ಎಂದುಕೊಂಡು , . ದಿನಚರಿಯಂತೆ ತನ್ನೆ ಕಾಲ್ ಮಾಡಿದ. 
 
"ಹಲೋ  ಅನು ನಾನು ಆಫೀಸಿನಿಂದ ಹೊರಟೆ ಏನ್ಮಾಡ್ತಾ ಇದ್ದೆ ?". 
"ಹೂಂ ನಾನು ಊಟ ಮಾಡ್ತಾ ಇದ್ದೆ , ನಿಂದು ಕ್ಯಾಬ್ ಹೊರಡ್ತಾ ?"
"ಇಲ್ಲ ಇನ್ನು ಕ್ಯಾಬ್ ಹತ್ರ ಹೋಗ್ತಾ ಇದೀನಿ "
"ಮತ್ತೆ"
ಇತ್ತೀಚೆಗೆ ಮೊದಲೆರಡು ಮಾತಿಗೆ 'ಮತ್ತೆ' ಎನ್ನೋ ಪದ ಕೇಳುವುದು ಸಹಜವಾಗಿದ್ದರಿಂದ ಅದು ಶಿವು ತಲೆಗೆ ಹೋಗದೆ "ಏನು ಊಟ" ಎಂದು ಕೇಳಿದ . 
"ಮಾಮೂಲಿ ನಿಂದು ".... "ಒಹ್ ನಿಂದು ರೂಮ್ ಗೆ ಹೋದ್ಮೇಲೆ ಅಲ್ವ " ಎಂದು ಸಣ್ಣ ಧ್ವನಿಯಲ್ಲಿ ಹೇಳಿದಳು. 
ಅರ್ಥವಾಗದ ಶಿವು "ಏನು" ಎಂದ . 
"ಏನಿಲ್ಲ ಬಿಡು ನೀನು ರೂಮ್ಗೆ ಹೋದ್ಮೇಲೆ ಊಟ ಮಾಡೋದು ಅಲ್ವ ಅಂದೆ  ಅಷ್ಟೆ . 
 
"ಅನು  ಹೇಳ್ಬಾರದು ಅಂದ್ಕೊಂಡಿದ್ದೆ ಇವಾಗ ಹೇಳ್ಬೇಕು ಅನ್ನಿಸ್ತಾ ಇದೆ "
ಅಷ್ಟರಲ್ಲಿ ಮಧ್ಯದಲ್ಲಿ ಬಾಯಾಕಿ "ಏನೋ ಅದು ಹೇಳು"ಎಂದೆನ್ನುತ್ತಾ ಎಲ್ಲರಿಗೂ ಬೈ ಬೈ ಹೇಳ್ತಿದ್ದ ಶಬ್ದ ಕೇಳಿಸಿತು. 
"ನೀನೇನಾದ್ರು ಬ್ಯುಸಿ ನ ??" ಎಂದು ರಾಗವೆಳೆದ. 
"ಛೆ ಇಲ್ಲಪ್ಪ ನಿನ್ನತ್ರ ಮಾತಾಡ್ಬೇಕಲ್ಲ ಅದಕ್ಕೆ ಅವರಿಗೆಲ್ಲ ಬೈ ಹೇಳಿದೆ ಅಷ್ಟೇ , ಹೇಳು ಏನಪ್ಪಾ ಅಂತಹದ್ದು , ಯಾಕೆ ಹೇಳ್ಬಾರ್ದು ಅಂದ್ಕೊಂಡಿದ್ದೆ , ಹೇಳು ಇವಾಗ" ಎಂದು ಕೇಳಿದಳು . 
 
"ಏನಿಲ್ಲ ಮೀಟ್ ಆಗ್ಬೇಕು ಅಂದ್ನಲ್ವಾ ,ಮೂರು ದಿನದಿಂದ ತುಂಬಾ ನೆನಪಿಸಿಕೊಳ್ತಾ ಇದ್ದೆ ,ನಿನ್ನ ಹುಟ್ಟುಹಬ್ಬದ ಸುರ್ಪ್ರೈಸ್ , ಮೊದಲ ಮೀಟ್ , ನಿನ್ನ ಮುಗುಳು ನಗೆ ಎಲ್ಲ ನೆನಪಿಸ್ಕೊಳ್ತಾ ಇದೀನಿ ಪದೇ ಪದೇ " ನಿದಾನವಾಗಿ ಏನೋ ನೋವಿನಲ್ಲಿ ಹೇಳಿದ. 
"ಅಯ್ಯೋ ಸಾರೀ ಸಾರೀ , ತುಂಬಾ ದಿನ ಆಗೋಯ್ತು , ಎಲ್ಲ ಮದ್ವೆ ಆದರು , ಏರೆ ಊರಲ್ಲಿ ಸೆಟ್ಲ್ ಆದರು ಹಾಗಾಗಿ ಗೆಟ್ಟುಗೆಧರ್  ಕೂಡ ಇಲ್ಲ , ಇನ್ನು ನಾನು ಈ ಆಕ್ ಟೆನ್ಶನ್ ಲಿ ನಿನ್ನ ಮೀಟ್ ಮಾಡ್ಲೆ ಇಲ್ಲ. ಇವತ್ತು ಗುರುವಾರ ಅಲ್ವ ,ಖಂಡಿತವಾಗಿ ಸಿಗ್ತೀನಿ ಆಯ್ತಾ ಬೇಜಾರು ಮಾಡ್ಕೋಬೇಡ ,ನಂದೇ ತಪ್ಪು" ಏನೋ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಲಿತಿರುವ ಮಗು ಹೇಳುವಂತೆ ಪಟಪಟನೆ ಹೇಳಿದಳು . 

"ಆಯಿತು ಥಾಂಕ್ಸ್" ಎಂದ . 
ಮತ್ತೆ ಅದೇ ಧ್ವನಿಯಲ್ಲಿ "ಓಯ್ ದು ನನ್ನ ಕರ್ತವ್ಯ ,ಮತ್ತೆ ನಂಗುನು ಇಷ್ಟ ಅಲ್ವ" ಎಂದು ನಸು ನಕ್ಕಳು . 
"ಆಯ್ತು ಸರಿ ಕಣೆ ,ಏನೋ ಮನಸ್ಸಿಗೆ ನೆಮ್ಮದಿ ಅನ್ನಿಸಿತು , ಇಷ್ಟು ಮಾತಾಡ್ನಿದಕ್ಕೆ ಏನೋ ಇವತ್ತಂತೂ ನೆಮ್ಮದಿ ನಿದ್ರೆ ಬರುತ್ತೆ ಬಿಡು" ಎಂಬ ಭರವಸೆ ಇಂದ ಹೇಳಿದ 
 
"ಹೇ ನೀನು ರೂಮಿಗೆ ಬಂದ್ಯಾ" ಕೇಳಿದಳು. 
"ಇಲ್ಲ ಹತ್ತಿರದಲ್ಲಿ ಎಲ್ಲರೋಡುಗಳನ್ನ ಸುತ್ತುತಾ ಇದೀನಿ ,ಇನ್ನೂ ಸ್ವಲ್ಪ ಹೊತ್ತಾದರೆ ಮತ್ತೆ ಬಸ್ ಸ್ಟಾಪ್ಕಡೆಗೆ ಮತ್ತೆ ಹೋಗ್ತೀನಿ ಅಷ್ಟೇ " ಎಂದ 
"ಹ ಹ ಕೋತಿ ಸರಿ ಕಣೋ ಗುಡ್ನೈಟ್ , ಬೈ " ಎಂದಳು . 
"ಆಯ್ತು ಗುಡ್ ನೈಟ್ , ಬೈ ಬೈ " ಎಂದ . 
ರೂಮ್ ಗೆ ಹೋದರೆ ಹುಡುಗರ ಮುಂದೆ ಜಾಸ್ತಿ ಮಾತ್ನಾಡೋಕೆ ಆಗಲ್ಲ ಎಂದು ತನ್ನ ಅಕ್ಕ ಪಕ್ಕ ಬೀದಿಗಳಲ್ಲಿ ಸುಟ್ಟುಹಾಕುತ್ತಿದ್ದ , ಎಲ್ಲಿ ಯಾರಾದ್ರೂ ತಪ್ಪು ತಿಳ್ಕೊಳ್ತಾರೋ ಅಂತ ಒಂದೊಂದು ಬೀದಿಯಲ್ಲಿ ಒಂದೊಂದು ದಿನ ಸುತ್ತುತಾ ಇರುತ್ತಿದ್ದ , ಕಾಲ್ ಕಟ್ ಮಾಡಿದ ಮೇಲೆ ರೂಮಿನ ಕಡೆಗೆ ಹೆಜ್ಜೆ ಹಾಕಿದ. 
ಮುಂಚೆಯಾದರೆ ಅನು ತನ್ನ ಕೆಲಸದ ಅಥವಾ ಗೆಳಯರ ಅಥವಾ ಏನೋ ಒಂದು ಪುಸ್ತಕದ ವಿಮರ್ಶೆ ಹೀಗೆ ತುಂಬಾ ಮಾತನಾಡುತ್ತಿದ್ದಳು , ಆದರೆ ಇವನು ಪ್ರೀತಿಗೆ ಸಮ್ಮತಿ ನೀಡಿದ ಮೇಲೋ ಅಥವಾ ಅವಳ ಪ್ರಮೋಷನ್ ಅದ್ಮೇಲೂ ಗೊತ್ತಿಲ್ಲ ಮಾತು ಕಡಿಮೆಯಾಗಿದ್ವು . ಎರಡು ಒಂದೇ ಸಲ ಆಗಿದ್ದರಿಂದ , ಪ್ರಮೋಷನ್ ಆಗಿರೋದ್ರಿಂದ ಬ್ಯುಸಿ ಇರ್ತಾಳೆ ಅಂತ ಸಮಾಧಾನ ಮಾಡಿಕೊಂಡಿದ್ದ. 
 
   ಯಾವುದಾದರೂ ಬೆಟ್ಟದ ಮೇಲಿದ್ದರೆ ಜೋರಾಗಿ ಒಂದು ಸಲ "ಅನು ಐ ಲವ್ ಯು , ಮಿಸ್ ಯು ಕಣೆ ನನ್ನ ಜೀವ ಎಂದು ಜೋರಾಗಿ ಕಿರುಚುತ್ತಿದ್ದೆ" ಎಂದುಕೊಂಡು ತನ್ನಲ್ಲೇ ನಗುತ್ತ ತಲೆಕುಣಿಸುತ್ತಾ  ರೂಮು ಸೇರಿದ.ತುಂಬಾ ಸಂತೋಷದಿಂದಿದ್ದಾಗಲೂ ನಿದ್ರೆ ಬಾರದ ದಿನಗಳು ಎಷ್ಟೋ ಇದ್ದವು ಆದರೆ ತನ್ನ ಮನಸಿನಲ್ಲಿದ್ದ ಗೊಂದಲವನ್ನು ತನವಳ ಮುಂದೆ ಬಿಚ್ಚಿಟ್ಟ ಖುಷಿ , ಏನೋ ಸಮಾಧಾನ ಕಣ್ಣಿಗೆ ನಿದ್ರಾದೇವಿ ಬೇಗ ಬಂದು ಅಪ್ಪಿದಳು . 
 
                                                                             *******************************************************