llಆಯಾಮll

llಆಯಾಮll

ಕವನ

ನೂರಾರು ಕವಿತೆಗಳ ಸಾರ ಒಂದೇ ಇದೆ
ನಾ ನನ್ನನ್ನೇ ಇನ್ನಷ್ಟು ಅರಿಯಬೇಕಿದೆ
ವಿಲಾಸದ ವಿರಾಮದ ಜೀವನ ಸಾಕಾಗಿದೆ
ವಿರಾಗ ವ್ಯಾಪಕವಾಗಿ ಮನಸೆಲ್ಲ ಹರಡಿದೆ

ದೇಹ ಮನಸ್ಸುಗಳು ಯಾವುದೂ ನಾನಲ್ಲ ಎಂಬ
ಅರಿವು ಆಗೊಮ್ಮೆ ಈಗೊಮ್ಮೆ ಸುಳಿದಾಡಿದೆ
ಆಯಾಸವಿರದೇ ಸಂಚರಿಸುವ ಕಾಣದ ಉಸಿರು
ಬೇರೊಂದು ಆಯಾಮದ ಇರುವಿಕೆಯನ್ನು ತಿಳಿಸಿದೆ

ಸವಿಯಿರದ ಸಂಗತಿಯ ಸವಿಯುತ್ತಿರುವ ಕಣ್ಣು
ಕಾಣಲಾಗದ್ದೇನೋ ಇರುವ ಅನುಭವವಾಗಿದೆ
ಚಾಲನೆಯ ಚುಂಬಕವ ಕೊಡುತ್ತಿದ್ದ ಮನಸ್ಸೀಗ
ನಿಶ್ಚಲತೆಯಲ್ಲಿ ನಿಜ ತತ್ತ್ವದೆಡೆ ನನ್ನನ್ನು ತಳ್ಳಿದೆ

-ಕೆಕೆ (ಕೀರ್ತನ್ ಕೆ)