ಮುದ್ದು ಮಗಳು

Submitted by Raghavendra82 on Mon, 09/23/2019 - 16:58
ಬರಹ

ಮಗಳು ನನ್ನ ಮುದ್ದು ಮಗಳು ನನ್ನ ಜೀವ ಅವಳು
ಏನೇ ಬರಲಿ ಭಯವೇ ಇಲ್ಲ ಜೊತೆಯಲಿರಲು ಅವಳು

ಮನದ ಆಗಸದಿ ಚಂದ್ರಮನಂತೆ ಬೆಳ ಗುವಳು
ಅವಳು ನಗಲು ಮನೆ ತುಂಬಿತು ಹುಣ್ಣಿಮೆ ಬೆಳದಿಂಗಳು
ಮುದ್ದು ಮುದ್ದು ಮಾತನಾಡಿ ಎಲ್ಲರ ಚಿತ್ತ ಸೆಳೆಯುವಳು
ಮುಗ್ಧ ಮೊಗದ ಉತ್ಸಾಹದ ಚಿಲುಮೆ ಕಣ್ಣಲಿ ಹೊತ್ತಿಹಳು

ಅವಳ ಆಟಪಾಠ ಎಲ್ಲ ನೋಡಲು ಬಲು ಸುಂದರ
ಅವಳ ದನಿಯ ಕೇಳಲು ಕಳೆಯುವುದೆಲ್ಲಾ ಬೇಸರ
ಅವಳ ತೊದಲ ಲಾಲಿ ಕೇಳಿ ನಿದ್ರಾದೇವಿ ಬರುವಳು ಸರಸರ
ಅವಳೇ ನನ್ನ ಬಾಳಿನಲ್ಲಿ ದೈವ ಕೊಟ್ಟ ಶ್ರೇಷ್ಠ ವರ

ಚಿತ್ರ್