ಎರಡು ಕವನ - ಬರ ಮತ್ತು ಪರದೆ
ಬರಹ
ಬರ
ಹಸಿದ ಹೊಟ್ಟೆಗೆ ಹಿಡಿ ಅನ್ನವೆ ಸಾಕು,
ನೊಂದ ಮನಕೆ ಅವಳ ಮುಗುಳ್ನಗೆಯಷ್ಟೆ ಸಾಕು
ಮತ್ತೆ ಜೀವ ಬರಿಸಲು ಕುಡಿ ನೊಟವೆ ಸಾಕು
ಅನ್ನವೀಯಲೇ ಇಲ್ಲ, ಮುಗುಳ್ನಗೆಗೆ ಬರವಿಲ್ಲಿ,
ಕುಡಿ ನೋಟಕೆ ನೀನೆಲ್ಲಿ!
ಪರದೆ
ಪ್ರಪಂಚ ಕಾಣಿಸದು, ಬರಿದೇ ಕೇಳಿಸುವುದು
ಕತ್ತಲು ಕವಿದರೆ, ಕಣ್ಣು ಕುರುಡಾದರೆ
ಮಾತುಗಳಷ್ಟೆ ಕೇಳಿಸುವುದು, ಸತ್ಯಾಸತ್ಯಥೆಯಲ್ಲ
ಮನದ ತುಂಬೆಲ್ಲ ಅಜ್ನಾನ ಮನೆ ಮಾಡಿದರೆ
ಹೊಟ್ಟೆಗಷ್ಟೆ ಪಚನ, ಸಿಹಿಯ ಸುಖವಿಲ್ಲ
ನಾಲಿಗೆಯು ತನ್ನ ರುಚಿಯ ಕಳೆದರೆ
ಪ್ರೀತಿ, ಭರವಸೆಗಳಲ್ಲ, ಬರೀ ಕುರುಡು ಮರ್ಯಾದೆ
ಅಸಡ್ಡೆ, ಭಯಗಳೇ ಉಳಿವುದು ನಂಬಿಕೆ ಮುರಿದರೆ
ಬದುಕೊಂದು ಶಿಕ್ಷೆ, ನಿತ್ಯದ ಗೋಳು
ಸ್ವಾರ್ಥ ತುಂಬಿದರೆ, ಸಂಬಂಧಗಳ ಮರೆತರೆ
ಅತ್ತ ಇತ್ತಲು, ಸುತ್ತಲು, ಬರಿ ಕತ್ತಲು
ಮನದ ಹೊರಗೂ, ಒಳಗೂ ಪರದೆಗಳದ್ದೆ ಪದರು
ಬೇಕೀಗ ಅರಿವಿನ ಬೆಳಕು, ನಂಬಿಕೆಯ ಮಜಲು
ಪರದೆಯ ಹರಿದು, ತುಂಬಿಸಿ ಹೊಸ ಬೆಳಕು, ಹೊಸ ಚಿಗುರು