ಸವಿ ನೆನಪು

ಸವಿ ನೆನಪು

ಬರಹ

ಕಣ್ಣ ತೆರೆದ ನೆನಪಿಲ್ಲ, ಮೊಲೆಯುಂಡ ನೆನಪಿಲ್ಲ
ನೆನಪಿದೆ ಆ ಬಿಸಿಯಪ್ಪುಗೆ
ಅಮ್ಮನ ತೋಳಲ್ಲಿ ಮೆಲ್ಲಗೆ
ತಂಗಿಯ ಕೆನ್ನೆ ಹಿಂಡಿದ ನೆನಪು
ಕೆಣ್ಣೆ ಬೆಣ್ಣೆಯಂತೆ ನುಣುಪು
ಬಣ್ಣದ ಚಿಟ್ಟೆಯ ಹಿಡಿದ ನೆನಪು
ಮರೆಯಲಾಗದ ಆ ಪುಟ್ಟ ಹುಡುಗಿಯ ಒನಪು

ಆಡುತ ಕೆರೆಯ ತಡಿಯಲಿ,
ಕಟ್ಟಿ ಮನೆಯ ಮರಳಲಿ
ಓಡಿದ ನೆನಪು ಮುಖಕೆ ಮರಳೆರಚಿ
ಅಮ್ಮನ ಕೂಗಿದ ನೆನಪು ಜೋರಗಿ ಅರಚಿ

ಚಿನ್ನಿದಂಡು, ಕಬ್ಬಡಿ, ಮರದಿಂದ ಮರಕ್ಕೆ ಮರಕೋತಿ
ಆಡಿದ ಆಟಕ್ಕೆ, ಓಡುವ ಕಾಲಿಗೆ ಇರಲಿಲ್ಲ ಇತಿಮಿತಿ
ಮನೆ ತುಂಬ ಊರ ಹಬ್ಬದ ಸಡಗರ
ನನ್ನ ತುಂಬ ಯಕ್ಷಗಾನ ನೋಡುವ ಕಾತುರ

ಬೇಕು ಸವಿ ನೆನಪುಗಳು, ಹಳೆಯ ದಿನದತ್ತ ತೆರಳಲು
ಮೊಗದಿ ಮಂದಸ್ಮಿತ ತರಿಸಲು
ಮನದ ದುಗುಡ ಮರೆಸಲು
ಬದುಕ ಸವಿಯುಲು, ಸವಿದು ನಲಿಯಲು