Brahmins for Dummies
ಇಲ್ಲಿ ನಾನು ಏನನ್ನೂ ಉತ್ಪ್ರೇಕ್ಷೆ ಮಾಡಲು ಹೊರಟಿಲ್ಲ. ನಿಮ್ಮ ಜಾತಿ/ಮತಕ್ಕಿಂತ ನನ್ನದು ಹೆಚ್ಚು ಎಂದು ನನಗೆ ವೈಯುಕ್ತಿಕವಾಗಿ ಅನ್ನಿಸಿದ್ದಿಲ್ಲ. ಇಲ್ಲಿರುವುದು ನನಗೆ ಅನ್ನಿಸಿದಂತೆ, ನಾ ಕಂಡಂತೆ ನನ್ನ ಜಾತಿಯ ಕೆಲವು ವಿಚಾರಗಳಷ್ಟೇ.ನ
ನಾನು ಮಲೆನಾಡಿನ ಸ್ಮಾರ್ತ ಬಬ್ಬೂರುಕಮ್ಮೆ ಬ್ರಾಹ್ಮಣ. ನಮ್ಮದು ಯಜುರ್ವೇದ. ನಮ್ಮ ಕಡೆ ಬಬ್ಬೂರುಕಮ್ಮೆ ಬ್ರಾಹ್ಮಣರು ಕಡಿಮೆಯಂತೆ. ಇದ್ದುದರಲ್ಲಿ ಹವ್ಯಕರೇ ಹೆಚ್ಚು ನಮ್ಮ ಕಡೆ. ಅವರನ್ನು ಬಿಟ್ಟರೆ ಕೋಟ, ಕಂದಾವರ, ಶಿವಳ್ಳಿ, ಅಥವ ಮಾಧ್ವಮಣಿಗಳು. ಹೊಯ್ಸಳ ಕರ್ನಾಟಕರು ಇಲ್ಲವೇ ಇಲ್ವಂತೆ...ಹೀಗೆ ಸಾಗುತ್ತದೆ ನಮ್ಮ ಮಲೆನಾಡಿನ ಬ್ರಾಹ್ಮಣ ಪುರಾಣ.
ಬ್ರಾಹ್ಮಣ ಸಾರಂಶ:
೧. ನಿಮಗೆ ಬೇಕೋ ಬೇಡವೋ, ಒಳ್ಳೇದಕ್ಕೋ ಕೆಟ್ಟದ್ದಕ್ಕೋ, ಬ್ರಾಹ್ಮಣರು ಕಳೆದ ಒಂದೆರೆಡು ಸಾವಿರ ವರ್ಷಗಳಿಂದ, ನಾವು ಇಂದು ತಿಳಿದ ಇತಿಹಾಸದಂತೆ, ಭಾರತದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಪ್ರಮುಖ ಪಾತ್ರವನ್ನು ತೊಟ್ಟಿದ್ದಾರೆ. ಭಾರತೀಯ ಸಮಾಜವು ಯಾವುದಕ್ಕೆ ಸ್ಪಂದಿಸಿದರೂ, ಅದರಲ್ಲಿ ಬ್ರಾಹ್ಮಣರ ಪಾತ್ರ ಎದ್ದುಕಾಣುತ್ತದೆ.
೨. ಸಮಾಜದಲ್ಲೇ ಯಾವುದೇ ಬಗೆಯ ಹೊಸ ಪ್ರಗತಿಯುಂಟಾದರೂ ಅದರ ಉಪಯೋಗವನ್ನು ಪಡೆದವರ ಮಂಚೂಣಿಯಲ್ಲಿ ಬ್ರಾಹ್ಮಣರಿರುತ್ತಾರೆ.
೩. ಹಿಂದೆ ಜಾತಿ ಪದ್ಧತಿಯನ್ನು ನಿಯಂತ್ರಿಸುವ ಬಲವಿದ್ದಾಗ ನಾವು ಮಿಕ್ಕವರನ್ನು, ಅವರ ಯೋಚನಾಲಹರಿಯನ್ನು ನಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದೆವಂತೆ. ಕ್ಷತ್ರಿಯರಂತಲ್ಲದಿದ್ದರೂ, ತಕ್ಕಮಟ್ಟಿಗೆ ಕ್ರೌರ್ಯವನ್ನು ಪ್ರದರ್ಶಿಸುವ, ಇತರರಿಂದ ನಮ್ಮ ಕೆಲಸವನ್ನು ಮಾಡಿಸಿಕೊಳ್ಳುವ ಯುಕ್ತಿ ನಮಗಿತ್ತಂತೆ.
೪. ಇಂದಿಗೆ ಈ ಬಲವು ಕ್ಷೀಣಿಸಿರುವುದು ನಿಜವಾದರೂ ಪೂರ್ತಿ ನಶಿಸಿಲ್ಲವೆಂಬುದು ಕಣ್ಣೆದುರಿಗೇ ಇದೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇಂದಿಗೂ, ಸಾಹಿತ್ಯದಲ್ಲಿ ವಿಶ್ವವಿದ್ಯಾಲಯಗಳಲ್ಲಿ, ರಾಜಕೀಯಪಕ್ಷಗಳಲ್ಲಿ, ದಿನಪತ್ರಿಕೆಗಳಲ್ಲಿ, ಅಧಿಕಾರಿವರ್ಗದಲ್ಲಿ, ಕ್ರಿಕೆಟ್ಟಿನಲ್ಲಿ, ಸಾಫ್ಟ್-ವೇರಿನಲ್ಲಿ, ಸಾವಯವ ಕೃಷಿಯಲ್ಲಿ ನಮ್ಮ ಜನ ತುಸು ಹೆಚ್ಚೇ ಇದ್ದಾರೆ. ಸಮಾಜದಲ್ಲಿ ನಮ್ಮ ಸಂಖ್ಯೆ ಕಡಿಮೆಯಿದ್ದರೂ ಇವೆಲ್ಲದರಲ್ಲೂ ಹೆಚ್ಚಿನ ಸಂಖ್ಯಯಲ್ಲಿ ನಮ್ಮ ಪ್ರತಿನಿಧಿಗಳಿನ್ನೂ ಉಳಿದಿರುವುದು ಸತ್ಯ.
೫. ಹಲವು ಬ್ರಾಹ್ಮಣರು ಸಮುದ್ರೋಲ್ಲಂಘನ ಮಾಡಿಯೂ ಬ್ರಾಹ್ಮಣಿಕೆಯನ್ನು ಉಳಿಸಿಕೊಂಡಿರುವುದು ನಮಗೆಲ್ಲ ಖುಷಿ ತರುವ ವಿಷಯವಾಗಿದೆ. ಬ್ರಾಹ್ಮಣಿಕೆಯು ಬ್ರಾಹ್ಮಣರನ್ನು ಬಿಟ್ಟರೂ, ಬ್ರಾಹ್ಮಣನು ಜಾತಿಯನ್ನು ಬಿಡುವುದು ಅಪರೂಪ.
೬. ಕೌಟಿಲ್ಯನೂ ಬ್ರಾಹ್ಮಣನೇ, ಮನುವೂ ಬ್ರಾಹ್ಮಣನೇ, ಹೈದರಾಲಿಯ ಮುಖ್ಯಮಂತ್ರಿ ಕೂಡ ನಮ್ಮವನೇ. ಒಟ್ಟಿನಲ್ಲಿ ನಮ್ಮಲ್ಲೂ ಎಲ್ಲಾ ತರದವರಿದ್ದಾರೆ. ಒಳ್ಳೆಯವರು, ಕೆಟ್ಟವರು, ಆಸೆಬುರುಕರು, ಸಾಧ್ವಿಮಣಿಗಳು.. ಹೀಗೆ.
೭. ನಾವು ಭೌದ್ಧಿಕವಾಗಿ ಇತರರಿಗಿಂತ ಉನ್ನತರು ಎಂಬ ನಂಬಿಕೆ ನಮ್ಮಲ್ಲಿ ಈಗಲೂ ಇದೆ. ಅದನ್ನು ಈಗೀಗ ಬಾಹ್ಯವಾಗಿ ತೋರಿಸದೇ ಇರಬಹುದು.. ಆದರೆ ಇಬ್ಬರು ಬ್ರಾಹ್ಮಣರು ಆಗಾಗ ಭೇಟಿಯಾಗುತ್ತಿದ್ದರೆ, ಯಾವಾಗಲಾದರೊಮ್ಮೆ, ಸಮಯಸಿಕ್ಕಾಗ ಈ ಮಾತು ಖಂಡಿತ ಬರುತ್ತದೆ. ಅವರಿವರ ಜಾತಿಗಳನ್ನು ಬೈಯದಿದ್ದರೆ ಆಡಿಕೊಳ್ಳದಿದ್ದರೆ ನಮಗೆ ತಿಂದ 'ಹುಳಿ' ಅರಗುವುದಿಲ್ಲ.
೮. ಭಾರತದ ಹಲವು ಜಾತಿಗಳಂತೆಯೇ ಬ್ರಾಹ್ಮಣರಲ್ಲೂ ಹಲವು ಕಚ್ಚಾಡುವ ಉಪಜಾತಿಗಳಿವೆ. ನಮ್ಮಲ್ಲೂ ಒಗ್ಗಟ್ಟು ಇಲ್ಲ.
೯. ನಮ್ಮ ವಿವಿಧ ಉಪಜಾತಿಗಳ ಕಚ್ಚಾಟದಂತೆಯೇ ಬ್ರಾಹ್ಮಣರು ತಾತ್ವಿಕವಾಗಿಯೂ ಒಂದಲ್ಲ. ಬ್ರಾಹ್ಮಣ ಮೂಲಭೂತವಾದಿಗಳಿದ್ದಾರೆ, ನಕ್ಸಲೈಟ್ ಗಳಿದ್ದಾರೆ, ಆಷಾಡಭೂತಿಗಳಿದ್ದಾರೆ, ಸಮಾಜವಾದಿಗಳಿದ್ದಾರೆ, ಬಂಡವಾಳಶಾಹಿಗಳಿದ್ದಾರೆ, ಇವೆರೆಡನ್ನೂ ಪ್ರಯತ್ನಿಸಿದ/ಪ್ರಯತ್ನಿಸದ ಅಡ್ಡಗೋಡೆಯ ದೀಪಗಳೂ ಹಲವಿವೆ.
೧೦. ಇತ್ತೀಚಿನ ಬೆಳವಣಿಗೆಗಳು ಕುತೂಹಲ ಕೆರಳಿಸಬಹುದು: ಬ್ರಾಹ್ಮಣರು ಯಾರ ಯಾರ ವಿಷಯಕ್ಕೋ ತಮ್ಮ ತಮ್ಮೊಳಗೇ ಜಗಳವಾಡಿಕೊಳ್ಳುತ್ತಿರುತ್ತಾರೆ. ಮುಸ್ಲಿಮರು ಕೆಟ್ಟವರು ಎಂದು ಒಬ್ಬ ಬ್ರಾಹ್ಮಣ ಹೇಳಿದರೆ ಅವ ಪೆದ್ದ ಎಂದು ಮತ್ತೊಬ್ಬ ಬ್ರಾಹ್ಮಣ ಹೇಳುತ್ತಾನೆ. ಇವರಿಬ್ಬರ ಜಗಳವನ್ನು ನೋಡಿ ಮೂರನೆಯ ಬ್ರಾಹ್ಮಣನೊಬ್ಬ ಇದೇ ವಿವಾದವನ್ನು ಬಳಸಿ ಲಾಭ ಮಾಡುತ್ತಾನೆ. ಈ ಆಸೆಬುರುಕ ಬ್ರಾಹ್ಮಣನನ್ನು ಖಂಡಿಸಿ ಮತ್ತೊಬ್ಬ ಮಗದೊಬ್ಬ ಹೀಗೆ ಹಲವು ಬ್ರಾಹ್ಮಣರು ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ, ಬಾರುಗಳಲ್ಲಿ ಮತ್ತು ಸಿಕ್ಕಸಿಕ್ಕಲ್ಲೆಲ್ಲಾ ಚರ್ಚೆ ಮಾಡುತ್ತಾರೆ. ಒಟ್ಟಿನಲ್ಲಿ ಬ್ರಾಹ್ಮಣರು ಅಥವ ಯಾರದ್ದೋ ಬ್ರಾಹ್ಮಣಿಕೆ ಚರ್ಚೆಯಲ್ಲಿದ್ದೇ ಇರುತ್ತದೆ.
೧೧. ಬ್ರಾಹ್ಮಣರು ವಾದ ಮಾಡುವಾಗ ಇತರ ಜಾತಿಯವರನ್ನು ಸರಿಸಮಾನಾಗಿ ಕಾಣುವುದು ಕಡಿಮೆ. ಅವರನ್ನು ಸರಿಸಮಾನರಲ್ಲರೆಂದು ಬಿಟ್ಟು ವಿರುದ್ಧ ಬಣದಲ್ಲಿರುವ ಬ್ರಾಹ್ಮಣರನ್ನು ಆಯ್ಕೆಮಾಡಿ ಅವರ ವಿರುದ್ಧ ವಾದಮಾಡುವುದು ವಾಡಿಕೆ.
೧೨. ಸಮಾಜದಲ್ಲಿ ಯಾವುದೇ ಚರ್ಚೆ, ವಾದವಿವಾದ ನಡೆದರೂ, ಗೆಲ್ಲುವುದು/ಸೋಲುವುದು ಬ್ರಾಹ್ಮಣನೇ. ಖ್ಯಾತನೋ ಕುಖ್ಯಾತನೋ.. ಅವ ಬ್ರಾಹ್ಮಣನಾಗಿದ್ದರೆ ನಮಗೆ ನೆಮ್ಮದಿ.
೧೩. ಬ್ರಾಹ್ಮಣರು ಏನೇ ಚರ್ಚೆ ಮಾಡಲಿ, ಬ್ರಾಹ್ಮಣರು ಒಳ್ಳೆಯವರೇ ಕೆಟ್ಟವರೇ ಬ್ರಾಹ್ಮಣರ ಬಗ್ಗ್ಗೆ ಯಾರಿಗೆ ಕೂಲಂಕುಷವಾಗಿ ತಿಳಿದಿದೆ ಎಂಬುದೇ ಮುಖ್ಯವಿಷಯ. ಅದು ಆಡುವ ಮಾತಿನಲ್ಲಿಲ್ಲದಿದ್ದರೂ, ಗುಪ್ತಗಾಮಿನಿಯಾಗಾದರೂ ಹರಿಯುತ್ತಲೇ ಇರುತ್ತದೆ. ಬ್ರಾಹ್ಮಣಿಕೆಯಿಲ್ಲದ ವಿಷಯಗಳು ಇದ್ದದ್ದೇ ಆದರೆ, ಬ್ರಾಹ್ಮಣರಿಗೆ ಅದರಲ್ಲಿ ಆಸಕ್ತಿ ಕಡಿಮೆ.
೧೪. ಯಾವುದೇ ವಾದವಿರಲಿ, ವ್ಯಕ್ತಿಯ ನಿಲುವು ಏನೇ ಇರಲಿ, ಚರ್ಚಿಸುವಾಗ ಗೊತ್ತಿರಲೀ ಬಿಡಲಿ, ಬ್ರಾಹಣರು ಬ್ರಾಹ್ಮಣಿಕೆಯ ವಿವಿಧ ಅಭ್ಯಾಸಗಳನ್ನು, ವೇದಮಂತ್ರಗಳನ್ನು, ಪುಂಖಾನುಪುಂಕವಾಗಿ ಉದ್ಧರಿಸದೇ ಬಿಡುವುದು ಅಪರೂಪ. ವೇದಮಂತ್ರಗಳೂ ಕೂಡ, ಒಂದೊಂದು ಒಂದೊಂದು ಬಗೆಯಿದ್ದು ಯಾವ ನಿಲುವನ್ನು ಬೇಕಾದರೂ ಸಮರ್ಥಿಸಿಕೊಳ್ಳುವಂತೆ ರಚಿತವಾಗಿದೆ.
ಇದು ನನ್ನ ಜಾತಿ. ಮುಖ್ಯವಾದದ್ದೇನಾದರೂ ಬಿಟ್ಟಿದ್ದರೆ ಓದುಗರು ಸೇರಿಸಲಿ.
Comments
ಉ: Brahmins for Dummies
ಉ: Brahmins for Dummies
ಉ: Brahmins for Dummies
In reply to ಉ: Brahmins for Dummies by obba.oduga
ಉ: Brahmins for Dummies
In reply to ಉ: Brahmins for Dummies by kpbolumbu
ಉ: Brahmins for Dummies
In reply to ಉ: Brahmins for Dummies by ಶ್ಯಾಮ ಕಶ್ಯಪ
ಉ: Brahmins for Dummies
ಉ: Brahmins for Dummies
In reply to ಉ: Brahmins for Dummies by ರಘುನಂದನ
ಉ: Brahmins for Dummies
ಉ: Brahmins for Dummies