ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ

ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ

ನಿಮಗೆ ಈ ಸಮಸ್ಯೆ ಎದುರಾಗಿದೆಯೋ ಇಲ್ಲವೋ ನಾನು ಅರಿಯೆ .
ಕನ್ನಡದೇಶದಲ್ಲೇ ನಿಮ್ಮ ಜನರ ನಡುವೆಯೇ ನೀವು ಇರುತ್ತಿದ್ದರೆ ಈ ಸಮಸ್ಯೆ ನಿಮ್ಮನ್ನು ಕಾಡದು .
ಪರದೇಶದಲ್ಲಿ ಪರಭಾಷಿಗರ ನಡುವೆ ಇರುವ ಪ್ರಸಂಗ ಬಂದಾಗ , ಅವರೊಂದಿಗಿನ ನಮ್ಮ ಸಂವಹನ ಬಹಳಷ್ಟು ಕುಂಠಿತಗೊಳ್ಳುತ್ತದೆ .
ನಾವು ಎಷ್ಟೇ ಚೆನ್ನಾಗಿ ಇನ್ನೊಂದು ಭಾಶೆಯನ್ನು ಕಲಿತುಕೊಂಡಿದ್ದೇವೆಂದರೂ ನಮ್ಮ ಭಾಷೆಯಲ್ಲಿ ನಮ್ಮ ಮನಸ್ಸಿನಲ್ಲಿದ್ದುದ್ದನ್ನು ಹೇಳುವ ಹಾಗೆ ಇನ್ನೊಂದು ಭಾಷೆಯಲ್ಲಿ ಸಾಧ್ಯವೇ ಆಗುವದಿಲ್ಲ .
ನಮ್ಮ ಭಾಷೆಗೇ , ಸಂಸ್ಕೃತಿಗೇ ವಿಶಿಷ್ಟವಾದ ಪರಿಕಲ್ಪನೆಗಳಿರಬಹುದು , ನುಡಿಗಟ್ಟಿರಬಹುದು .
ಇನ್ನೊಂದು ಭಾಶೆಯಲ್ಲಿ ಹೇಳುವಾಗ ಅದಕ್ಕೆ ಈಗಾಗಲೇ ಇರುವ ಸಮಾನಾರ್ಥಕ ಶಬ್ದಗಳು , ನುಡಿಗಟ್ಟುಗಳು ನಮಗೆ ಗೊತ್ತಿರಲಿಕ್ಕಿಲ್ಲ .
ಉದಾಹರಣೆಗೆ ನಾನು ಮಡಿ / ಎಂಜಲು ಬಗೆಗೆ ಏನನ್ನೋ ಹೇಳಲು ಬಯಸ್ಸುತ್ತೇನೆ ಅಂದ್ಕೊಳ್ಳಿ , ನಾನಿರುವ ಮುಂಬೈಯಲ್ಲಿ ನನ್ನ ಸ್ನೇಹಿತರು ಇಂಗ್ಲೀಷ್ , ಹಿಂದಿ , ತಮಿಳು , ಗುಜರಾತಿ ಇನ್ನೂ ಬೇರೆ ಭಾಷಿಕರು .
ನಾನು ಹೇಳಬೇಕೆಂದಿರುವ ವಿಷಯ ಹೇಗೆ ಹೇಳಬಲ್ಲೆ? ಮಡಿ , ಎಂಜಲು ಇಂಥದಕ್ಕೆ ಇಂಗ್ಲೀಶ್ , ಹಿಂದಿಯಲ್ಲಿ ಶಬ್ದಗಳಿವೆಯೋ ಇಲ್ಲವೋ ? ಹಾಲು ಒಡೆದಿದೆ ಎನ್ನುವದನ್ನು ’ ದೂಧ್ ಟೂಟ್ ಗಯಾ’ ಎನ್ನಬಹುದೇ ? (ತೆಲುಗನೊಬ್ಬ ’ ದೂಧ್ ಟೂಟ್ ಗಯಾ’ ಅಂದಾಗ ಹಿಂದಿಯವರು ’ ಟೂಟ ಗಯಾ’ ಅನ್ನೋದಿಲ್ಲ ; ಫಟ್ ಗಯಾ ಅಂತಾರೆ ಅಂತ ಆಕ್ಷೇಪಣೆಯ ದನಿಯಲ್ಲಿ ತಿದ್ದಿದಾಗ , ನಾನು ಅವನ ನೆರವಿಗೆ ಹೋದೆ - ’ನಮಗೆಲ್ಲಾ ಎರಡೂ ಒಂದೇ ’ ಅಂತ - ಆ ಮಾತು ಬೇರೆ ) ಹಿಂದಿ ಜನಕ್ಕೋ ಹಿಂದಿ , ಇಂಗ್ಲೀಷ್ ಎರಡೇ ಭಾಶೆ , ನಮಗೋ ಅವು ಎರಡನೇ ಮೂರನೇ ಭಾಷೆಗಳು .
ಈ ಸಮಸ್ಯೆ ಜಗತ್ತಿನಾದ್ಯಂತ ಇದೆ ಅನ್ನಿಸುತ್ತದೆ , ಟೀವಿಯಲ್ಲಿ ಇಂಗ್ಲೀಷ್ ಅಲ್ಲದ ಭಾಷೆಯ ಚಲನಚಿತ್ರಗಳನ್ನು ಸಬ್-ಟೈಟಲ್ ಗಳೊಂದಿಗೆ ನೋಡುವಾಗ . ’ ಅವನಿನ್ನೂ ಚಿಕ್ಕವನು ’ ಎಂಬುದನ್ನು ’ಹಿ ಇಸ್ ಸ್ಟಿಲ್ಲ್ ಸ್ಮಾಲ್ ’ ಎಂಬಂತಹ ಅನುವಾದ ನೋಡಿದ್ದೇನೆ . ಪರಿಸರಕ್ಕೆ ಸರೌಂಡಿಂಗ್ಸ್ ಶಬ್ದ ಚೀನಾದ ಬೋರ್ಡ ಒಂದರಲ್ಲಿ ನೋಡಿದೆ.
ಆದರೆ ಒಂದು ವಿಷಯ ; ಆದರೆ ನಾವು ಯಾರ ಜತೆ ಮಾತನಾಡುತ್ತಿದ್ದೇವೋ ಅವರು ಅನೇಕ ಸಲ ನಮ್ಮ ಸಮಸ್ಯೆ ಅರ್ಥ ಮಾಡಿಕೊಂಡು , ನಾವು ಹೇಳ ಬಯಸುವದನ್ನು ತಿಳಿದುಕೊಂಡು ಬಿಡುತ್ತಾರೆ . ಇದೇ ಒಂದು ಸಮಾಧಾನ .
ಈ ಬಗ್ಗೆ ಏನಾದರೂ ಮಾಹಿತಿ / ಚರ್ಚೆ ಅಂತರ್ಜಾಲದಲ್ಲಿ ಇದೆಯೇ ? ಗೊತ್ತಿದ್ದವರು ತಿಳಿಸಿ .

Rating
No votes yet

Comments