ಈಗಲೂ ಇಂಥ ಮಹಾನ್ ಶಾಸಕರು ಇರಲೇ ಬೇಕು!
ಪಶ್ವಿಮ ಬಂಗಾಲದ ಬಿರಭೂಮ್ ಜಿಲ್ಲೆಯ ರಾಜನಗರ ಕ್ಷೇತ್ರದ ಫಾವರ್ಡ ಬ್ಲಾಕ್ ಶಾಸಕ ಬಿಜೆಯ್ ಬಾಗ್ದಿ 1987 ರಿಂದ ಸತತ ಎರಡು ಬಾರಿ ರಾಜ್ಯ ವಿಧಾನ ಸಭೆಗೆ ಆಯ್ಕೆಯಾಗಿದ್ದರು. ಆದರೆ, ಸಂಸಾರ ನಿಭಾಯಿಸಲು ಕೆಲಸ ಹುಡುಕುತ್ತಾ, ಪ್ರೈಮರಿ ಶಾಲಾ ಶಿಕ್ಷಕರೂ ಆದರು. ಸ್ಥಳೀಯ ಶಾಸಕನೆಂದು ಯಾವ ರಿಯಾಯಿತಿಯನ್ನೂ ಆತ ಅಪೇಕ್ಷಿಸಲಿಲ್ಲ. ತಮಗೆ ಶಾಸಕನಾಗಿ ದೊರಕುವ ರೂ.950/ (ಈಗಿನ ಶಾಸಕರಿಗೆ ಇದರ ಹತ್ತು ಪಟ್ಟು ಇದ್ದೀತು; ಟಿ.ಎ.ಡಿ.ಎ,ಇನ್ನೂ ಏನೇನೋ ಸೌಲಭ್ಯ ಸವಲತ್ತುಗಳು. ಮೇಲು/ಕೆಳಗಿನ ಸಂಪಾದನೆ? ಆ ವಿಷಯವೇ ಬೇರೆ ಬಿಡಿ). ಅದರಲ್ಲೇ ಮುವರು ಮಕ್ಕಳು, ತಾಯಿ ಮತ್ತು ಮುವರು ಸಹೋದರರನ್ನು ನೋಡಿಕೊಂಡು ಜೀವನ ಸಾಗಿಸಬೇಕು. ಇಷ್ಟು ಕಡಿಮೆ ಸಂಬಳದಲ್ಲಿ ಸಂಸಾರ ನಿಭಾಯಿಸುವುದು ಕಷ್ಟವೆಂದೇ ಬಾಗ್ದಿ ಶಾಲಾ ನೌಕರಿಗೆ ಸೇರಿದ್ದರು. ಆದರೇನು! ನಮ್ಮ ದೇಶದ ಕಾನೂನು ಕೆಲವೊಮ್ಮೆ ವಿಚಿತ್ರ ವಿರೋಧಾಭಾಸಗಳನ್ನೇ ಉಂಟು ಮಾಡುತ್ತದಲ್ಲ. ಫಾವರ್ಡ ಬ್ಲಾಕ್ ನಿಯಮಗಳ ಪ್ರಕಾರ ಬಾಗ್ದಿ ಪಕ್ಷದ ಪೂರ್ಣಾವಧಿ ಕಾರ್ಯಕರ್ತ, ಪಕ್ಷದ ಪೂರ್ವಾನುಮತಿ ಇಲ್ಲದೇ ಇನ್ನೊಂದು ಕೆಲಸಕ್ಕೆ ಅರ್ಜಿಕೂಡ ಹಾಕುವಂತಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಜರುಗಿಸಿತಂತೆ!
ಈಗಲೂ ಇಂಥ ಮಹಾನ್ ಶಾಸಕರು ಇರಬಹುದು, ನಿಮಗೆ ತಿಳಿದಿದ್ದರೆ ಹೇಳಿ.
ಅಂದಿಗೂ ಇಂದಿಗೂ ಪರಮಪಾಪಿಗಳಿಗೆ ಸುಭಿಕ್ಷಕಾಲವೇ ಇರಬಹುದು. ಆದರೆ, ಈ ಭೂಮಿಯಲ್ಲಿ ಮೊರರಷ್ಟು ಅವರೇ ತುಂಬಿರುವುದಾದರೆ, ಕೇವಲ ಒಂದು ಭಾಗದಷ್ಟು ಮಾತ್ರ ಸಾತ್ವಿಕರು ಇದ್ದೇ ಇರುತ್ತಾರೆ;ತಮ್ಮ ಪ್ರಭಾವ ಪರಿಣಾಬೀರುತ್ತಲೇ ಇರುತ್ತಾರೆ.
ಇದೇ ಅಲ್ಲವೇ ಅನಾದಿ ಕಾಲದಿಂದಲೂ ನಮ್ಮ ಹಿರಿಯರು "ಜಗತ್ತು ತ್ರಿಗುಣಾತ್ಮಕ" ವಾಗಿದೆ ಎನ್ನುವುದು . ಇಲ್ಲದಿದದ್ದರೆ, ಆ ಹಿರಿಯರೇ ಹೇಳಿದಂತೆ ಇಲ್ಲಿ ಮಳೆ ಬೆಳೆಯಾಗುವುದುಂಟೇ..?
-ಎಚ್.ಶಿವರಾಂ
[http://sapthagirisampada.blogspot.com|ಸಪ್ತಗಿರಿ ಸಂಪದ-ತ್ರಿಗುಣಾತ್ಮಕ ತತ್ವ]