ಇಂಗ್ಲೀಷಿಗೆ ಪುರಂದರದಾಸರು! -ಹೊಸ ಬ್ಲಾಗ್

ಇಂಗ್ಲೀಷಿಗೆ ಪುರಂದರದಾಸರು! -ಹೊಸ ಬ್ಲಾಗ್

ಕರ್ನಾಟಕ ಸಂಗೀತದಲ್ಲಿ ಮತ್ತು ನೃತ್ಯಗಳಲ್ಲಿ ದಾಸರ ಅನೇಕ ಕನ್ನಡ ಕೀರ್ತನೆಗಳನ್ನು ಹಾಡುತ್ತಾರೆ . ಕನ್ನಡದಲ್ಲದವರಿಗೆ ಅವುಗಳ ಅರ್ಥ ಗೊತ್ತಿರುವದಿಲ್ಲ . ಈ ಕೃತಿಗಳ ಅರ್ಥ ಅವರಿಗೆ ತಿಳಿದಲ್ಲಿ ಕನ್ನಡದ ಬಗ್ಗೆ ಅವರ ಭಾವನೆ ಇನ್ನಷ್ಟು ಒಳ್ಳೆಯದಾಗಬಹುದಲ್ಲವೇ ? ಇಂಗ್ಲೀಷಿನಲ್ಲಿ ಅನುವಾದಗಳಿವೆಯೇ ? ಇಲ್ಲವೆಂದೇ ತೋರುತ್ತದೆ . ಇದು ನಿಜವಾಗಿದ್ದಲ್ಲಿ ಇದೂ ಒಂದು ಆಗಬೇಕಾದ ಕೆಲಸ ಅಲ್ಲವೇ ? ಇಂಗ್ಲೀಷ್ ಜನಕ್ಕೂ ಸ್ವಲ್ಪ ಪರಿಚಯ ಮಾಡಬೇಕಲ್ಲವೇ ?

ಎರಡೂ ಭಾಷೆಗಳಲ್ಲಿ ಬಲ್ಲಿದರಾದವರು ಇದನ್ನು ಕೈಗೆತ್ತಿಕೊಳ್ಳಬೇಕು .

ಏನೇ ಇರಲಿ ನನಗೆ ಬಂದ ಹಾಗೆ ಅನುವಾದವನ್ನು ಕೈಗೆತ್ತಿಕೊಂಡಿರುವೆ . ಇದಕ್ಕಾಗಿ http://purandaradaasa.blogspot.com ಎಂಬ ವಿಳಾಸದಲ್ಲಿ ಇಂಗ್ಲೀಷ್ ಬ್ಲಾಗೊಂದನ್ನು ಶುರು ಮಾಡಿರುವೆ . ’ಇಂದು ಗಿಳಿಯು ಪಂಜರದೊಳಿಲ್ಲ’ ಮತ್ತು ’ಗುಮ್ಮನ ಕರೆಯದಿರೆ’ ಅನುವಾದಿಸಿರುವೆ . ನೋಡಿ . ಮುಂದೆಯೂ ಮಾಡಿದಾಗ ನಿಮಗೆ ತಿಳಿಸುವೆ.

Rating
No votes yet