ನಮ್ಮಲ್ಲಿಲ್ಲದ ’ನಮ್ಮದು’
ನನ್ನ ತಾಯಿನುಡಿ ಕನ್ನಡಕ್ಕೂ, ತಮಿಳಿಗೂ ನಡುವಿನ ಒಂದು ಭಾಷೆ. ಮೂಲವಾಗಿ ತಮಿಳಿನಿಂದ ಬಂದರೂ, ಶತಮಾನಗಳಿಂದ ಕನ್ನಡನಾಡಿನಲ್ಲಿರುವುದರಿಂದ ನಮ್ಮ ಮಾತು ಕನ್ನಡಿಗರಿಗೆ ಸ್ವಲ್ಪ ತಮಿಳಿನಂತೆಯೂ, ತಮಿಳಿನವರಿಗಂತೂ ತೀರಾ ಕನ್ನಡದಂತೆಯೂ ತೋರುತ್ತೆ.
ನನಗೆ ತಿಳಿದಂತೆ ಕನ್ನಡದಲ್ಲಿಲ್ಲದ inclusive we ಮತ್ತು exclusive we ನನ್ನ ತಾಯ್ನುಡಿಯಲ್ಲಿದೆ.
ಎಂಗಡೆ, ಎಂಗ್ಳುಕ್ಕು -> ನಮ್ಮ,ನಮಗೆ : ಆದರೆ ನಾನು ಯಾರಿಗೆ ಈ ಮಾತನ್ನು ಹೇಳುತ್ತಿದ್ದೇನೋ ಅವರನ್ನು ಬಿಟ್ಟು ; ಉದಾಹರಣೆಗೆ ಹೇಳುವುದಾದರೆ ಬೇರೆ ಊರಿನವರೊಬ್ಬರೊಡನೆ ನಾನು ಮಾತಾಡುವಾಗ, ನನ್ನ ಊರಿನ ವಿಷಯ ಹೇಳಬೇಕು ಅಂತಿಟ್ಕೊಳ್ಳಿ; ಆವಾಗ ನಾನು ’ಎಂಗಡೆ ಊರು’ -> ನಮ್ಮ ಊರು ಅನ್ನೋ ಬಳಕೆ ಮಾಡ್ತೀನಿ.
ನಂಬ, ನಂಬಡೆ , ನಂಬ್ಳುಕ್ಕು-> ನಮ್ಮ, ನಮಗೆ : ಈವಾಗ, ನಾನು ನಾನು ಯಾರಿಗೆ ಈ ಮಾತನ್ನು ಹೇಳುತ್ತಿದ್ದೇನೋ ಅವರನ್ನೂ ಸೇರಿಸ್ಲೊಂಡು ಈ ಪದವನ್ನು ಉಪಯೋಗಿಸ್ತೇನೆ. ಉದಾಹರಣೆಗೆ ಪರದೇಶದಲ್ಲಿರುವ ನಾನು, ಮತ್ತು ನನ್ನದೇ ಭಾಷೆಮಾತಾಡುವ ಗೆಳೆಯರೊಬ್ಬರು ಭಾರತದ ಬಗ್ಗೆ ಮಾತಾಡ್ತಿದ್ದೀವಿ ಅಂತಿಟ್ಕೊಳ್ಳಿ - ಆಗ ’ನಂಬ್ಡೆ ದೇಶೊ’ -> ನಮ್ಮ ದೇಶ ಅನ್ನೋ ಮಾತನ್ನು ಬಳಸ್ತೀವಿ.
ಈ ರೀತಿ ಬಳಕೆ ನನ್ಗೆ ತಿಳಿದಂತೆ ತಮಿಳಿನಲ್ಲಿದೆ. ತುಳುವಿನಲ್ಲೂ ಇರಬಹುದು. ಕನ್ನಡದಲ್ಲಿ ಹಿಂದೆ ಈ ಪ್ರಯೋಗವಿತ್ತೇ? ಈಗ ಸ್ವಲ್ಪ ಹಳೆಗನ್ನಡದ ಪದಗಳನ್ನು ಉಳಿಸಿಕೊಂಡಿರುವ ಹವ್ಯಕ ಕನ್ನಡದಲ್ಲೋ, ಅಥವ ಇನ್ನಾವುದಾದರೂ ಕನ್ನಡದ ಉಪಭಾಷೆಯಲ್ಲಿ ಇದು ಉಳಿದಿದೆಯೇ? ಹಳೆಯ ಕಾವ್ಯಕೃತಿಗಳಲ್ಲೇನಾದರೂ ಇದರ ಹೊಳಹಿದೆಯೇ?
ಗೊತ್ತಿದ್ದವರು ತಿಳಿಸಿ.
-ಹಂಸಾನಂದಿ
Comments
ಉ: ನಮ್ಮಲ್ಲಿಲ್ಲದ ’ನಮ್ಮದು’
ಉ: ನಮ್ಮಲ್ಲಿಲ್ಲದ ’ನಮ್ಮದು’
ಉ: ನಮ್ಮಲ್ಲಿಲ್ಲದ ’ನಮ್ಮದು’
In reply to ಉ: ನಮ್ಮಲ್ಲಿಲ್ಲದ ’ನಮ್ಮದು’ by savithru
ಉ: ನಮ್ಮಲ್ಲಿಲ್ಲದ ’ನಮ್ಮದು’
ಉ: ನಮ್ಮಲ್ಲಿಲ್ಲದ ’ನಮ್ಮದು’