ಬೈಟೊ ಕಾಫಿ !!! - ೧
ಬೈಟೊ ಕಾಫಿ !!! - ೧
ನನ್ನ ಪಕ್ಕದಲ್ಲಿ ಕುಳಿತ್ತಿದ್ದ ಮೋಹನ ಡೆಸ್ಕ್ ಬಳಿ ಎನೋ ಟೆಕ್ನಿಲ್ ಡೌಟ್ ಕೇಳೋ ತರ ಹೋಗಿ "ಏನೊ ರಿಸೈನ್ ಮಾಡಿದ್ಯಂತೆ ಅಂದೆ ... ಅಂತ ಪಿಸುಗುಡುತ್ತಾ ಕೇಳಿದೆ...
ನಡಿ ಕಾಫಿ ಕುಡ್ಕೊಂಡು ಬರ್‍ಓಣ ..... ಅಂತ ಹೋದ್ವಿ ...
ಅವನು ಹಲ್ಲುಕಿರಿದು "ಯಾರು ಹೇಳಿದ್ರು ?? "... ನಾನು ದೊಡ್ಡ ಜಾಸೂಸ್ ತರ "ಹೇಂಗೊ ಗೊತ್ತಾಯ್ತು" ಅಂದೆ !!!
"ಹೌದು, ೨ ವರ್ಷ ಆಯಿತು , ಅದಕ್ಕೆ .... " ಅಂತ ಮೋಹನ ಹೇಳಿದ
"ಎಲ್ಲಿ ಹೋಗ್ತೈದ್ದಿಯಾ ?? " ಕೇಳಿದೆ
"೩-೪ ಆಫರ್ ಇದೆ, ಡಿಸೈಡ್ ಮಾಡಬೇಕು " ಈಗೆ ಹೇಳಿ ಕುತುಹಲ ಜಾಸ್ತಿ ಮಾಡಿದ. ...
"ಎಷ್ಟು ಆಫರ್ ??
"ಇಲ್ಲಿಗಿಂತ ೫೦% ಜಾಸ್ತಿ "....
"ಆಮೇಲೆ ಇವರೇನು ಹೇಳ್ತ ಇದ್ದಾರೆ ? ಎನಾದ್ರು ಹೈಕ್ ಮಾಡಿದ್ರಾ ? ,
"೨೦% ಕೊಡ್ತಿನಿ ಅಂದ್ರು, ಆದ್ರು ಪೇಪರ್ಸ ಕೊಟ್ಟಿದ್ದಿನಿ ....
"ಇನ್ನು ಕೇಳ್ಬೇಕಾಗಿತ್ತು "...
"ಹೈಕ್ ಕೊಡಬೇಕಾದ್ರೆ ನೀನೇನು ಮಾಡಿದೆ ಅಂತಾರೆ, ಅಮೇಲೆ ಬಿಡ್ತಿನಿ ಅಂದ್ರೆ ನೀನೆ ಆಸೆಟ್ ಅಂತಾರೆ , ಅವಾಗ ನೆಗೆಟ್ವೀಸ್ ಹುಡುಕುತ್ತಾರೆ, ಈಗ ಪಾಸಿಟ್ವೀಸ್ ಹೇಳ್ತಾರೆ ...
"ಹೊಂ " ಅಂತಾ ಸುಮ್ಮನಾದೆ ....
ನೀನು ಬರ್ತಿಯಾ ? , ನಂಗೆ ಮ್ಯಾನೇಜರ್ ಚನ್ನಾಗಿ ಗೊತ್ತು, ನಿನ್ನ ಸೀ.ವಿ ಕಳಿಸು ಅಂದ ....
ನಾನು ಯೋಚನೆ ಮಾಡಿ ಹೇಳ್ತಿನಿ .... ಅಂದೆ ... :)
Comments
ಉ: ಬೈಟೊ ಕಾಫಿ !!! - ೧