ಅಂತರಾಳದ ಮಾತು......

ಅಂತರಾಳದ ಮಾತು......

ಬರಹ

ಅಂತರಾಳದ ಮಾತು.....

 

ನೀ ನುಡಿವ ಒಂದೊಂದು ಮಾತು

ಅಚ್ಚಾಗಿಹುದು ಮನದಲ್ಲಿ

ಬುದ್ಧಿಯ ಕೈಗೆ ಸಿಲುಕಿ

ಕೆಣಕುವುದು ನೂರಾಗಿ....

 

ನೀ ನಗುವ ವೈಖರಿಗೆ

ಹೃದಯ ಮಿಡಿಯುತಿಹುದು

ತಿಳಿನೀರಲಿ ಬಿದ್ದ ಎಲೆಯೊಂದು

ಮೂಡಿಸುವ ಮಧುರ ಅಲೆಗಳ ಹಾಗೆ...

 

ಮನಸು ಅರಿತದ್ದು ಬುದ್ಧಿ ಅರಿಯಲಾರದು

ಮೌನವೆ ತುಂಬಿಹುದು ಅಂತರಾಳದಲಿ

ನಿನ್ನ ಈ ಸವಿ ಭಾವಕೆ ಸರಿಸಾಟಿಯಾಗಿ.....

 

ಪೂರ್ಣಿಮಾ ಹೆಬ್ಬಾರ್.