ಅಂತರ್ಜಾಲದಲ್ಲಿ ಆಫೀಸ್ !!!

ಅಂತರ್ಜಾಲದಲ್ಲಿ ಆಫೀಸ್ !!!

ಒಂದು ಆಫೀಸ್ ಅಂದ್ರೆ ... ಕೆಲವು ಕಡತಗಳು, ಈ-ಮೇಲ್ ಸೌಲಭ್ಯ ,ಚ್ಯಾಟ್ , ಬೇಕಂದಾಗ ಸಿಗಬೇಕಾದ ಸಹದ್ಯೋಗಿಗಳು, ಇವರೆಲ್ಲರನ್ನು ಬೇಕಾದದ್ದು ಒಂದು ಜಾಗ.

ಈಗ ಬರೋದು ಜಾಗದ ಪ್ರಶ್ನೆ !!! ಜನರನ್ನು ತಮ್ಮ ಮನೆಯಿಂದ ಕೆಲ್ಸ ಮಾಡುವಂತೆ ಹೇಳಿ, ಅಂತರ್ಜಾಲವನ್ನು ಹಾಕಿ ಬಿಟ್ಟರೆ ಸಾಕು, ನಾನು ತೀರ್ಥಹಳ್ಳೀಲಿ ಕುಳಿತುಕೊಂಡು ಪ್ರಕೃತಿ ಸೌಂದರ್ಯ ಸವೆಯುತ್ತ ಕೆಲಸ ಮಾಡಬಹುದು... ನಮ್ಮ ಸಹದ್ಯೋಗಿಗಳನ್ನು ನೋಡಬೇಕಾದರೆ ವಿಡಿಯೊ ಕಾನ್ಫೆರೆನ್ಸ್ ನೋಡಿ ಮಾತಾಡಬಹುದು !!!

ಈಗ ಇದು ಲಭ್ಯವಿದೆ, " ಗೂಗಲ್ ಆಪ್ಸ್ " ಪರಿಹಾರ ಇದಕ್ಕೆ ಸೂಕ್ತವಾಗಿದೆ !!!. ಇದಕ್ಕೆ ತಗಲುವ ವೆಚ್ಚ ವರ್ಷಕ್ಕೆ ಕೇವಲ ೫೦ ಡಾಲರ್(ರೂ ೨೦೦೦), ತಿಂಗಳಿಗೆ ೪ ಡಾಲರ್ (ರೂ ೧೬೬)  . ನಿಮಗೆ ಬೇಕಾಗಿರೋದು ಅಂತರ್ಜಾರಕ (browser) ಅಷ್ಟೆ !!! ಹಾಗೆ ನೋಡಿದರೆ ಎಷ್ಟೋಂದು ಕೆಲ್ಸ್ಗಳು ಆಫೀಸ್ಗೆ ಹೋಗದೆ ಮನೆಯಲ್ಲಿ ಮಾಡಬಹುದು.

ಉಪಯೋಗಗಳು:
೧. ನಿಮ್ಮ ಆಫೀಸ್ ಬೇಕಾದ ಸಾಪ್ಟ್ ವೇರ್, ಹಾರ್ಡ್ ವೇರ್, ಅದನ್ನು ನೋಡಿಕೊಳ್ಳುವ ಜನ, ಅವರಿಗೆ ಸಂಬಳ, ವೈರಸ್ ಗಳ ತೊಂದರೆ ಇರೊಲ್ಲ!!!
೨. ನೀವು ನಿಮ್ಮ ಬೇಳೆದೆಂತೆಲ್ಲ, ನಿಮ್ಮ ನೋಂದಣೆ ವೆಚ್ಚ ಬರಿಸಿದರೆ ಸಾಕು, ಅದಕ್ಕೆ ಹೊಸ ಹಾರ್ಡ್ ವೇರ್ ತೆಗುದುಕೊಳ್ಳುವ ಅವಶ್ಯಕತೆ ಇರೊಲ್ಲ !!!
೩. ಸ್ಥಳಿಯ ವ್ಯವಹಾರ ಇನ್ನು ಹೆಚ್ಚುತ್ತದೆ.. ಎಲ್ಲ ಕೆಲ್ಸಗಳಿಗು ನಗರಗಳಿಗೆ ಬರುವ ಅವಶ್ಯಕೆತೆ ಇರೊಲ್ಲ !!

ನಿಮ್ಮ ಏನು ಅನ್ನಿಸುತ್ತೆ ???

ಹೆಚ್ಚಿನ ವಿಷಯಗಳಿಗೆ ಈ ಲಿಂಕ್ ನೋಡಿ ...  https://www.google.com/a/

Rating
No votes yet

Comments