'ದಂಡ'ಯಾತ್ರೆ
ಬರಹ
ನವಾಜ್ ಶರೀಫ
ಹೊರಟ ಸವಾರಿ
ಸದರಿ ಆ ದಾರಿ
ಅಧಿಕಾರಿ ಮುಶರಫ
ಬರುವ ನಾಳೆ ಬೀದಿಗೆ
ಅಪಾಯ ತರುವ
ತನ್ನ ಗಾದಿಗೆ..
ಗನ್ನು ಹಾಕಿ ಎದುರಿಗೆ
ದೂಡಿದ
ಬೆನ್ನು ಹಿಡಿದು ಸೌದಿಗೆ
ರಾಜಕೀಯ ದಾಳ
ನೇತಾಡುವ ಗಾಳ
ಯಾರ ಕೊಕ್ಕೆ
ಯಾರಿಗೆ ಸಿಕ್ಕಿ
ಯಾರಾಗುವರು ನಾಳೆ
ದೊಡ್ಡ ಬೇವಕೂಫ?