ದೀಪವೊಂದಿರಬೇಕು ನಿನ್ನ ಕಾಣಲು
ಬರಹ
ದೀಪವೊಂದಿರಬೇಕು ನಿನ್ನ ಕಾಣಲು
ಸೂರೊಂದಿರಬೇಕು ನಿನ್ನ ಕಾಯಲು
ತಿನಿಸಿರಬೇಕು ನಿನ್ನ ಬೇಡಲು
ಮಿನುಗುತ್ತಿರಬೇಕು ನಿನ್ನ ಸಲಹಲು
ಬಯ್ತೆರೆದ ನೆಲ,
ತೂತಿನ ಸೂರು,
ತೊರೆಯದ ಹಸಿವು,
ನಮ್ಮ ಜೀವನದ ಕಾರಿರುಳು
ಕಾಣಲ್ಲೊಲ್ಲೆ ನೀ,
ಕಾಯಲೊಲ್ಲೆ ನೀ,
ಮಣಿಯಲೇಕೆ ನಾ
ನೀ ಬರೆದ ಕಥೆಗೆ...