ಹೀಗೊಂದು ಹಿಂದಿ ಹಾಡು ...ತೇರೇ ಬಿನಾ ಜಿಂದಗೀ ಸೆ ಕೋಯೀ
ನಿನ್ನೊಂದಿಗಲ್ಲದೆ ಬದುಕಿನೊಂದಿಗೆ ನನ್ನದೇನೂ ತಕರಾರಿಲ್ಲ
ಇಷ್ಟಕ್ಕೂ ನೀನಿಲ್ಲದೇ ಬದುಕು ಬದುಕೇ ಅಲ್ಲ !
ಮನಸ್ಸಿನಲ್ಲಿ ಹೀಗೊಂದು ವಿಚಾರ ಬರುತ್ತದೆ ...
ನಿನ್ನ ಮಡಿಲಲ್ಲಿ ತಲೆಯನ್ನಿಟ್ಟು ಅತ್ತು ಬಿಡೋಣ ಅಂತ ,
ಅಳ್ತಾ ಇದ್ದು ಬಿಡೋಣ ಅಂತ .
ಆದ್ರೆ ನಿನ್ನ ಕಣ್ಣಲ್ಲಾದರೂ ಕಂಬನಿಗೇನೂ ಬರ ಇಲ್ಲವಲ್ಲ ?
ಇವತ್ತಿನ ರಾತ್ರಿ ಚಂದ್ರ ಮುಳಗದೇ ಇರಲಿ ,
ರಾತ್ರಿಯನ್ನು ತಡೆದುಬಿಡಬೇಕು ...
ರಾತ್ರಿಯ ವಿಷಯ ಏನು ,
ಜೀವನ ಆದ್ರೂ ಇನ್ನೆಷ್ಟು ಬಾಕಿ ಉಳ್ದಿರೋದು !
... ಇದು ಇಂದಿರಾಗಾಂಧಿ ಜೀವನ ಆಧಾರಿತ ಚಿತ್ರ - ಆಂಧೀ ಯಲ್ಲಿ ಕವಿ ಗುಲ್ಜಾರರು ಬರೆದ ಹಾಡು ...
Rating