ಮರಾಠ ಸೈನ್ಯಾಧಿಕಾರಿಗಳು, ಹಿಂದೆ, "ಶೃಂಗೇರಿ ಮಹಾಸಂಸ್ಥಾನ," ದ ಮೇಲೆ ದಾಳಿಯಿಟ್ಟು, ಲೂಟಿ ಮಾಡಿದ್ದರೆಂಬ ಸಂಗತಿ ನಿಜವೇ ?

ಮರಾಠ ಸೈನ್ಯಾಧಿಕಾರಿಗಳು, ಹಿಂದೆ, "ಶೃಂಗೇರಿ ಮಹಾಸಂಸ್ಥಾನ," ದ ಮೇಲೆ ದಾಳಿಯಿಟ್ಟು, ಲೂಟಿ ಮಾಡಿದ್ದರೆಂಬ ಸಂಗತಿ ನಿಜವೇ ?

ಬರಹ

ಶೃಂಗೇರಿ ಸಂಸ್ಥಾನಕ್ಕೂ "ಮರಾಠಿ " ಗರಿಗೂ ವಿಶೇಷ ಭಾವನಾತ್ಮಕ ಸಂಬಂಧವಿರುವುದನ್ನು ನಾವು ಗಮನಿಸಬಹುದು. ಕ್ರಿ. ಶ. ೧೭೯೦-೧೭೯೨ ರ ಅವಧಿಯಲ್ಲಿ, ಬಿದನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಟಿಪ್ಪುವಿನ ಆಳ್ವಿಕೆಗೆ ಒಳಪಟ್ಟಿತ್ತು. ಮರಾಠಸೈನ್ಯ, ಆ ಪ್ರದೇಶಗಳ ಮೆಲೆ ಯುದ್ಧಮಾಡಿತು. ಆಗ ಶೃಂಗೇರಿಯ ಮೇಲೂ ದಾಳಿಯಿಟ್ಟ ಸೈನ್ಯ, ಆಗಿನಕಾಲದ ೬೦ ಲಕ್ಷ ರೂಪಾಯಿಗಳಷ್ಟು, ನಗ-ನಾಣ್ಯಗಳನ್ನು ದೋಚಿದ ಉಲ್ಲೇಖವಿದೆ. ಈ ದಾಳಿಯನ್ನು ಮಾಡಿದ ಮರಾಠಿ-ಸೇನಾಧಿಪತಿ, "ಪರಶು ರಾಮ್ ಭಾವು," ಎಂಬಾತ. ಈ ಸಂಗತಿ ಟಿಪ್ಪೂ ಸುಲ್ತಾನನಿಗೆ ತಿಳಿದಾಗ, ಶೃಂಗೇರಿಯಲ್ಲಿ ಪುನಃ ಪ್ರತಿಷ್ಠೆ, ಕುಂಬಾಭಿಷೇಕಗಳಿಗೆ ಅವನೇ ಎರ್ಪಾಟುಮಾಡಿದನಂತೆ. ಮರಾಠಿ ಪೇಷ್ವೆಗಳು ತಮ್ಮ ಸೇನಾಧಿಪತಿಯಿಂದ ಆದ ಅಪರಾಧಕ್ಕೆ ಕ್ಷಮೆ-ಯಾಚಿಸಿ, ಶ್ರೀ ಮಠಕ್ಕೆ ಆದ ನಷ್ಟಕ್ಕೆ ಪರಿಹಾರಧನವನ್ನು ಕಟ್ಟಿಕೊಡಲಾಯಿತಂತೆ.

ಆನಂತರ ಪೇಷ್ವೆಗಳು ಶೃಂಗೇರಿ ಜಗದ್ಗುರುಗಳನ್ನು, ಪುಣೆಗೆ ಬೇಟಿನೀಡಲು ಕೋರಿದ್ದರು. ಶ್ರೀಗಳು ಅವರ ಆಹ್ವಾನವನ್ನು ಮನ್ನಿಸಿ, ಅಲ್ಲಿಗೆ ಹೋದರಂತೆ. ಮಹರಾಷ್ಟ್ರದ ನಾಸಿಕ್ ಕ್ಷೇತ್ರದಲ್ಲಿ, ಶ್ರೀಮಠದ ಇಬ್ಬರು ಪೂರ್ವಾಚಾರ್ಯರುಗಳು ಬ್ರಹ್ಮೈಕ್ಯರಾಗಿದ್ದಾರೆ. ಶಿವಾಜಿಯನಂತರ ಪೇಷ್ವೆಗಳು ಅಧಿಕಾರವಹಿಸಿಕೊಂಡರಷ್ಟೆ. ಅವರುಗಳು, ಶೃಂಗೇರಿ ಮಠಕ್ಕೆ, ನಿಷ್ಠೆಯಿಂದ ನಡೆದುಕೊಳ್ಳುತ್ತಿದ್ದರು. ಘೋರ್ಪಡೆಗಳು, ಸಿಂಧ್ಯರು, ಹೋಳ್ಕರ್ ಗಳು, ಭೋಂಸ್ಲೆಗಳು, ಮತ್ತು ಶಿವಾಜಿಮನೆತನದವರೆಲ್ಲಾ ಭಕ್ತಿಪೂರ್ವಕವಾಗಿ ಸಂಬಂಧವನ್ನು ಸ್ಥಾಪಿಸಿದ್ದರು. ಜಮಖಂಡಿ ರಾಜರು, ಶೃಂಗೇರಿ ಮಠಕ್ಕೆನೀಡಿದ ಸುವರ್ಣಾಭರಣಗಳು, ಇಂದಿಗೂ ಬಳಕೆಯಲ್ಲಿವೆ.

ಮುಂಬೈ ನ ಚೆಂಬೂರಿನಲ್ಲಿ ಸ್ಥಾಪಿಸಿರುವ ಶಾರದಾ ವಿದ್ಯಾಕೆಂದ್ರದಲ್ಲಿ, ವಾಸ್ತವ್ಯಹೂಡಿರುವ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು, ತಮ್ಮ ಈ ಬಾರಿಯ ಶರನ್ನವರಾತ್ರಿಯನ್ನು ಆಚರಿಸುತ್ತಿದ್ದಾರೆ. ಸ್ವಾಮೀಜಿಗಳಿಂದ ದೇವಿಗೆ ಸಲ್ಲಬೇಕಾದ ಪರಂಪರ್‍ಆಗತ ಸೇವೆಗಳೆಲ್ಲಾ ಮುಂಬೈನಲ್ಲೇ ಸಲ್ಲುತ್ತವೆ. ಒಂದು ವ್ಯತ್ಯಾಸವೆಂದರೆ, ಮುಂಬೈನಲ್ಲಿ ಅವರು ರಾಜಲಾಂಛನ ಧರಿಸುವುದಿಲ್ಲ. ಶೃಂಗೇರಿಯಲ್ಲಿದ್ದಾಗ ಮಾತ್ರ, ಆಚರಣೆ ನಡೆಯುತ್ತದೆ.

೧೨ ವರ್ಷಗಳಿಂದ ದೂರಪ್ರಯಾಣಮಾಡದೆ ಶೃಂಗೇರಿಯಲ್ಲೇ ತಂಗಿದ್ದ ಶ್ರೀಗಳು ರಾಜ್ಯ- ಹೊರರಾಜ್ಯಗಳ ಭಕ್ತರ ಆಗ್ರಹಕ್ಕೆ ಮನ್ನಣೆಕೊಟ್ಟು ಈ ಬಾರಿ, ಪ್ರವಾಸಕೈಗೊಂಡಿದ್ದಾರೆ. ಹೀಗೆಂದೇ, ಅವರು ಮುಂಬೈನಲ್ಲಿರುತ್ತಾರೆ. ಶ್ರೀಮಠದ ಜಗದ್ಗುರುಗಳಾಗಿ ಪಟ್ಟಕ್ಕೇರಿದ ಬಳಿಕ, ಕೇವಲ ೨ ನೆಯ ಬಾರಿ, ನವರಾತ್ರಿ ಸಮಯದಲ್ಲಿ ಶೃಂಗೇರಿಯಿಂದ ಹೊರಗುಳಿದುಕೊಂಡಿದ್ದಾರೆ.

ಶೃಂಗೇರಿ ಮಹಾಕ್ಷೇತ್ರದಲ್ಲಿ ನಡೆಯುವ ಉತ್ಸವದಲ್ಲಿ ಯಾವ ಕಡಿಮೆಯೂ ಇರುವುದಿಲ್ಲ. ಒಂದೆಂದರೆ, ಸ್ವರ್ಣ ಸಿಂಹಾಸನದ ಮೇಲೆ ಅವರ ಪಾದುಕೆಗಳನ್ನು ಇಟ್ಟು ಸ್ವಾಮಿಗಳು ಅಲ್ಲಿಯೇ ಉಪಸ್ಥಿತರಿದ್ದಾರೆಂದೇ ಭಾವಿಸಿ, "ಶರನ್ನವರಾತ್ರಿ ಉತ್ಸವವನ್ನು," ಆಚರಿಸಲಾಗುವುದು.

-" ಶೃಂಗೇರಿ ಶಾರದೆ ", ಲೇಖಕ : ಪ್ರಭಾಕರ ಕಾರಂತ, ತರಂಗ, ೧೮, ಅಕ್ಟೋಬರ್, ೨೦೦೭, ಪುಟ. ೧೫