ಪಯಣ

ಪಯಣ

ಬರಹ

ಪಯಣ
*****

ಅಲೆದಾಡುವ ಮನ
ಅರಸಿದೆ ನೆಲೆಯನು.
ಮಿಂಚ ಮಿಂಚಿಸುವ ವೇಗದಲಿ
ಹುಡುಕಿದೆ ಏನನೋ!!

ಎತ್ತ ಸಾಗಿದೆ ಪಯಣ ?
ಎಲ್ಲಿಹುದು ಎನ್ನ ಗುರಿ ?
ಪಯಣದಲಿ ಜೊತೆಯಾಗೋ
ಗೆಳೆಯರಾರೋ ?

ಇಂದು ಕಂಡಂಥ ನೆಲೆ
ಕಾಣದಾಯಿತು ನಾಳೆ.
ನಿಜದ ವಿಮರ್ಶೆಯಲಿ
ತಿಳಿಯದಾಯಿತು ವೇಳೆ.

ಸೋಲಿನ ವಿಮರ್ಶೆಯಲಿ,
ಗೆಲುವ ಧನ್ಯತೆಯಲ್ಲಿ,
ಮೂಡುವುದು ಮನಸಿನಲಿ
ವಿಚಾರಗಳ ಮತ್ತೊಂದು ಲಹರಿ.

ಹುಟ್ಟು ಸಾವಿನ ನಡುವೆ
ಸಾಗುವುದು ಜೀವನ ಯಾನ.
ಕೊನೆ ಮೊದಲು ಕಾಣದದು
ಜ್ಞಾನದಾಹದ ಪಯಣ.

-೦-
(ಬರೆದದ್ದು ೯/೯/೯೯. )