ಅವನು

ಅವನು

ಅವನು ಹುಟ್ಟಿದ್ದು ಉದುಪಿಯಲ್ಲಿ.ಬೆಳೆದದ್ದು ರಮರಾಜನಗರದಲ್ಲಿ.ಜೀವನ ಹಾಗೆ ಸಾಗುತ್ತಿತ್ತು ಸಂತೋಷವಾಗಿ ಅವನು 14 ಅಗುವ ವರೆಗೆ.ಕೊಮು ದಳ್ಳುರಿ ನಗರವನ್ನು ಅವರಿಸಿಕೊಂಡುಬಿಟ್ಟಿತು.ಜನರ ಪ್ರಾಣ ನೀರಿನಂತೆ ಹರಿಯತೊಡಗಿತು.ಅದರ ಜ್ವಾಲೆ ಇವನ ಮನೆ ಹತ್ತಿರ ಬಂತು ಒಂದು ಪೈಶಾಚಿಕ ವ್ರುತ್ತಿಯ ನರಮಾನವನ ರೂಪದಲ್ಲಿ.ಇವನು ಹಾಗು ಇವನ ಗೆಳೆಯರು ಅದರ ಕ್ರಿಯಾಕರ್ಮ ಮಾಡಿದರು,ಮೊದಲ ಬಾರಿ ಇವನ ಕೈಯಲ್ಲಿ ಕತ್ತಿ ಬಂದಿತ್ತು ಅದರ ಮೇಲೆ ರಕ್ತ ಜಿನುಗುತ್ತಿತ್ತು
ಕತ್ತಿ ಧೈರ್ಯ ತುಂಬಿತ್ತು ಮನಕ್ಕೆ.ಮಂತ್ರ ಹೇಳುವ ಬಾಯಲ್ಲಿ ಬೈಗುಳು ಬರತೊಡಗಿದವು ಧಾರಕರವಾಗಿ.ಇವನು ಬದಲಾಗಿಬಿಟ್ಟ.ಗೆಳೆಯರ ಬಳಗದಲ್ಲಿ ಹೀರೊ ಅಗಿಬಿಟ್ಟ.ಇಡೀ ಬೀದಿಯ ನಾಯಕನಾಗಿಬಿಟ್ಟ.ಕೊಮುದಳ್ಳುರಿ ತಣ್ಣಗಾಯ್ತು ಅದರೆ ಇವನು ಮಾತ್ರ ತಣ್ಣಗಾಗಿರಲಿಲ್ಲ.ಇವನಿಗೆ ಕಾರಣ ಬೆಕಾಗಿತ್ತು ತನ್ನ ಶಕ್ತಿ ತೊರಿಸಿಕೊಳ್ಳಲು.ಹುಡುಕತೊಡಗಿದ ಜನರನ್ನು.ಮನೆಯಲ್ಲಿ ಇಲ್ಲದ ಕಾರಣಕ್ಕೆ ರೆಗಾಡತೊಡಗಿದ.ತನ್ನ ಪೌರುಷ ತೊರಲು ಇವನಿಗೆ ಸಿಕ್ಕ ಅವಕಾಶ ಸ್ಚೂಲಿನಲ್ಲಿ.

ಇವನ ವರ್ತನೆ ಇಂದ ಬೇಸತ್ತ ತಂದೆ ತಾಯಿ ವರ್ಗ ಮಾಡಿಸಿಕೊಂಡು ಬೇರೂರಿಗೆ ಬಂದರು.ನಗರ ಜೀವನ ಇವನಿಗೆ ಒಮ್ಮೆಲೆ ಇಷ್ಟವಾಗಿಬಿಟ್ಟಿತು.ಥಳಕು ಬಳುಕಿನ ಜನ ಹಾಗು ಕಣ್ಣು ತಂಪು ಇವನನ್ನು ಸೆಳೆದುಬಿಟ್ಟಿತ್ತು.
ಎಲ್ಲವನ್ನು ಪಡೆಯಬೇಕಾದರೆ ಹಣ ಬೇಕು ಎನ್ನುವ ಸತ್ಯ ಇವನಿಗೆ ಅರಿವಾಗಿತ್ತು.ಕೈ ಕಾಲು ಮುರಿಯಲು ಶುರು ಮಾಡಿದ.ಹಣ ಹೆಣ್ಣು ಬರಲು ಸುರುವಾಯಿತು ಇವನ ವ್ಯಕ್ತಿತ್ವದಲ್ಲಿ ಬದಲಾವಣೆ ಸುರುವಾಯಿತು.ಇವನು ಗಮನಿಸಲು ಸುರುಮಾಡಿದ.ಗಮನಿಸುವದರ ಜೊತೆ ಯೋಚಿಸಲು ಸಹ ಸುರು ಮಾಡಿದ.ಇವನಿಗೆ ಎಲ್ಲರ ಥರ ಗೂಂಡಾ ಅಗಿ ಸಾಯಲು ಇಷ್ಥ ಇರಲಿಲ್ಲ.ತಾನು ಬದಲಾಗಬೇಕು.ಅಧಿಕಾರ ಹಣ ಎರಡು ಬೇಕು ಜೊತೆಗೆ ಮರ್ಯಾದೆಯು ಬೇಕು ಎನ್ನಿಸತೊಡಗಿತು ಇವನಿಗೆ.
ಈ ಮಧ್ಯ ಪೀಯುಸಿ ಮುಗಿಸಿದ.ಮುಂದೆ ಏನು ಏನ್ನುವುದು ಇವನಿಗೆ ತಿಲಿಯುತ್ತಿಲ್ಲ.ಬೇರೂರಿಗೆ ಬಂದ ಇಸ್ರೆಲಿನ ಯುವಕನ ಜೊತೆ ಇವನು ಮನೆ ಬಿಟ್ಟು ಹೊರಟೆ ಬಿಟ್ಟ.ಬಹಳ ಕಷ್ಟ ಪಟ್ಟು ತಲುಪಿದಾಗ ಎವನಿಗಾದ ಸಂತೊಷ ಆಷ್ಟಿಷ್ಟಲ್ಲ.ಇವನ ಕೈಗೆ ಏಕೆ 47 ಬಂದಾಗ ಅವನು ರಾತ್ರಿ ಇಡಿ ನಿದ್ದೆ ಮಾಡಲಿಲ್ಲ.ಸಲ್ಪ ದಿನದಲ್ಲೆ ಅದರ ಪ್ರಯೋಗ ಸಹ ಆಯಿತು.

Rating
No votes yet

Comments