ಜನತಾದಳ(ಕರ್ನಾಟಕ)yes!-ಈಡೇರದ ಕನಸು:(
ಕರ್ನಾಟಕಕ್ಕೆ ಒಂದು ಪ್ರಾದೇಶಿಕ ಪಕ್ಷ ಬೇಕು. ಅನೇಕರು ಪ್ರಯತ್ನಿಸಿ ಸೋತರು.ವಿಜಯ ಸಂಕೇಶ್ವರ್ ಕಳೆದ ಬಾರಿ ಪ್ರಯತ್ನಿಸಿ ಉತ್ತಮ ಬೆಂಬಲ ಸಿಗದೇ ಇದ್ದ ಪಕ್ಷಗಳಲ್ಲೇ ಒಂದನ್ನು ಆರಿಸಬೇಕಾಯಿತು.ಈಗಿರುವುದು ಒಂದೇ ದಾರಿ.ಕರ್ನಾಟಕದ ಜನತಾದಳ(ಯಸ್) ಪ್ರಾದೇಶಿಕ ಪಕ್ಷವಾಗಲಿ.
ನೋಡಿ,ಉಳಿದೆರಡು ಪಕ್ಷಗಳು ಪ್ರತಿಯೊಂದಕ್ಕೂ ಹೈಕಮಾಂಡ್ ಕಡೆ ಮುಖ ಮಾಡಿ ನಿಲ್ಲಬೇಕು. ಕಳೆದ ಬಾರಿ ಒಂದು ಮುಖ್ಯಮಂತ್ರಿ ಆಯ್ಕೆಗೆ ಅದೆಷ್ಟು ಬಾರಿ ದೆಹಲಿಗೆ ರಾಜಕಾರಣಿಗಳು ದೌಡಾಯಿಸಲಿಲ್ಲ. ನಮ್ಮ ಮುಖ್ಯಮಂತ್ರಿಯನ್ನು ನಾವು ಗೆಲ್ಲಿಸಿದ ಎಮ್.ಎಲ್.ಎ.ಗಳು ಒಟ್ಟು ಸೇರಿ ಆಯ್ಕೆ ಮಾಡದೇ, ಹೈಕಮಾಂಡ್ ನಿರ್ಧಾರಕ್ಕೆ ಬಿಡುವುದು ನನಗಂತೂ ನಾಚಿಕೆಯ ವಿಷಯ.
ಮಾನ್ಯ ದೇವೇಗೌಡರು ರಾಷ್ಟ್ರ ಮಟ್ಟದ ಚಿಂತನೆಯನ್ನು ಮರೆತು,ತಮ್ಮ ಬುದ್ಧಿವಂತಿಕೆ,ತಂತ್ರಗಾರಿಕೆಯನ್ನು ಕರ್ನಾಟಕದ ಒಳಿತಿಗಾಗಿ,ಬಲಿಷ್ಠ ಕರ್ನಾಟಕದ ನಿರ್ಮಾಣಕ್ಕೆ ಮುಡಿಪಿಡಲಿ. (ಪತ್ರಿಕೆಗಳಲ್ಲಿ ಹಾಗೂ ವಿರೋಧಿಗಳು ಹೇಳಿರುವಂತೆ ಗೌಡರು ತಲೆತಲಾಂತರಕ್ಕೆ ಬೇಕಾದಷ್ಟು ಆಸ್ತಿ,ಹಣ ಸಂಪಾದಿಸಿಯಾಗಿದೆ.)
ನಮ್ಮ ಮಾಜಿ ಮುಖ್ಯಮಂತ್ರಿಯವರು ಯುವಕರು.ಜನಪ್ರಿಯತೆ ಕೊಂಚ ಮಸುಕಾದರೂ,ಕಮ್ಮಿಯಾಗಿಲ್ಲ.ದೊಡ್ಡ ಗೌಡರು ಅವರ ಬೆಂಬಲಕ್ಕೆ ನಿಲ್ಲಲಿ. ಕನ್ನಡ,ಕರ್ನಾಟಕದ ಒಳಿತಿಗಾಗಿ ಆಶಿಸುವ ಶಾಸಕರನ್ನು ಒಟ್ಟು ಸೇರಿಸಲಿ, ಹಳೆಯ ಸಂಗತಿಗಳನ್ನು ಮರೆಯಲಿ,ಉಳಿದ ಪಕ್ಷಗಳನ್ನು ದ್ವೇಷಿಸುವುದನ್ನು ಬಿಡಲಿ, ಕರ್ನಾಟಕದ ಪ್ರತಿ ಹಳ್ಳಿ ಹಳ್ಳಿಗೂ ಏನಾಗಬೇಕು ಎಂಬ ವರದಿ ತಯಾರಿಸಿ,ಅದಕ್ಕೆ ತಕ್ಕುದಾದ ಸಿದ್ಧತೆ ನಡೆಸಲಿ.
ಮಠ,ಮಂದಿರ,ಚರ್ಚ್,ಮಸೀದಿಗಳ ಭೇಟೀ ಕಮ್ಮಿಯಿರಲಿ.ಯಾಗ,ಹೋಮ,ಜ್ಯೋತಿಷಿಗಳಿಂದ ಕೇವಲ ೫ ವರ್ಷ ದೂರವಿರಲಿ. ಜಾತಿರಾಜಕಾರಣ, ನಾಟಕ ಮರೆತು ಕರ್ನಾಟಕದನೆಲ,ಜಲ,ಜನರ ಒಳಿತನ್ನು ಆಲೋಚಿಸಲಿ.
ಇದೇ ಈಡೇರದ ಕನಸು.