ಅಪಾರ ಕೀರ್ತಿ ಗಳಿಸಿ ಮೆರೆವ ಕ್ರಿಕೆಟ್ ಪಡೆಯಿದು.....

ಅಪಾರ ಕೀರ್ತಿ ಗಳಿಸಿ ಮೆರೆವ ಕ್ರಿಕೆಟ್ ಪಡೆಯಿದು.....

ಬರಹ

ದೊಡ್ಡ ಹೀರೊಗಳಂತೆ ಹಾಲ್ಗಡಲ ಗೆದ್ದಂತೆ ಆಗಸದೆ ಮೆರೆಯುತಿತ್ತು ತಂಡ...
ಜಗ ಬೆರಗಾಗುವಂತೆ ಪಸರಿಸಿತು ಸಡಗರ... ಕಾಂಗರೂಗಳಿಗೆ ಸರಣಿ ಸೋತು ಆ ನಲಿವಾಯ್ತು ದೂರ...

ಅಪಾರ ಕೀರ್ತಿ ಗಳಿಸಿ ಮೆರೆವ ಕ್ರಿಕೆಟ್ ಪಡೆಯಿದು
ಅಪರೂಪಕೊಮ್ಮೆ ಹೇಗೊ ಏನೊ ಗೆಲುವು ಪಡೆವುದು
ಅಪಾರ ಕೀರ್ತಿಯೇ.......

ಅಂದು, ಬಡಿದು ಸುತ್ತಮುತ್ತಲಿದ್ದ ದೈತ್ಯ ಶೂರರ..
ಕಪಿಲ್ ಪಡೆ ಗೆದ್ದು ಬಂದ್ರು ವಿಶ್ವಕಪ್ ಎಂಬತ್ಮೂರ..
ಇಂದು, ಕಳಪೆ ಆಟ ಆಡಿ ಮುಖಗಳೆಲ್ಲ ಬಾಡಿ..
ದಿಕ್ಕು ದಿಕ್ಕಾಪಾಲಾಗಿ ಸೇರುವರು ಗೂಡನು ನೋಡಿ..

ದಾಖಲೆಗಳ ವೀರ... ಸಚಿನ್ ತೆಂಡೂಲ್ಕರ...
ಪ್ರಮುಖ ಪಂದ್ಯದಲ್ಲಿ ಎಂದೂ ಆಡಲಾರ...

ಇನ್ನು ನಮ್ಮ ಗಂಗೂಲಿ... ಹಿಂದಿನ ಸಾಧನೆಗಳ ಗುಂಗಲಿ..
ಆಚೆ ಹೋಗಿ ಮತ್ತೆ ಬಂದು ಹೇಗೊ ಸೇರಿಕೊಂಡ ಗ್ಯಾಂಗಲಿ..

ದ್ರಾವಿಡ್ ಡಿಫೆನ್ಸೂ.. ಕುಂಬ್ಲೆಯ ಲೆಗ್ ಬ್ರೇಕ್ಸೂ..
ಇದ್ರೂ ಕೂಡ ಇಲ್ಲ ವಿಶ್ವಕಪ್ ಗೆಲ್ಲೋ ಚಾನ್ಸು..

ಲಕ್ಕಲಿ ಭಕ್ತಿ ಇಟ್ಟು... ಸ್ವಲ್ಪ ಕಷ್ಟ ಪಟ್ಟು..
ದೋನಿ ಪಡೆ ಪಡೆದು ಬಂದ್ರು ಸಣ್ಣ ವಿಶ್ವಕಪ್ಪು..

ಅಪಾರ ಕೀರ್ತಿ ಗಳಿಸಿ ಮೆರೆವ ಕ್ರಿಕೆಟ್ ಪಡೆಯಿದು
ಅಪರೂಪಕೊಮ್ಮೆ ಹೇಗೊ ಏನೊ ಗೆಲುವು ಪಡೆವುದು
ಅಪಾರ ಕೀರ್ತಿಯೇ.......

ಲೆಫ್ಟ್ ಹ್ಯಾಂಡ್ ಯುವಿ ಸ್ಟೈಲು.. ಶ್ರೀಶಾಂತ ನ ರಕ್ಕಸ ಸ್ಮೈಲು..
ಇದ್ದಾರೇನು ನಿಲ್ಲುತಿಲ್ಲ ಸೋಲಿನ ರೈಲು...

ಏನಾಯ್ತು ಇರ್ಫಾನ್ ಇನ್ ಸ್ವಿಂಗರ್ .. ಎಲ್ಲೋಯ್ತೊ ಜಹೀರ್ ನ ಆ ಯಾರ್ಕರ್..
ಮುದುಕ ಮುನಾಫ.. ಮರೆಯಾದ ಕೈಯಿಫ.. ಅಗರ್ಕರ್ ನೀವ್ ಆಡಿದ್ದು ಸಾಕಪ್ಪ..

ಆರ್.ಪಿ ಸಿಂಗ್ ನ ವೈಡ್ಸು.. ದಿನೇಶ್ ಕಾರ್ತಿಕ್ ನ ಪೆರೇಡ್ ರೈಡ್ಸು..
ಈ ಸಿಡಿಯದ ಸೆಹ್ವಾಗ್.. ಚೆಂಡು ತಿರುಗಿಸದ ಬಜ್ಜಿ...
ಇವರೆಲ್ಲ ಬದಲಾಗೊವರೆಗೆ ಇದೇ ರಾಗ ಇದೇ ತಾಳ...

ಲಕ್ಕಲಿ ಭಕ್ತಿ ಇಟ್ಟು... ಸ್ವಲ್ಪ ಕಷ್ಟ ಪಟ್ಟು..
ದೋನಿ ಪಡೆ ಕೊನೆಗೂ ಪಡೆದ್ರು ಸಣ್ಣ ವಿಶ್ವಕಪ್ಪು..

ಅಪಾರ ಕೀರ್ತಿ ಗಳಿಸಿ ಮೆರೆವ ಕ್ರಿಕೆಟ್ ಪಡೆಯಿದು
ಅಪರೂಪಕೊಮ್ಮೆ ಹೇಗೊ ಏನೊ ಗೆಲುವು ಪಡೆವುದು
ಅಪಾರ ಕೀರ್ತಿಯೇ.......

(ರವಿಕುಮಾರ ವೈ. ಎಮ್)