ಅರ್ಥವಿಲ್ಲದ್ದು..
ಒಂದು ಅರ್ಥವಿಲ್ಲದ ನಗು,
ಇಷ್ಟೆಲ್ಲಾ.. ಅನರ್ಥಗಳಿಗೆ
ಈಡಾಗಬಹುದೆಂದೆಣಿಸರಲಿಲ್ಲ, ಹೀಗೆ..
ಸಂಬಂಧಗಳ ಬುನಾದಿಯ,
ಅಲುಗಾಡಿಸುವಷ್ಟೂ..
ನನ್ನಾಪ್ತರ ಮನದಲ್ಲೂ,
ಶಂಕೆ.. ಹುಟ್ಟಿಸುವಷ್ಟೂ..
ನಂಬಿದ್ದೆ ನಾ..,
ನಗುವುದೊಂದು ದೈವದತ್ತ ಕೊಡುಗೆ,
ಇಂದೇಕೆ..ಹೀಗೆ ಕಾಡುತ್ತಿದೆ,
ಉರುಳಾಗಿ, ನನಗೆ ??
ಮನ್ನಿಸಿ ಎನ್ನ,
ಅರ್ಥ ಹುಡುಕುತ್ತಾ ಕೂರಲಾರೆ..
ನಾ.. ಪ್ರತಿಬಾರಿ,
ನಗುವ ಮುನ್ನ..
Rating