ನನ್ನ ಕೆಲವು ಹಳೆಯ ಚುಟುಕುಗಳು...
ವಿರಹ
ಮರೆತರೂ ಮರೆಯುವೆ ನಿನ್ನ,
ಮರೆಯಲಿ ಹ್ಯಾಂಗೆ ? ಆ ನಿನ್ನ ಕಂಗಳನ್ನ,
ಚೆಂದುಟಿಗಳನ್ನ,
ಪ್ರೀತಿ ತುಂಬಿದ ಆ ನೋಟವನ್ನ,
ವಿರಸ ತುಂಬಿದ ಎದೆಗೆ,
ಸರಸ ತಂದ, ಆ ನಿನ್ನ ಮಾತುಗಳನ್ನ..
ನೀರೆ
ಮನದ ಮರಳುಗಾಡಿನಲಿ,
ಬಂದೆ ನೀ ಓಯಸಿಸ್ನಂತೆ..
ಆದರೂ, ಒಮ್ಮೆ ದಣಿವಾರಿಸಿಕೊಂಡು,
ಬಹಳ ದಿನ ಕಳೆಯಲಾರೆ, ನಾ ಒಂಟೆಯಂತೆ..
ವಿಪರ್ಯಾಸ
ಬಾಹುಗಳಿಲ್ಲದೆಯೂ ಬಿಗಿದಪ್ಪಿವೆ,
ಬಳ್ಳಿಗಳೂ, ದೊಡ್ಡ ದೊಡ್ಡ ಮರಗಳನ್ನು..
ಬಾಹುಗಳಿದ್ದರೂ ಬಳಸಲಾಗದೆ,
ಬಳಲುತ್ತಿರುವೆ.., ನನ್ನರಸಿಯನ್ನು..
Rating