ಯಕ್ಷ ಪ್ರಶ್ನೆ ?
ಬರಹ
ಮನದ ಬಾಗಿಲ ಬಳಿ ಬಂದ
ಭಾವಗಳು, ಬಂದ ದಾರಿಗೆ
ಸುಂಕವಿಲ್ಲವೆಂಬಂತೆ ಮರಳಿದವೇಕೆ ?
ನಾಲಿಗೆಯ ತುದಿಗೆ.. ಬಂದ ಎಷ್ಟೋ
ಮಾತುಗಳು, ಮತ್ತೊಂದಿಷ್ಟು
ಧೈರ್ಯ ಮಾಡಲಿಲ್ಲವೇಕೆ ?
ಗರಿಗೆದರಿ, ಒಳಗೊಳಗೆ ಘರ್ಜಿಸಿದ
ಆಸೆಗಳು, ಕುಯ್ ಗುಡುತ್ತ, ಬಾಲ ಮುದುರಿ
ಮೂಲೆ ಸೇರಿದ್ದೇಕೆ ?
ನಾನೆಂಬ ಶತೃವೇ ?
ನನ್ನದೇ ಎಂಬ ಹುಚ್ಚು ಭರವಸೆಯೇ ?
ನನ್ನದಾಗುವುದಿಲ್ಲವೆಂಬ ವಿರಕ್ತಿಯೇ ?
ಪ್ರಶ್ನೆಗಳು, ಪ್ರಶ್ನಿಸಿದಷ್ಟೂ
ಉತ್ತರಿಸಲಾರದಷ್ಟು…. ಜಟಿಲವಾಗುತ್ತಿವೆಯೇಕೆ ??