ಒಂದು ಒಳ್ಳೇ ಸಿನಿಮಾ ಕತೆ ಕೇಳಿ- ಸತ್ಯಕಾಮ -೧

ಒಂದು ಒಳ್ಳೇ ಸಿನಿಮಾ ಕತೆ ಕೇಳಿ- ಸತ್ಯಕಾಮ -೧

ಮೊದಲು ಸತ್ಯಕಾಮ ಜಾಬಾಲಿ ಎಂಬ ಋಷಿ ಕತೆ ನೆನಪಿಸಿಕೊಳ್ಳಿ .
ಜಾಬಾಲಾ ಎಂಬ ಹೆಂಗಸು ; ಅವಳ ಮಗ ಜಾಬಾಲಿ . ಚಿಕ್ಕವನಿದ್ದಾಗ ವಿದ್ಯಾಭ್ಯಾಸಕ್ಕೆಂದು ಋಷಿಯೊಬ್ಬನ ಬಳಿಗೆ ಹೋದಾಗ ಅವನ ಹೆಸರು , ತಂದೆಯ ಹೆಸರು ಇತ್ಯಾದಿ ಕೇಳುತ್ತಾರೆ . ತಂದೆಯ ಹೆಸರು ಅವನಿಗೆ ಗೊತ್ತಿಲ್ಲ ; ವಾಪಸ್ ಬಂದು ತಾಯನ್ನು ಕೇಳಿದರೆ , ’ನಂಗೂ ಗೊತ್ತಿಲ್ಲ’ ಅನ್ನುತ್ತಾಳೆ . ಜಾಬಾಲಿ ಮತ್ತೆ ಋಷಿಯ ಹತ್ತಿರ ಹೋಗಿ ಈ ವಿಷಯವನ್ನು ಯಾವುದೇ ಅಳುಕಿಲ್ಲದೆ ಹೇಳುತ್ತಾನೆ. ಅಲ್ಲಿನ ಇತರ ಮಕ್ಕಳು ನಗುವರು . ಆಗ ಋಷಿ ಹೇಳೋದು - ಸತ್ಯ ಹೇಳೋದು ಎಲ್ರಿಗೂ ಸುಲಭ ಅಲ್ಲ ; ಅದರಲ್ಲೂ ಇಂಥ ವಿಷಯ ; ಆ ಧೈರ್ಯ , ಆ ಸಂಸ್ಕಾರ ನಿನ್ನಲ್ಲಿದೆ . ನಿನ್ನನ್ನು ಶಿಷ್ಯನಾಗಿ ಒಪ್ಪಿಕೋತೇನೆ’ ಅಂತಾನೆ . ಆಗ ಆ ಜಾಬಾಲಿಯ ಹೆಸರು ಸತ್ಯಕಾಮ ಜಾಬಾಲಿ ಎಂದಾಗುತ್ತದೆ .

ಈಗ ಸಿನೇಮಾ ಕತೆಗೆ ಬರೋಣ ...

ಒಬ್ಬ ಇಂಜಿನಿಯರ್ - ಧರ್ಮೇಂದ್ರ ಈ ಪಾತ್ರದಲ್ಲಿ - ಮೇಲುಜಾತಿಯಲ್ಲಿ ಹುಟ್ಟಿದವನು . ಇವನ ಹೆಸರು ಸತ್ಯವ್ರತ . ಪ್ರಾಮಾಣಿಕನು . ಸತ್ಯ ಮತ್ತು ಪ್ರಾಮಾಣಿಕತೆಗಾಗಿ ಯಾವುದಕ್ಕೂ ಹಿಂಜರಿಯನು . ವ್ಯವಸ್ಥೆಯೊಂದಿಗೆ ರಾಜಿಗೆ ಸಿದ್ಧನಿಲ್ಲ ; ಹೀಗಾಗಿ ಕೆಲಸಗಳನ್ನು ಬದಲಾಯಿಸುತ್ತಾ ಇರಬೇಕಾಗುತ್ತದೆ .
ಇವನ ರೀತಿಗೆ ಯಾರೋ " Honesty is the best policy " ಎಂದು ಮೆಚ್ಚಿಗೆ ಸೂಚಿಸಿದರೆ " ಅದು ಹಾಗಲ್ಲ ; It is 'The' policy ; ಒಳ್ಳೇದೋ ಕೆಟ್ಟದ್ದೋ ; ಅದೊಂದೇ ನೀತಿ " ಎನ್ನುವನು .

ಈಗ ಸದ್ಯ ಒಂದು ಸಂಸ್ಥಾನದಲ್ಲಿ ಕೆಲ್ಸ ಮಾಡುತ್ತಿದ್ದಾನೆ ...
ಮುಂದಿನದನ್ನು ನಾಳೆ ಹೇಳುವೆ.

ಇದು ನನಗೆ ಬಹಳ ಸೇರಿದ ಕತೆ
ಮುಂದಿನ ಭಾಗಕ್ಕೆ ಇಲ್ಲಿನೋಡಿ http://www.sampada.net/blog/shreekantmishrikoti/21/11/2007/6354

Rating
No votes yet