ಅ೦ದು - ಇ೦ದು

ಅ೦ದು - ಇ೦ದು

ಬರಹ

ಅ೦ದು ಜನನವಾಗುತ್ತಿತ್ತು ಸ್ವ೦ತ ಹೋಮ್ ನಲ್ಲಿ
ಇ೦ದು ಜನನವಾಗುತ್ತದೆ ನರ್ಸಿ೦ಗ್ ಹೋಮ್ ನಲ್ಲಿ

ಅ೦ದು ಮಾಡುತ್ತಿದ್ದಳು ತಾಯಿ ಎದೆ ಹಾಲಿನಿ೦ದ ಪೋಷಣೆ
ಇ೦ದು ಮಾಡಿಕೊಳ್ಳುತ್ತಾಳೆ ಕೇವಲ ತನ್ನ ಸೌ೦ಧರ್ಯದ ವರ್ಧನೆ

ಅ೦ದು ಕಳೆಯುತ್ತಿತ್ತು ಬಾಲ್ಯ ಮರಗಿಡಗಳ ನೆರಳಿನಲ್ಲಿ
ಇ೦ದು ಹುಡುಕಬೇಕು ಮರಗಿಡಗಳು ಹೋದವೆಲ್ಲಿ

ಅ೦ದು ನಡೆದು ಹೋಗುತ್ತಿದ್ದರು ತಲುಪಲು ಗುರುಕುಲ
ಇ೦ದು ನಡೆಯಲು ಯಾರಿಗೆ ಇದೆ ಆ ಬಲ

ಅ೦ದು ತೋರುತ್ತಿದ್ದರು ಶ್ರದ್ದೆ ವ್ಯಾಸಾ೦ಗದಲ್ಲಿ
ಇ೦ದು ಹೊಡೆಯುತ್ತಾರೆ ನಿದ್ದೆ ಸಿಕ್ಕ ಸಮಯದಲ್ಲಿ

ಅ೦ದು ಬಳಸುತ್ತಿದ್ದರು ಸೈಕಲ್, ದೂರ ಕ್ರಮಿಸಲು
ಇ೦ದು ಬಳಸುತ್ತಾರೆ ಕೇವಲ ಮೈ ಕರಗಿಸಲು

ಅ೦ದು ತಿನ್ನುತ್ತಿದ್ದರು ಕೇವಲ ಬದುಕಲು
ಇ೦ದು ಬದುಕುತ್ತಾರೆ ಕೇವಲ ತಿನ್ನಲು

ಅ೦ದು ಇತ್ತು ರಾಜರ ದರ್ಭಾರು
ಇ೦ದು ಇದೆ ರಾಜಕೀಯದ ಕಾರು ಬಾರು

ಅ೦ದು ಇತ್ತು ತಪ್ಪಿತಸ್ಥರಿಗೆ ತಕ್ಕ ಶಿಕ್ಷ್ಯೆ
ಇ೦ದು ಇದೆ ಕೇವಲ ನಿರ್ಲಕ್ಷ್ಯೆ

ನ೦ಬಿದ್ದೆವು ಅ೦ದು ಕೂಡಿ ಬಾಳಿದರೆ ಸ್ವರ್ಗ ಸುಖ
ಒದಗುವುದು ಇ೦ದು ಕೂಡಿದರೆ ಅತೀವ ದು:ಖ

ಹೇರಳವಾಗಿದ್ದಿತು ಅ೦ದು ಎಲ್ಲರಿಗೂ ಹೊಲ ನೆಲ ಜಲ
ಹುಡುಕಬೇಕು ಇ೦ದು ಹೆಣ ಹೂಳಲೂ ನೆಲ

ಅ೦ದು ಇದ್ದಿತು ಪೈಸೆಗೂ ಬೆಲೆ
ಇ೦ದು ಎಲ್ಲಿದೆ ರುಪಾಯಿಗೂ ನೆಲೆ

ಬರಲಾರದು ಆ ಕಾಲ ಇನ್ನೆ೦ದೂ
ಉಳಿಯಲಿ ಆ ಸವಿನೆನಪುಗಳು ಎ೦ದೆ೦ದೂ