ಪ್ರೀತಿ

ಪ್ರೀತಿ

ಬರಹ

ಹುಡುಕಬೇಡಿ ಪ್ರೀತಿಯ ಮೂಲ
ನಾಶವಾದೀತು ಮಾನವ ಕುಲ

ಪ್ರೀತಿಯಲ್ಲು೦ಟು ಹಲವು ಬಗೆ
ತಪ್ಪಿ ಬಳಸಿದರೆ ತೆರಬೇಕಾದೀತು ತೆರಿಗೆ

ಪ್ರೀತಿಗೂ ಇದೆ ಕೆಲವು ಕಟ್ಟುಪಾಡು
ಮರೆತರೆ ಜೀವನ ನಾಯಿಪಾಡು

ಪ್ರೀತಿಯ ಕಣ್ಣುಗಳಿಗೆ ಮುಖ್ಯವಲ್ಲ ಅ೦ದಚೆ೦ದ
ಬೆರೆಯಬೇಕು ಹೃದಯಗಳಲ್ಲಿ ಒಳ್ಳೆಯ ಅನುಬ೦ದ

ಪ್ರೀತಿಯು ಬಯಸುತ್ತದೆ ಇನ್ನೊಬ್ಬರ ಮನಸ್ಸು
ಹತ್ತಿರವಾಗದ್ದಿದ್ದರೆ ನುಚ್ಚುನೂರಾಗುತ್ತದೆ ಕಟ್ಟಿದ ಕನಸ್ಸು

ಪ್ರೀತಿ ಹ೦ಚಿಕೊಳ್ಳಲು ಅಗತ್ಯ ಬಿಚ್ಚು ಮನಸ್ಸು
ನಡುವೆ ಬರುವುದಿಲ್ಲ ಹಿರಿಯ-ಕಿರಿಯ ವಯಸ್ಸು

ಹುಟ್ಟು ತಾಯಿತ೦ದೆಯ ಪ್ರೀತಿಯಿ೦ದ
ಬಾಲ್ಯ ಬ೦ದುಮಿತ್ರರ ಮಮತೆಯಿ೦ದ
ಯೌವನ ಪ್ರಿಯಕರನ(ಪ್ರಿಯತಮೆಯ) ಪೇಮದಿ೦ದ
ಮುಪ್ಪು ನೆರೆಹೊರೆ ಜನರ ಕನಿಕರದಿ೦ದ
ಮರುಹುಟ್ಟು ನಮ್ಮ ನಮ್ಮ ಕರ್ಮಫಲಗಳಿ೦ದ

ಉಳಿಯಲಿ ನಮ್ಮಲ್ಲಿ ಸಹಜ ಪ್ರೀತಿ
ಬದಲಾಗದಿರಲಿ ನಮ್ಮ ಹಳೇ ರೀತಿ ನೀತಿ.