ಸಫಾರಿಯಲ್ಲಿ ಕನ್ನಡ
ಕೆಲವು ತಿಂಗಳ ಹಿಂದೆ ಆಪಲ್ ಕಂಪೆನಿಯ ದೊರೆ ಸ್ಟೀವ್ ಜಾಬ್ಸ್ ಮೈಕ್ರೋಸಾಫ್ಟಿನ ವಿಂಡೋಸ್ ಆಪರೇಟಿಂಗ್ ಸಿಸ್ಟಮಿಗೆ ತಮ್ಮ "ಸಫಾರಿ" ಬ್ರೌಸರಿನ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದೇವೆ ಎಂದಾಗ ಹಲವರು ಹುಬ್ಬೇರಿಸಿದ್ದರು. ಮೈಕ್ರೊಸಾಫ್ಟಿನ ವಿಂಡೋಸ್ ಬಳಸುವವರಲ್ಲೂ ಹಲವರು ಐ-ಪಾಡ್ ಮತ್ತು ಐ-ಟ್ಯೂನ್ಸ್ ಇಷ್ಟಪಡುವವರು ಇರುವುದರಿಂದ 'ಸಫಾರಿ'ಯೂ ವಿಂಡೋಸ್ ಬಳಸುವವರಲ್ಲಿ ತನ್ನ ನೆಲೆ ಕಂಡುಕೊಳ್ಳಬಹುದು ಎಂಬ ಉದ್ದೇಶದಿಂದ ಅದನ್ನು ಹೊರತಂದದ್ದಂತೆ. ಮ್ಯಾಕ್ ಬಳಸುವವರೂ ಹೆಚ್ಚಾಗಿ ಬಳಸದ ಬ್ರೌಸರ್ರು ಇದು ಎಂದು ಕೇಳಿಬರುತ್ತದಾದರೂ "ಸಫಾರಿ" ಬಹಳ ಚೆಂದವಾದ, ಹೆಚ್ಚು ತಲೆನೋವಿಲ್ಲದ ಬ್ರೌಸರ್ರು.
ಕೆಲ ತಿಂಗಳ ಹಿಂದೆ ಇದರ ಮೊದಲ ಬೀಟ ಆವೃತ್ತಿ ಹೊರಬಂದಾಗ ನನ್ನ ಲ್ಯಾಪ್ಟಾಪಿನಲ್ಲಿ ಪ್ರಯೋಗಾರ್ಥ ಹಾಕಿಕೊಂಡು ನೋಡಿದ್ದೆ. ಆಗ ಕನ್ನಡ ರೆಂಡರಿಂಗ್ ಮುರಿದು ಹೋಗಿತ್ತು. ಹೀಗಾಗಿದೆ ಎಂದು ಒಂದು 'ಬಗ್' ಫೈಲ್ ಮಾಡಿದ್ದೆ. ಈಗ ಸಫಾರಿಯ ಮೂರನೇ ಬೀಟ ಆವೃತ್ತಿ ಹೊರಬಂದಿದ್ದು ಅದರಲ್ಲಿ ಕನ್ನಡ (ಇಂಡಿಕ್) ರೆಂಡರಿಂಗ್ ಸರಿಪಡಿಸಿದ್ದಾರೆ! ಸ್ಕ್ರೀನ್ ಶಾಟ್ ಕೆಳಗಿದೆ ನೋಡಿ:
ಈಗಂತೂ ಅಪರೂಪಕ್ಕೆ ವಿಂಡೋಸ್ ನಲ್ಲಿ ಬೂಟ್ ಮಾಡಿದರೆ ಅದರಲ್ಲಿ ಸಫಾರಿ ಬ್ರೌಸರನ್ನೇ ಬಳಸೋದು. ಲಿನಕ್ಸಿನ ಬ್ರೌಸರುಗಳಂತೆ ಈ ಬ್ರೌಸರಿನಲ್ಲಿ ಅಕ್ಷರಗಳು ದುಂಡಗೆ ಕಾಣುತ್ತದಲ್ಲದೆ ಪುಟಗಳೂ ಬೇಗ ಲೋಡ್ ಆಗುತ್ತವೆ.
ಸಫಾರಿ ಬ್ರೌಸರನ್ನು [:http://www.apple.com/safari/download/|ಇಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು].