ಬದುಕು - ಈರುಳ್ಳಿ / balance sheet
ಬರಹ
ಈ ಕವನವನ್ನು ಕನ್ನಡಧ್ವನಿಯಲ್ಲಿ ಈಗಾಗಲೇ ಪ್ರಕಟಿಸಿರುವೆ. ಇಲ್ಲೂ ನಿಮ್ಮ ಮುಂದೆ ಇರಿಸುತ್ತಿರುವೆ. ತಿದ್ದುವಂತಿದ್ದರೆ ತಿದ್ದೋಣ
ಬದುಕು ಈರುಳ್ಳಿಯಂತೆ (ನೀರುಳ್ಳಿ ಅಥವಾ ಉಳ್ಳಾಗಡ್ಡಿ)
ಬಲು ಘಾಟು, ಕತ್ತರಿಸಲು ಕಣ್ಣಿನಲ್ಲಿ ನೀರು
ಸುಲಿದಷ್ಟೂ ಪದರಗಳು
ಗಟ್ಟಿಯಾದ ಸಾರವಿಲ್ಲವೇ ಇಲ್ಲ
ತಿರುಳೇ ಇಲ್ಲದ ಸುರುಳಿ
ಸವಿಯಲು ಬಲು ಆನಂದ
ಜೊತೆಗೆ ಬಾಯಿ ವಾಸನೆ
(ತಮಿಳಿನಲ್ಲಿ ಕೆಲವರ ತತ್ವಗಳನ್ನು ವೇಂಗಾಯ್ ಎಂದು ಆಡಿಕೊಳ್ಳುವುದಿದೆ)
ಬದುಕೂ ಬಲು ಘಾಟು,
ಹಾದಿಯಲ್ಲಿ ಕೆಲವೊಮ್ಮೆ ಕಣ್ಣಿನಲ್ಲಿ ನೀರು
ದಿನಗಳು ಸವೆಯುತ್ತಲೇ ಇರುವುದು
ಆದರೂ ಸಾರ್ಥಕ್ಯದ ದಿನಗಳು ಕಾಣಸಿಗದು
ಬದುಕೂ ಸವಿಯಲು ಬಲು ಆನಂದ
ಆ ಸವಿಯ ಹಿಂದೆಯೇ ದುರ್ವಾಸನೆ (ಕರ್ಮಫಲ ಎನ್ನೋಣವೇ)
ನನ್ನ ಬದುಕು ಒಂದು ಬ್ಯಾಲೆನ್ಸ್ ಶೀಟು
ಬರುವುದೆಷ್ಟೋ ಕಾಣುವಂತಹ ಡೆಬಿಟ್ಟುಗಳು
ಅಂತೆಯೇ ಬರುತಿಹದು ಗುಡ್ ವಿಲ್ ನಂತಹ ಕ್ರೆಡಿಟ್ಟುಗಳು
ಬದುಕಿನ ಕೊನೆಗೆ ತನಗೆ ತಾನೇ ಬ್ಯಾಲೆನ್ಸ್ ಆಗುವ ಶೀಟು (ಪತ್ರ)
ಇದರ ಮಧ್ಯೆ ಕೊಟ್ಟು ತೆಗೆದುಕೊಳ್ಳುವ
ಎಡ ಬಲದಲ್ಲಿ ಬರುವಂತಹ ಕಾಂಟ್ರಾ ಎಂಟ್ರಿಗಳು
ಈ ಶೀಟು ತಯಾರಾಗುವುದು ಒಮ್ಮೆ ಮಾತ್ರ
ಜೀವನದ ಕೊನೆಯಲ್ಲಿ ಶಿಲ್ಕು ಮಾತ್ರ ಶೂನ್ಯ