ಊಟಕೆ ಬಾರೋ ತುಂಟಣ್ಣ...

ಊಟಕೆ ಬಾರೋ ತುಂಟಣ್ಣ...

ಊಟಕೆ ಬಾರೋ ತುಂಟಣ್ಣ...
('ಬಾರೋ ಕೃಷ್ಣಯ್ಯ' ಹಾಡಿಂದ ಪ್ರೇರಿತ...)

ಬಾರೋ ತುಂಟಣ್ಣ...ಊಟಕೆ ಬಾರಣ್ಣ...
ತುಂಟಣ್ಣ ನೀ...
ಬಾರೋ ತುಂಟಣ್ಣ...ಊಟವ ಮಾಡಣ್ಣ...

ಬಾರೋ ಮಡಿಲಿಗೆ ಬಾರೋ...ನಿನ್ನ ಬಾಯಿ ತೋರೋ...ತುತ್ತನು ನೀಡುವೇ...
ಬಾರೋ ಮಡಿಲಿಗೆ ಬಾರೋ...ನಿನ್ನ ಬಾಯಿ ತೋರೋ...ತುತ್ತನು ನೀಡುವೇ...

ಸಂಡಿಗೆ ಪಾಯಸ, ಸಿಹಿ ಮೊಸರನ್ನ...
ಎಲ್ಲವ ನಿನಗಾಗಿ ಮಾಡಿಹೆನೋ...
ಪುಟ್ಟ ಹೆಜ್ಜೆಯನಿಕ್ಕುತ ಬಾರಣ್ಣ...ಬಾರೊ ತುಂಟಣ್ಣ...

ನೆಚ್ಚಿನ ಕರಿಗಡಬು, ಅವಲಕ್ಕಿ, ಪರಿ ಉಂಡೆ
ಬಗೆ ಬಗೆ ತಿಂಡಿಯ ಉಣಿಸುವೆನೋ...
ತುಂಟ ಹೆಜ್ಜೆಯನಿಕ್ಕುತ ಬಾರಣ್ಣ...ಬಾರೊ ತುಂಟಣ್ಣ...

ಬೆಳದಿಂಗಳ ಅಂಗಳದಿ ಚಂದ್ರನ ತೋರುತ್ತ...
ಮೆಲ್ಲನೆ ನಾ ನಿನಗೆ ತಿನಿಸುವೆನೋ...
ನಾಟಕವು ಬೇಡಣ್ಣ ಬಾರಣ್ಣ...ಬಾರೊ ತುಂಟಣ್ಣ...

ನಿನಗೇನು ಬೇಕೆಂದು ನನಗಿಲ್ಲಿ ಹೇಳು ಬಾರೋ
ನಾಟಕವು ಬೇಡಣ್ಣ...ಬಾರಣ್ಣ...ಬಾರೊ ತುಂಟಣ್ಣ...

ತುತ್ತಾ ನೀಡುತ್ತಾ ಜಗವ ಮರೆಯುವೆನೋ
ನಾಟಕವು ಬೇಡಣ್ಣ...ಬಾರಣ್ಣ...ಬಾರೊ ತುಂಟಣ್ಣ...
ಬಾರೋ ನನ್ನ ಬಳಿ ಬಾರೊ...ಬಾರೊ ತುಂಟಣ್ಣ...

-ಶ್ರೀನಿವಾಸ್
(ಸೆಪ್ಟೆಂಬರ್ ೮-೧೦, ೨೦೦೭)

Rating
No votes yet