ವ್ಯಾಯಾಮ ಮಾಡುವಾಗಲೂ ಸಮಯ ವ್ಯಯವಾಗದು!

ವ್ಯಾಯಾಮ ಮಾಡುವಾಗಲೂ ಸಮಯ ವ್ಯಯವಾಗದು!

ಬರಹ

(ಇ-ಲೋಕ-51)(05/12/2007) 

Udayavani

 

ಕಚೇರಿಯಲ್ಲಿ ಕೆಲಸದ ವೇಳೆ ಉದ್ಯೋಗಿಗಳಿಗೆ ವ್ಯಾಯಮ ಮಾಡಲು ಅವಕಾಶ ನೀಡಬೇಕೇ?ಮಯೋ ಕ್ಲಿನಿಕ್ ಸಂಶೋಧಕರು ಕಂಡು ಹಿಡಿದಿರುವ ಸಾಧನ ಕಚೇರಿಯಲ್ಲಿದ್ದರೆ ಇದು ಸಾಧ್ಯ.ಟ್ರೆಡ್ ಮಿಲ್ ಯಂತ್ರದಂತಹ ಈ ಸಾಧನದಲ್ಲಿ ಕಂಪ್ಯೂಟರ್ ಬಳಸುತ್ತಾ ನಡಿಗೆ ಸಾಧ್ಯ.ದೂರವಾಣಿ ಕರೆಅಗಳನ್ನು ಮಾಡಬಹುದು.ಸಭೆಯ ಚರ್ಚೆಗಳಲ್ಲಿ ಭಾಗವಹಿಸಬಹುದು.
 

ಗೂಗಲ್‍ನಿಂದ ಸದ್ಯವೇ ಗೂಗಲ್ ಡ್ರೈವ್ ಸೇವೆ
 ನಿಮ್ಮ ಕಂಪ್ಯೂಟರ್‌ನಲ್ಲಿರುವ ಕಡತಗಳನ್ನು ಅಂತರ್ಜಾಲದಲ್ಲಿ ಸಂಗ್ರಹಿಸಿಡುವ ಅವಕಾಶವಿದ್ದರೆ,ನೀವೆಲ್ಲಿದರೂ ಅಂತರ್ಜಾಲ ಸಂಪರ್ಕ ಹೊಂದಿದ ಕಂಪ್ಯೂಟರ್‌ನಿಂದ ಅವನ್ನು ಪಡೆಯಲು ಸಾಧ್ಯ.ಇಂತಹ ಸೇವೆ ಈಗಾಗಲೇ ಲಭ್ಯವಿದೆ ಕೂಡಾ.ಗೂಗಲ್ ಸದ್ಯವೇ ಇಂತಹ ಸೇವೆಯನ್ನು ನೀಡಲಿದೆಯಂತೆ.ಉಚಿತವಾಗಿ ಲಭ್ಯವಾಗಲಿರುವ ಸೇವೆ ಸೀಮಿತ ಸಾಮರ್ಥ್ಯದ ಅವಕಾಶವನ್ನಷ್ಟೇ ಒದಗಿಸಿದರೂ,ಹಣ ತೆತ್ತರೆ ಹೆಚ್ಚು ಸಾಮರ್ಥ್ಯದ ಅವಕಾಶ ಸಿಗಲಿದೆ.
 

ಕಕ್ಕಸು ಹುಡುಕಿಕೊಡಲೂ ಸೆಲ್ ಫೋನ್
 ಲಂಡನ್‌ನ ವೆಸ್ಟ್ ಮಿನಿಸ್ಟರ್ ಕೌನ್ಸಿಲ್ ಆಕ್ಸ್‍ಫರ್ಡ್ ರಸ್ತೆ,ಪಾರ್ಲಿಮೆಂಟ್ ರಸ್ತೆ ಮತ್ತು ಬಿಗ್‍ಬೆನ್ ಗಡಿಯಾರ ಪ್ರದೇಶವನ್ನು ಒಳಗೊಂಡಿದೆ.ಇಲ್ಲಿ ಪ್ರವಾಸಿಗಳು ಅಧಿಕ ಸಂಖ್ಯೆಯಲ್ಲಿ ತಿರುಗಾಡುವುದು ಸಾಮಾನ್ಯ.ಅವರಿಗೆ ಸೆಲ್‍ಪೋನ್ ಕಂಪೆನಿಯೊಂದು ವಿಶಿಷ್ಟ ಸೇವೆ ಒದಗಿಸಲಾರಂಭಿಸಿದೆ.ಟಾಯಿಲೆಟ್ ಎಂಬ ಕಿರುಸಂದೇಶವನ್ನು ನಿಗದಿತ ನಂಬರಿಗೆ ಕಳುಹಿಸಿದರೆ,ಆ ಸ್ಥಾನಕ್ಕೆ ಸಮೀಪವಿರುವ ಕಕ್ಕಸಿನ ವಿಳಾಸವನ್ನು ಹೊತ್ತ ಮರು ಸಂದೇಶ ಬರುತ್ತದೆ.ಕಕ್ಕಸಿಗಾಗಿ ಸಿಕ್ಕವರೊಡನೆ ವಿಚಾರಿಸುವ ಕಷ್ಟವನ್ನು ತಪ್ಪಿಸುವ ಈ ಸೇವೆಗೆ ಕೇವಲ ಐವತ್ತು ಸೆಂಟುಗಳ ದರ ನೀಡಬೇಕಾಗುತ್ತದೆ.ಸೆಲ್‍ಫೋನಿನ ಸಂಕೇತದ ಬಲವನ್ನಳೆದು ಅದು ಸೆಲ್‍ಫೋನಿನ ಯಾವ ಗೋಪುರದಿಂದ ಎಷ್ಟು ದೂರದಲ್ಲಿರಬಹುದು ಎಂಬ ಲೆಕ್ಕಾಚಾರ,ಆ ಪರಿಸರದ ಕಕ್ಕಸಿನ ವಿಳಾಸ ತಿಳಿಸುವಲ್ಲಿ ನೆರವಾಗುತ್ತದೆ.ಸದ್ಯ ಈ ಸೇವೆ ಸುಮಾರು ನಲುವತ್ತು ಕಕ್ಕಸುಗಳಿಗೆ ಸೀಮಿತವಾಗಿದೆ.ಪ್ರವಾಸಿಗಳಿಗೆ ಈ ಸೇವೆ ಒದಗಿಸುವ ಮೂಲಕ ಅವರು ಎಲ್ಲೆಂದರಲ್ಲಿ ಪ್ರಕೃತಿಯ ಕರೆಗೆ ಓಗೊಡುವುದನ್ನು ತಡೆದು,ನಗರವನ್ನು ಶುಚಿಯಾಗಿಡಲೂ ಸಾಧ್ಯವಾಗುತ್ತದೆ.ಬರವಣಿಗೆಯೂ ಸಾಧ್ಯ.ಈ ಸಾಧನ ಬಳಸುವಾಗ ಗಂಟೆಗೆ ನೂರೈವತ್ತು ಕ್ಯಾಲರಿ ದೇಹದಿಂದ ಖರ್ಚಾಗುತ್ತದೆ.ಇಂತಹ ವ್ಯಾಯಾಮ ಯಂತ್ರಗಳು ವಾಲ್‍ಮಾರ್ಟ್ ಕಂಪೆನಿಯ ಕಚೇರಿಗಳಲ್ಲಿ ಬಳಕೆಯಾಗುತ್ತಿವೆ.ಅವನ್ನು ಉದ್ಯೋಗಿಗಳು ಖುಷಿಯಿಂದ ಬಳಸುತ್ತಾರೆ.ಕೆಲವು ಶಾಲೆಗಳಲ್ಲಿ ಡೆಸ್ಕುಗಳ ಬದಲಿಗೆ ಇವನ್ನು ಇಟ್ಟು ಮಕ್ಕಳು ವ್ಯಾಯಾಮ ಮಾಡುತ್ತಾ ಪಾಠ ಕೇಳುವ ಅವಕಾಶ ಒದಗಿಸಲಾಗಿದೆ.ಅಲ್ಲಿನ ಮಕ್ಕಳು ಚುರುಕಾಗಿ ಚಟುವಟಿಕೆಯಿಂದ ಇರುವುದು ವ್ಯಕ್ತವಾಗಿದೆ.
 

ಜಪಾನಿನಲ್ಲಿ ಸೈಬರ್ ವಿಶ್ವವಿದ್ಯಾಲಯ
 ತನ್ನ ತರಗತಿಗಳನ್ನು ಅಂತರ್ಜಾಲ ಮತ್ತು ಮೊಬೈಲ್ ಮೂಲಕ ಮಾತ್ರ ಒದಗಿಸುವ ವಿಶ್ವವಿದ್ಯಾಲಯ ಜಪಾನಿನಲ್ಲಿ ಇದೆ.ಇದೀಗ ಹೊಸದಾಗಿ ಸೇರಿಸಲಾಗಿರುವ ಪಾಠ ಪಿರಾಮಿಡ್‍ಗಳ ಬಗೆಗಿದೆ.ಇದರ ವಿಡಿಯೋ ಕ್ಲಿಪ್ಪಿಂಗಿನಲ್ಲಿ ಪಿರಾಮಿಡ್‍ಗಳ ಬಗೆಗಿನ ಪವರ್‌ಪಾಯಿಂಟ್ ಪ್ರದರ್ಶನ ತೆರೆಯ ಮೇಲೆ ಪ್ರದರ್ಶಿತವಾಗುತ್ತಾ,ಪ್ರಾಧ್ಯಾಪಕನ ವಿವರಣೆ ಹಿನ್ನೆಲೆಯಲ್ಲಿ ಕೇಳಿ ಬರುತ್ತದೆ.ಪಾಠಗಳು ಉಚಿತವಾಗಿ ಲಭ್ಯವಿದ್ದರೂ,ಮೊಬೈಲ್ ದರಗಳನ್ನು ತೆರುವುದು ಅನಿವಾರ್ಯ.ಸದ್ಯ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಸೈಬರ್ ವಿವಿಯಲ್ಲಿ ನೋಂದಾಯಿಸಿ ಕೊಂಡಿದ್ದಾರೆ.ವಿವಿ ಆರಂಭವಾಗಿ ಆರು ತಿಂಗಳುಗಳಷ್ಟೇ ಕಳೆದಿದೆ.
 

ಡಿಜಿಟಲ್ ಗ್ರಂಥಾಲಯದಲ್ಲಿ ಒಂದೂವರೆ ದಶಲಕ್ಷ ಪುಸ್ತಕಗಳು
 ರಾಜ್ ರೆಡ್ಡಿ ಎನ್ನುವ ಭಾರತೀಯ ಮೂಲದ ಪ್ರಾಧ್ಯಾಪಕರ ಆಸಕ್ತಿಯಿಂದ ಆರಂಭವಾದ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ,ಡಿಜಿಟಲ್ ಪ್ರತಿಯನ್ನು ಅಂತರ್ಜಾಲದಲ್ಲಿ ಲಭ್ಯವಾಗಿಸುವ ಮಹಾಯೋಜನೆಯಲ್ಲಿ ಇದೀಗ ಸುಮಾರು ಹದಿನೈದು ಲಕ್ಷ ಪುಸ್ತಕಗಳು ಲಭ್ಯ.ಕಾರ್ನೆಜಿ ಮೆಲ್ಲನ್ ವಿಶ್ವವಿದ್ಯಾಲಯವು ಈ ಯೋಜನೆಯನ್ನು ಸಾಕಾರಗೊಳಿಸಿದೆ.ಈಗಲೂ ದಿನಕ್ಕೆ ಸಾವಿರಾರು ಪುಸ್ತಕಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ.ಭಾರತ ಸರಕಾರವೂ ಹತ್ತು ಮಿಲಿಯನ್ ಡಾಲರು ನೆರವು ನೀಡಿದೆ.ಅರೇಬಿಕ್,ಚೈನೀ ಭಾಷೆ,ತೆಲುಗು ಭಾಷೆಗಳ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿವೆ.http://www.ulib.org/ ಈ ಅಂತರ್ಜಾಲ ವಿಳಾಸದಲ್ಲಿ ಪುಸ್ತಕಗಳು ಲಭ್ಯ.ಹೆಚ್ಚಿನ ಪುಸ್ತಕಗಳು ಹಕ್ಕುಸ್ವಾಮ್ಯಕ್ಕೊಳ ಪಡದಂತವೇ ಆಗಿವೆಯಾದ್ದರಿಂದ ಅವುಗಳ ಪ್ರಸರಣ ಸಮಸ್ಯೆಯೊಡ್ದದು.
 

ಯೋಚನೆಯನ್ನರಿಯುವ ವೀಲ್‍ಚೇರ್
 ಕುಳಿತವ ಬಯಸಿದಲ್ಲಿಗೆ ಕರೆದೊಯ್ಯುವ ಗಾಲಿಕುರ್ಚಿಯನ್ನು ಟೆಕ್ಸಸ್ ಇನ್‍ಸ್ಟ್ರುಮೆಂಟ್ ಅವರು ಏರ್ಪಡಿಸಿದ ಪ್ರದರ್ಶನವೊಂದರಲ್ಲಿ ಪ್ರದರ್ಶಿತವಾಯಿತು.ಆಂಬಿಯೆಂಟ್ ಕೋರ್ಪೋರೇಷನ್ ಎಂಬ ಕಂಪೆನಿ ಇದನ್ನು ತಯಾರಿಸಿದೆ.ಮೋಟಾರ್ ಚಾಲಿತ ಗಾಲಿಕುರ್ಚಿ,ಮೈಕ್ರೋಕಂಟ್ರೋಲರ್ ಹೊಂದಿದೆ.ಅದರಲ್ಲಿ ಕುಳಿತವ ಕುರ್ಚಿ ಸಾಗ ಬೇಕಾದ ದಿಕ್ಕನ್ನು ಯೋಚಿಸುತ್ತಾ,ಗಂಟಲಿನ ಧ್ವನಿ ಪೆಟ್ಟಿಗೆಯ ಸಣ್ಣ ಚಲನವಲನ ತೋರಿಸಿದರೆ,ಕುರ್ಚಿಗೆ ಆತನ ಮನಸ್ಸು ಅರಿವಾಗುತ್ತದೆ.
ಉಚಿತವಾಗಿ ಅಂತರ್ಜಾಲ ಜಾಲಾಡಿ!
 ಜನರಿಗೆ ಅಂತರ್ಜಾಲ ಜಾಲಾಡಲು ಪುಕ್ಕಟೆಯಾಗಿ ಅವಕಾಶ ನೀಡುವ ಕಿಯೋಸ್ಕ್‍ಗಳು ಮುಂದಿನ ವಾರ ಅಹದಾಬಾದಿನಲ್ಲಿ ಆರಂಭವಾಗಲಿವೆ.ಆನ್‍ಲೈನ್ ಮತ್ತು ಆಫ್‍ಲೈನ್ ಜಾಹೀರಾತು ಮೂಲಕ ಖರ್ಚುವೆಚ್ಚಗಳನ್ನು ಭರಿಸಿ,ಲಾಭ ಮಾಡುವುದು ಈ ವ್ಯವಹಾರದ ಮಾದರಿ.ನೆಥೊಟ್‌ಜೋನ್ ಎಂಬ ಅಹಮದಾಬಾದಿನ ಕಂಪೆನಿ,ಸ್ಯಾನ್‍ಪ್ರಾನ್ಸಿಸ್ಕೋದ ಅಹೆಂ ಮ್ಯಾನೇಜ್‍ಮೆಂಟ್ ಎಂಬ ಕಂಪೆನಿಯ ಸಹಯೋಗದಲ್ಲಿ ಈ ಸೌಲಭ್ಯ ಒದಗಿಸಲಿದೆ.ಸೌಲಭ್ಯ ಉಚಿತವಿದ್ದರೂ,ಎಲ್‍ಸಿಡಿ ಪರದೆ ಹೊಂದಿರುವ ಆಧುನಿಕ ಕಂಪ್ಯೂಟರುಗಳ ಶರವೇಗದ ಅಂತರ್ಜಾಲ ಜಾಲಾಟ ಜನರಿಗೆ ಲಭ್ಯವಾಗಲಿದೆ.ದೇಶಾದ್ಯಂತ ಕಿಯೋಸ್ಕ್‍ಗಳನ್ನು ತೆರೆಯುವುದು ಕಂಪೆನಿಯ ಯೋಜನೆಯಲ್ಲಿದೆ.
*ಅಶೋಕ್‍ಕುಮಾರ್