ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.

ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.

ಇದನ್ನು ರವಿಕೆರೆಡ್ಡಿಯವರ ಬ್ಲಾಗ್ ಬರಹಕ್ಕೆ ಟಿಪ್ಪಣಿಯಾಗಿ ಸೇರಿಸಿದ್ದೆ. ಇನ್ನೂ ಹೆಚ್ಚ್ಜಿನ ಕಣ್ಣುಗಳು ಇದರ ಮೇಲೆ ಬೀಳಬಹುದೆಂಬ ಆಶಯದಲ್ಲಿ ಇಲ್ಲಿ ಮತ್ತೆ ಬರೆಯುತ್ತಿದ್ದೇನೆ:


ಸಂಪದಿಗರೆ, 

ಕನ್ನಡ ಸಂಸ್ಕೃತಿ ಇಲಾಖೆಯ ಕನ್ನುಡಿ.ಆರ್ಗ್, ದಾಸಸಾಹಿತ್ಯ.ಆರ್ಗ್ ಮೊದಲಾದುವು ಮಾಯವಾದದ್ದರಬಗ್ಗೆ ಬಹಳ ಖೇದವಿದೆ ನನಗೆ. ಇಷ್ಟು ಬೇಜವಾಬ್ದಾರಿಯಿಂದ ಹೇಗೆ ತಾನೇ ನಡೆದುಕೊಳ್ಳುತ್ತಾರೋ?

ಅದಕ್ಕೆಂದೇ, ಪುರಂದರದಾಸರ ಪದಗಳನ್ನು ರಸಿಕ ಫೋರಮ್ ನ ( http://www.rasikas.org/ ) ವಿಕಿಯಲ್ಲಿ (http://www.rasikas.org/wiki/purandara-compositions) ಹಾಕುವ ಕೆಲಸವನ್ನು ಕೈಗೊಳ್ಳಲಾಗಿದೆ. ಈ ಜಾಲತಾಣ ಸಂಗೀತಾಸಕ್ತರ ತಾಣ. ಹಲವು ಭಾಷೆಗಳನ್ನಾಡುವ ಜನರಿಗೆ ಉಪಯೋಗವಾಗಲೆಂದು, ಹಾಡುಗಳನ್ನು ಇಂಗ್ಲಿಷ್, ಕನ್ನಡ, ದೇವನಾಗರಿ ಮತ್ತು ಇತರ ದಕ್ಷಿಣ ಭಾರತದ ಲಿಪಿಗಳಲ್ಲಿ ಕೊಡುವ ಮತ್ತು ಅರ್ಥವನ್ನೂ ಇಂಗ್ಲಿಷಿನಲ್ಲಿ ಕೊಡುವ ಉದ್ದೇಶವಿದೆ (ಉದಾಹರಣೆಗೆ ಈ ಪುಟ ನೋಡಿ: http://www.rasikas.org/wiki/mullu-koneya .) ಸದ್ಯಕ್ಕೆ ಈಗ ಕೆಲವೇ ಹಾಡುಗಳು ಮಾತ್ರ ಇಲ್ಲಿ ಲಭ್ಯವಿದೆ. ರಸಿಕರೊಬ್ಬರು ತಯಾರಿಸಿರುವ ಸಲಕರಣೆ ಒಂದರ ಸಹಾಯದಿಂದ ಒಂದೇ ಸಲಕ್ಕೆ ಒಂದು ಲಿಪಿಯಿಂದ (ಉದಾಹರಣೆಗೆ ಕನ್ನಡ, ಇಂಗ್ಲಿಷ್) ಉಳಿದೆಲ್ಲ ಲಿಪಿಗಳಿಗೆ ( ಉದಾ: ತಮಿಳು, ದೇವನಾಗರಿ, ತೆಲುಗು, ಮಲೆಯಾಳಂ) ಪರಿವರ್ತಿಸುವ ಸೌಲಭ್ಯವಿದೆ.

ನಿಮ್ಮಲ್ಲಿ ಯಾರಿಗಾದರೂ ಈ ಕೆಲಸದಲ್ಲಿ ಪಾಲ್ಗೊಳ್ಳಲು ಆಸಕ್ತಿ (ಇದು ಬಹಳ ಮುಖ್ಯ) , ಸಮಯ (ಇದು ಎಷ್ಟೇ ಕಡಿಮೆ ಇದ್ದರೂ, ಪರವಾಗಿಲ್ಲ! ಹನಿ-ಹನಿಗೂಡಿದರೆ ಹಳ್ಳ ಎಂಬ ಮಾತು ಕೇಳಿಲ್ಲವೇ?) ಇರುವವರು ದಯವಿಟ್ಟು ನನ್ನನ್ನು ಎ-ಮೆಯ್ಲ್ ಮೂಲಕ ಸಂಪರ್ಕಿಸಿ (hamsanandi_ಎಟ್_ಜಿಮೆಯ್ಲ್.com) . ನನ್ನ ಬಳಿ ಹಾಡುಗಳ ಸಾಹಿತ್ಯ ಇಂಗ್ಲಿಷ್ ನಲ್ಲಿ ಟೈಪ್ ಮಾಡಿರುವುದು ಇದೆ. ಇದರಲ್ಲಿ ಹಲವು ಕಡೆ ತಿದ್ದುಪಡಿ ಆಗಬೇಕಿದೆ. ಹಾಡುಗಳನ್ನು ಓದಿ, ತಿದ್ದಿ, ಬೇರೆ ಲಿಪಿಗಳಿಗೆ (ಸಾಫ್ಟ್ವೇರ್ ಸಹಾಯದಿಂದ) ಪರಿವರ್ತಿಸಿ, ಅದನ್ನು ವಿಕಿಗೆ ಎತ್ತೇರಿಸಬೇಕಾದ್ದು ನಮ್ಮ ಮುಂದಿರುವ ಕೆಲಸ. ಇದನ್ನು ಕನ್ನಡ ಅರ್ಥವಾಗುವವರು ಮಾತ್ರ ಮಾಡಲು ಸಾಧ್ಯ.

ಸಾಧಾರಣವಾದ ಕನ್ನಡ ತಿಳಿವು ಇದ್ದವರು ಯಾರು ಬೇಕಾದರೂ ಇದರಲ್ಲಿ ಕೈಹಾಕಬಹುದು. ಸಂಗೀತ ಸಂಬಂಧಿ ವಿಷಯಗಳಿಗೆ, ಮತ್ತು ಹೆಚ್ಚುವರಿ ತಿದ್ದುಪಡಿಗಳಿಗೆ ನನ್ನ ಸಹಾಯ ಇದ್ದೇ ಇರುತ್ತೆ Smiling

ಇದು ಕನ್ನಡಕ್ಕೆ, ಕರ್ನಾಟಕ ಸಂಗೀತಕ್ಕೆ ನಾವು ಮಾಡಬಹುದಾದ ಅಳಿಲುಸೇವಗಳಲ್ಲಿ ಒಂದು!

-ಹಂಸಾನಂದಿ

Rating
No votes yet

Comments