ಕಡಲ ಕಿನಾರೆ
ಬರಹ
ಕಡಲ ಕಿನಾರೆ
ಅದ್ಭುತ ಜಲಧಾರೆ
ಹೊಮ್ಮುವ ಹಾಲಿನ ನೊರೆ
ಆನಂದದ ಅಮೃತಧಾರೆ
ಸನಿ ಸನಿ ಅಲೆಗಳ ಚಲನ
ಜುಮ್ಮನೆರಗುವಾಲಿಂಗನ
ಮತ್ತದೇ ಸಿಹಿ ಚುಂಬನ
ತೆಲಾಡುತಿದೆ ಎನ್ನ ಮನ
ಸುಯ್ಯನೆ ನುಸುಳುವ ತಂಗಾಳಿ
ಹಾರುವ ಹಕ್ಕಿಯ ರಂಗೋಲಿ
ಒಡಲು ತೂಗುವ ಉಯ್ಯಾಲೆ
ಹಾಡುವೆನಾ ಅಕ್ಷರಮಾಲೆ